ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಫೀಜ್ ನಿಂದ ಹೊಸ ಸಂಘಟನೆ ತೆಹ್ರೀಕ್ ಆಜಾದಿ ಜಮ್ಮು ಅಂಡ್ ಕಾಶ್ಮೀರ್

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 4: ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಭಾಗವಾದ ಜಮಾತ್-ಉದ್-ದವಾ ತನ್ನ ಹೆಸರನ್ನು ತೆಹ್ರೀಕ್ ಆಜಾದಿ ಜಮ್ಮು ಅಂಡ್ ಕಾಶ್ಮೀರ್ ಎಂದು ಬದಲಿಸಿಕೊಂಡಿದೆ. ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ನ ಗೃಹ ಬಂಧನ ಆದ ಒಂದು ದಿನದ ನಂತರ ಈ ಘೋಷಣೆ ಹೊರಬಿದ್ದಿದೆ.

ಮುಂಬೈ ದಾಳಿಯ ಪ್ರಮುಖ ಸೂತ್ರಧಾರ ಹಫೀಜ್ ಸಯೀದ್ ನ ಗೃಹ ಬಂಧನದ ವಾರಕ್ಕೂ ಮುನ್ನ ಹೊಸ ಸಂಘಟನೆ ಆರಂಭದ ಬಗ್ಗೆ ಆತ ಸೂಚನೆ ನೀಡಿದ್ದ. ಅಧಿಕಾರಿಗಳ ಯೋಜನೆ ಬಗ್ಗೆ ಹಫೀಜ್ ಸಯೀದ್ ಗೆ ಮುಂಚೆಯೇ ತಿಳಿದಿತ್ತು ಎಂಬುದು ಇದರಿಂದಲೇ ಗೊತ್ತಾಗುತ್ತದೆ.['ಭಯೋತ್ಪಾದನೆ ಪ್ರಾಯೋಜಿತ ದೇಶ ಪಾಕಿಸ್ತಾನ' ಮಸೂದೆ ಮಂಡಿಸಿದ ರಾಜೀವ್ ಚಂದ್ರಶೇಖರ್]

Hafiz Saeed's Terror Group Jamaat-ud-Dawa Renamed

ಆ ಕಾರಣಕ್ಕೆ ಮುಂಚೆಯೇ ಸಿದ್ಧನಾಗಿ ಜಮಾತ್-ಉದ್-ದವಾ ಹಾಗೂ ಫಲಾ-ಇ-ಇನ್ಸಾನಿಯತ್ ಫೌಂಡೇಷನ್ ಗೆ ಪರ್ಯಾಯವಾಗಿ ಮತ್ತೊಂದು ಸಂಘಟನೆಯನ್ನು ಕೂಡಲೇ ಹುಟ್ಟು ಹಾಕಿದ್ದಾನೆ. ಎರಡೂ ಸಂಘಟನೆಗಳೂ ಅದಾಗಲೇ ಹೊಸ ಹೆಸರಿನಲ್ಲಿ ಚಟುವಟಿಕೆಗಳನ್ನು ಆರಂಭಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೆಬ್ರವರಿ 5ರಿಂದ ಹೊಸ ಸಂಘಟನೆಯ ಬಗ್ಗೆ ಪ್ರಚಾರಕ್ಕೆ ಸಭೆಯನ್ನು ಆಯೋಜಿಸಲು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಗಳನ್ನು ಹಾಕಲಾಗಿದೆ. ಜಮ್ಮು-ಕಾಶ್ಮೀರದ ಬಗ್ಗೆ ಸಭೆಯೊಂದನ್ನು ಫೆಬ್ರವರಿ 5ರಂದು ಲಾಹೋರ್ ನಲ್ಲಿ ಆಯೋಜಿಸಲಾಗಿದೆ.[ಪಾಕಿಸ್ತಾನ ಸೇರಿದಂತೆ 5 ದೇಶಗಳ ಪ್ರಜೆಗಳಿಗೆ ಕುವೈತ್ ಪ್ರವೇಶವಿಲ್ಲ]

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಹಾಗೂ ಲಾಹೋರ್ ನಲ್ಲಿ ತೆಹ್ರೀಕ್ ಆಜಾದಿ ಜಮ್ಮು ಅಂಡ್ ಕಾಶ್ಮೀರ್ ಸಂಘಟನೆಗೆ ದೇಣಿಗೆ ಸಂಗ್ರಹಿಸಲು ಆರಂಭಿಸಲಾಗಿದೆ. ಆಂತರಿಕ ಸಚಿವಾಲಯವು ಹಫೀಜ್ ಸಯೀದ್ ಮತ್ತು ಇತರ ಮೂವತ್ತೇಳು ಜೆಯುಡಿ ಮತ್ತು ಎಫ್ ಐಎಫ್ ಸದಸ್ಯರಿಗೆ ಪಾಕಿಸ್ತಾನ ಬಿಟ್ಟು ತೆರಳದಂತೆ ನಿರ್ಬಂಧ ಹೇರಲಾಗಿದೆ.

English summary
Terrorist group Jamaat-ud-Dawa, which is part of the Lashkar-e-Taiba, has renamed itself as 'Tehreek Azadi Jammu and Kashmir', days after its chief Hafiz Saeed was put under house arrest and a crackdown launched on the terror group's activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X