ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಫೀಜ್ ಸಯೀದ್ ಹಾಗೂ ಸಹಚರರ ಮೇಲೆ ಮುರಕೊಂಡು ಬಿದ್ದ ಪಾಕಿಸ್ತಾನ

|
Google Oneindia Kannada News

ಜಾಗತಿಕ ಮಟ್ಟದ ಒತ್ತಡಕ್ಕೆ ಅಂತೂ ಪಾಕಿಸ್ತಾನ ಮಣಿದಿದೆ. ಭಯೋತ್ಪಾದನಾ ವಿರೋಧಿ ದಳದಿಂದ ಬುಧವಾರದಂದು ಪಂಜಾಬ್ ಪ್ರಾಂತ್ಯದಲ್ಲಿ ಹಫೀಜ್ ಸಯೀದ್ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. 26/11 ಮುಂಬೈ ಭಯೋತ್ಪಾದನೆ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ವಿರುದ್ಧ ಉಗ್ರವಾದಕ್ಕೆ ಹಣಕಾಸು ನೆರವು ಸೇರಿ ಹಲವು ಪ್ರಕರಣ ದಾಖಲು ಮಾಡಲಾಗಿದೆ.

ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಪ್ರಕಾರ, ಹಫೀಜ್ ಸಯೀದ್ ಹಾಗೂ ಜೈಷ್ ಇ ಮೊಹ್ಮದ್ ನ ಆತನ ಇತರ ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ. ಭಯೋತ್ಪಾದನೆ ಪ್ರಚಾರ ಹಾಗೂ ಭಯೋತ್ಪಾದನಾ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಹಣಕಾಸು ಸಂಗ್ರಹ ಮಾಡಿದ ಆರೋಪ ಮಾಡಲಾಗಿದೆ.

ಆರೋಪ ಪಟ್ಟಿಯ ಪ್ರಕಾರ, ಧರ್ಮಾರ್ಥ ಸಂಸ್ಥೆಗಳಂತೆ ಹೊರ ಜಗತ್ತಿಗೆ ಕಾಣಿಸಿಕೊಳ್ಳುತ್ತಿದ್ದ ಇವು, ಶಂಕಿತ ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸುವಲ್ಲಿ ತೊಡಗಿಸಿಕೊಂಡಿತ್ತು. ಭಯೋತ್ಪಾದನಾಅ ವಿರೋಧಿ ಕಾಯ್ದೆ ಅಡಿಯಲ್ಲಿ ಲಾಹೋರ್, ಗುಜ್ರಾನ್ ವಾಲಾ ಮತ್ತು ಮುಲ್ತಾನ್ ನಲ್ಲಿನ ಐದು ಸಂಸ್ಥೆಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.

Hafiz Saeed and his aid booked for terror funding in Pakistan

ದಾವತ್ ಉಲ್ ಇರ್ಷಾದ್ ಟ್ರಸ್ಟ್, ಮೊವಾಜ್ ಬಿನ್ ಜಬಲ್ ಟ್ರಸ್ಟ್, ಅಲ್ ಅನ್ಫಾಲ್ ಟ್ರಸ್ಟ್ ಅಲ್ ಮದೀನಾ ಫೌಂಡೇಷನ್ ಟ್ರಸ್ಟ್ ಹಾಗೂ ಅಲ್ ಹಮ್ದ್ ಟ್ರಸ್ಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಾಷಿಂಗ್ಟನ್ ನಲ್ಲಿ ಬುಧವಾರ ಐಎಂಎಫ್ ಹಾಗೂ ಪಾಕಿಸ್ತಾನದ ಮಧ್ಯೆ ಮಾತು ಕತೆ ಇದ್ದು, ತುಂಬ ಪ್ರಮುಖವಾದ ಆರ್ಥಿಕ ನೆರವಿನ ಬಗ್ಗೆ ನಿರ್ಧಾರ ಆಗಬೇಕಿದೆ. ಅದಕ್ಕೂ ಮುನ್ನ ಈ ಕಾರ್ಯಾಚರಣೆ ಪಾಕಿಸ್ತಾನದಲ್ಲಿ ಉಗ್ರರ ವಿರುದ್ಧ ನಡೆದಿದೆ.

ಜಾಗತಿಕ ಮಟ್ಟದಲ್ಲಿ ಒತ್ತಡ ಬಂದ ಕಾರಣ ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನವು ಹಫೀಜ್ ಸಯೀದ್ ಗೆ ಸಂಬಂಧಪಟ್ಟ ಜಮಾತ್-ಉದ್-ದವಾ ಹಾಗೂ ಅದರ ಧರ್ಮ ಸಂಸ್ಥೆ ಫಲ್ಹಾ-ಇ-ಇನ್ಸಾನಿಯತ್ ಫೌಂಡೇಷನ್ ಮೇಲೆ ನಿಷೇಧ ಹೇರಿತ್ತು. ಅಂದಹಾಗೆ ಹಫೀಜ್ ಸಯೀದ್ ಹಲವು ಉಗ್ರ ದಾಳಿಯಲ್ಲಿ ಭಾಗಿ ಆಗಿದ್ದಾನೆ. ಆತನ ತಲೆಗೆ ಅಮೆರಿಕವು ಹತ್ತು ಮಿಲಿಯನ್ ಡಾಲರ್ ಘೋಷಿಸಿದೆ.

English summary
Hafiz Saeed and his aid booked for terror funding in Pakistan on Wednesday. Here is the complete detail of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X