ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ದಾಳಿ ನಲುಗಿದ ಮನಿಲಾ ರೆಸಾರ್ಟಿನಲ್ಲಿ 36 ಶವ ಪತ್ತೆ

ಎಂದಿನಂತೆ ಗುರುವಾರ ರಾತ್ರಿಯೂ ಜನರಿಂದ ತುಂಬಿದ್ದ ರೆಸಾರ್ಟ್ ನಲ್ಲಿ ಗುಂಡಿನ ದಾಳಿ ಶುರುವಾಗಿದೆ. ರೆಸಾರ್ಟ್ ನ ಒಂದು ಭಾಗದಲ್ಲಿ ಸ್ಫೋಟ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಐಎಸ್ ಉಗ್ರ ಸಂಘಟನೆ ದಾಳಿ ಹೊಣೆ ಹೊತ್ತಿದೆ.

|
Google Oneindia Kannada News

ಮನಿಲಾ (ಫಿಲಿಪ್ಪೀನ್ಸ್), ಜೂನ್ 2: ಇಲ್ಲಿನ 'ರೆಸಾರ್ಟ್ಸ್ ವರ್ಲ್ಡ್ ಮನಿಲಾ' ಎಂಬ ಹೋಟೆಲ್-ಕಂ- ರೆಸಾರ್ಟ್ ಮೇಲೆ ಜೂನ್ 1ರ ಮಧ್ಯರಾತ್ರಿ ಭಯೋತ್ಪಾದಕರಿಂದ ಗುಂಡಿನ ದಾಳಿ ನಡೆದಿತ್ತು. ಈ ದುರ್ಘಟನೆಯಲ್ಲಿ 36 ಜನ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಎಲ್ಲರ ಶವಗಳು ಸಿಕ್ಕಿವೆ.

ಘಟನೆಯ ಹೊಣೆಯನ್ನು ಐಎಸ್ಐಎಸ್ ಉಗ್ರರು ಹೊತ್ತುಕೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಕೆಲವು ವರದಿಗಳ ಪ್ರಕಾರ, ವಿಶಾಲವಾಗಿದ್ದ ಆ ರೆಸಾರ್ಟ್ ನ ಒಂದು ಭಾಗದಲ್ಲಿ ಭಾರೀ ಸ್ಫೋಟ ನಡೆದಿದ್ದನ್ನು ರೆಸಾರ್ಟ್ ನ ಹೊರಗಡೆ ಇದ್ದ ಜನರು ನೋಡಿ ಗಾಬರಿಯಾಗಿ ಓಡಿದ್ದಾರೆ ಎಂದು 'ದ ಸನ್' ವರದಿ ಮಾಡಿದೆ.

ಘಟನೆಯಲ್ಲಿ ಸಾವು ನೋವಿನ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ಗುಂಡಿನ ದಾಳಿಗೆ ಸುಮಾರು 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆಂದು 'ಯುಎಸ್ ಎ ಟುಡೇ' ಹೇಳಿದೆ.

Gunshots, blasts erupt at Resorts World Manila in Philippines

ಸುದ್ದಿ ತಿಳಿದ ತಕ್ಷಣವೇ ರೆಸಾರ್ಟ್ ಅನ್ನು ಸುತ್ತುವರಿದಿರುವ ಪೊಲೀಸರು, ರೆಸಾರ್ಟ್ ಒಳಗಡೆ ಹೋಗಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ನಿರತರಾಗಿದ್ದರು.

ದಕ್ಷಿಣ ಫಿಲಿಪ್ಪೀನ್ಸ್ ನಲ್ಲಿ ಐಎಸ್ ಐಎಸ್ ಉಗ್ರರ ಹಾವಳಿ ಇತ್ತೀಚೆಗೆ ಹೆಚ್ಚಾದ ಹಿನ್ನೆಲೆಯಲ್ಲಿ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ಡ್ಯುಟೆರ್ಟಿ ಅವರು ಆ ಭಾಗದಲ್ಲಿ ಕೆಲವಾರು ಕಟ್ಟುನಿಟ್ಟಿನ ಕಾನೂನು ಹಾಗೂ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ 'ನ್ಯೂ ಸ್ಟೋರಿ' ಜಾಲತಾಣ ವರದಿ ಮಾಡಿದೆ.

ಏತನ್ಮಧ್ಯೆ, ಪೊಲೀಸ್ ಅಧಿಕಾರಿಯೊಬ್ಬರು ರೆಸಾರ್ಟ್ ನ ಒಳಗೆ ಯಾವುದೇ ಸಾವು ಆಗಿಲ್ಲ ಎಂದು ತಿಳಿಸಿರುವುದಾಗಿ ಖ್ಯಾತ ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿದೆ.

English summary
Gunshots, explosions and a fire erupted early Friday at the sprawling Resorts World Manila, a casino and resort on Manila Bay in the Philippines, leaving dozens of people injured, according to media reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X