ಅಫ್ಘಾನಿಸ್ತಾನ: ಖಾಸಗಿ ಟಿವಿ ವಾಹಿನಿ ಮೇಲೆ ಆತ್ಮಹತ್ಯಾ ದಾಳಿ

Posted By:
Subscribe to Oneindia Kannada

ಕಾಬೂಲ್, ಮೇ 17: ಪದೇ ಪದೇ ಉಗ್ರರ ದಾಳಿಗೆ ತುತ್ತಾಗುತ್ತಲೇ ಇರುವ ಅಫ್ಘಾನಿಸ್ತಾನದಲ್ಲಿ ಬುಧವಾರ ಮತ್ತೆ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ.

ಈ ಬಾರಿ, ಜಲಾಲಾಬಾದ್ ನಲ್ಲಿರುವ ಸರ್ಕಾರದ ಒಡೆತನದಲ್ಲಿರುವ ಟಿವಿ ಚಾನೆಲ್ ಮೇಲೆ ದಾಳಿ ನಡೆಸಲಾಗಿದೆ. ದಾಳಿ ನಡೆದ ಕೆಲ ಹೊತ್ತಿನಲ್ಲೇ ಟಿವಿ ಚಾನೆಲ್ ಕಚೇರಿಯಿರುವ ಕಟ್ಟಡವನ್ನು ಸುತ್ತುವರಿದಿರುವ ಭದ್ರತಾ ಪಡೆಗಳು ಉಗ್ರರೊಂದಿಗೆ ಗುಂಡಿನ ಚಕಮಕಿಯಲ್ಲಿ ನಿರತವಾಗಿವೆ.

Gunmen storm Afghanistan’s state TV station, two attackers blow themselves up

ಕೆಲ ಹೊತ್ತು ಗುಂಡಿನ ದಾಳಿ ನಡೆಸಿದ ನಂತರ, ಈ ಮೂವರಲ್ಲಿ ಇಬ್ಬರು ಉಗ್ರರು ಕಚೇರಿಯೊಳಗೇ ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಆದರೆ, ಮತ್ತೊಬ್ಬ ಮಾತ್ರ ತನ್ನ ದಾಳಿ ಮುಂದುವರಿಸಿದ್ದಾನೆ.

ಸುಮಾರು ಮೂವರು ದಾಳಿಕೋರರು ಟಿವಿ ವಾಹಿನಿ ಕಚೇರಿಯೊಳಕ್ಕೆ ಬೆಳಗ್ಗೆಯೇ ನುಗ್ಗಿದ್ದಾರೆ. ಕಾಬೂಲ್ ಗೆ ಹತ್ತಿರದಲ್ಲೇ ಇರುವ ನಂಗಾರಾಹಾರ್ ಪ್ರಾಂತ್ಯದ ರಾಜಧಾನಿ ಜಲಾಲಾಬಾದ್ ನಲ್ಲಿರುವ ರಾಜ್ಯಪಾಲರ ನಿವಾಸದ ಕಾಂಪೌಂಡಿಗೆ ಅಂಟಿಕೊಂಡಂತೇ ಇರುವ ಈ ಟಿವಿ ಚಾನೆಲ್ ಕಟ್ಟಡದ ಮೇಲೆ ದಾಳಿಯಾಗಿರುವುದು ಎಲ್ಲರನ್ನೂ ದಿಗ್ಭ್ರಮೆಗೊಳಪಡಿಸಿದೆ ಎಂದು ಆಫ್ಘಾನಿಸ್ತಾನದ ಭದ್ರತಾ ಪಡೆಗಳ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gunmen attacked a building of Afghan state television in the eastern city of Jalalabad on Wednesday and engaged in a gun battle with security forces, the provincial governor’s spokesman said.
Please Wait while comments are loading...