ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಪ್ಪೀನ್ಸ್: 5 ಜನರನ್ನು ಒತ್ತೆಯಾಳಾಗಿಟ್ಟುಕೊಂಡ ಬಂದೂಕುಧಾರಿಗಳು

By Sachhidananda Acharya
|
Google Oneindia Kannada News

ಮನೀಲಾ, ಜೂನ್ 21: ಫಿಲಿಪ್ಪೀನ್ಸ್ ನ ಗ್ರಾಮವೊಂದರ ಶಾಲೆಯಲ್ಲಿ ಜನರನ್ನು ಬಂದೂಕುಧಾರಿಗಳು ಒತ್ತೆಯಾಳಾಗಿರಿಸಿಕೊಂಡಿದ್ದಾರೆ.

ಇಲ್ಲಿನ ಪಿಗ್ಕವಯಾನ್ ನಗರಕ್ಕೆ ಸಮೀಪದಲ್ಲಿರುವ ಮಲಗಕಿಟ್ ಪ್ರದೇಶದಲ್ಲಿನ ಶಾಲೆಯೊಂದರಲ್ಲಿ ಜನರನ್ನು ಒತ್ತೆಯಾಳಾಗಿರಿಸಿಕೊಳ್ಳಲಾಗಿದೆ. ಬಂಗಸ್ಮೋರೋ ಇಸ್ಲಾಮಿಕ್ ಫ್ರೀಡಂ ಫೈಟರ್ಸ್ (BIFF) ತಂಡ ಈ ಜನರನ್ನು ಒತ್ತೆಯಾಳಾಗಿರಿಸಿಕೊಂಡಿದೆ ಎಂದು ಹೇಳಲಾಗಿದೆ.

Gunmen occupied a school and five civilians were taken hostage in Philippines

ಸುಮಾರು 200 ಜನ ಬಂದೂಕುಧಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ಪಿಗ್ಕವಯಾನ್ ನಗರ ಮೇಯರ್ ಹೇಳಿದ್ದಾರೆ. ಮೂಲಗಳ ಪ್ರಕಾರ ಐವರು ನಾಗರೀಕರನ್ನು ಬಂದೂಕುಧಾರಿಗಳು ಹಿಡಿದಿಟ್ಟುಕೊಂಡಿದ್ದಾರೆ. ಇನ್ನು ಘಟನೆಯಲ್ಲಿ ಯಾರೊಬ್ಬರೂ ಸತ್ತ ವರದಿಯಾಗಿಲ್ಲ.

ಇನ್ನು ಕಳೆದ ವಾರ ಅಲ್ಲಿನ ಅಧ್ಯಕ್ಷ ರೊಡ್ರಿಗೋ ದುತಾರ್ತೆ ದಕ್ಷಿಣ ಫಿಲಿಪ್ಪೀನ್ಸ್ ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ರು. ಐಸಿಸ್ ಬಂಬಲಿತ ಉಗ್ರರು ಮರಾವಿ ನಗರವನ್ನು ವಶಕ್ಕೆ ಪಡೆದುಕೊಂಡ ಬೆನ್ನಿಗೇ ಈ ಘೋಷಣೆ ಮಾಡಿದ್ದರು.

ಮರಾವಿ ನಗರದಲ್ಲಿ ಐಸಿಲ್ ಬೆಂಬಲಿತ ಉಗ್ರರು ಮತ್ತು ಫಿಲಿಪ್ಪೀನ್ಸ್ ಪಡೆಗಳ ಮಧ್ಯೆ ಕಳೆದ 5 ವಾರಗಳಿಂದ ಹೋರಾಟ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಈ ಶಾಲೆ ಮೇಲಿನ ದಾಳಿಯನ್ನು ನೋಡಲಾಗುತ್ತಿದೆ.

English summary
Gunmen have occupied a school and five civilians were taken hostage in Philippines. Suspected members of the Bangsamoro Islamic Freedom Fighters (BIFF) group were engaged in a gun battle with security forces at Malagakit, close to Pigcawayan town were school was located.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X