ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿಯ ಅಮೆರಿಕಾ ರಾಯಭಾರ ಕಚೇರಿಗೆ ಬಂದೂಕುಧಾರಿ ನುಗ್ಗಲು ಯತ್ನ

ಟರ್ಕಿ ದೇಶದ ಅಂಕಾರದಲ್ಲಿ ರಷ್ಯಾ ರಾಯಭಾರಿಯ ಹತ್ಯೆಯಾದ ಕೆಲ ಗಂಟೆಗಳಲ್ಲಿ ಅಮೆರಿಕ ರಾಯಭಾರ ಕಚೇರಿಗೆ ನುಗ್ಗಲು ಬಂದೂಕುಧಾರಿಯೊಬ್ಬ ಯತ್ನಿಸಿದ್ದಾನೆ. ಆತನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

|
Google Oneindia Kannada News

ಅಂಕಾರ, ಡಿಸೆಂಬರ್ 20: ಶಸ್ತ್ರಸಜ್ಜಿತವಾಗಿದ್ದ ವ್ಯಕ್ತಿಯೊಬ್ಬ ಟರ್ಕಿಯ ಅಂಕಾರದ ಅಮೆರಿಕಾ ರಾಯಭಾರ ಕಚೇರಿಗೆ ಪ್ರವೇಶಿಸಲು ಯತ್ನಿಸುವಾಗ ಬಂಧಿಸಲಾಗಿದೆ. ರಷ್ಯಾದ ರಾಯಭಾರಿಯನ್ನು ಗುಂಡಿಟ್ಟು ಹತ್ಯೆಗೈದ ಕೆಲ ಗಂಟೆಗಳ ನಂತರ ಈ ಘಟನೆ ನಡೆದಿದೆ. ರಷ್ಯಾ ರಾಯಭಾರಿಯ ಹತ್ಯೆ ನಂತರ ಅಮೆರಿಕ ರಾಯಭಾರ ಕಚೇರಿಗೆ ಬೀಗ ಹಾಕಲಾಗಿತ್ತು.

ಶಸ್ತ್ರಸಜ್ಜಿತ ವ್ಯಕ್ತಿಯು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಕೂಡಲೇ ಆತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಪಾಸಣೆ ಕಾರಣಗಳಿಗಾಗಿ ಸಿಬ್ಬಂದಿಗೆ ಆ ಕೂಡಲೇ ಸ್ಥಳ ತೆರವು ಮಾಡಿಸಲಾಗಿದೆ. ರಷ್ಯಾ ರಾಯಭಾರಿ ಹತ್ಯೆಯಾದ ಸ್ಥಳದಿಂದ ಕೇವಲ ಎರಡೂವರೆ ಮೈಲುಗಳಷ್ಟು ದೂರದಲ್ಲಿ ಅಮೆರಿಕಾ ರಾಯಭಾರ ಕಚೇರಿಯಿದೆ.[ಟರ್ಕಿಯ ರಷ್ಯನ್ ರಾಯಭಾರಿಯನ್ನು ಕೊಂದ ಅಂಗರಕ್ಷಕ]

Gunman opens fire and tries to storm US embassy in Ankara

ರಷ್ಯನ್ ರಾಯಭಾರಿಗೆ ಹಿಂದಿನಿಂದ ಐದು ಬಾರಿ ಗುಂಡು ಹಾರಿಸಿದ ಗನ್ ಮ್ಯಾನ್ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಮಾಡಿದ್ದ. ಹಂತಕನನ್ನು ಟರ್ಕಿ ಪೊಲೀಸ್ ಅಧಿಕಾರಿ, ಇಪ್ಪತ್ತೆರಡು ವರ್ಷದ ಮೇವ್ಲುಟ್ ಮೆರ್ಟ್ ಅಲ್ಟಿಂಟಾಸ್ ಎಂದು ಗುರುತಿಸಲಾಗಿದ್ದು, ಅತನನ್ನು ಅಲ್ಲೇ ಕೊಲ್ಲಲಾಗಿದೆ.

ಎರಡೂ ಘಟನೆಗಳಿಗೆ ಸಂಬಂಧವಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಟರ್ಕಿ ದೇಶದಲ್ಲಿ ಎಚ್ಚರವಾಗಿರುವಂತೆ ಅಮೆರಿಕ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.

English summary
AN armed gunman has been arrested after attempting to enter the US embassy in Ankara with a weapon just hours after a Russian ambassador was assassinated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X