ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ : ಶ್ವೇತ ಭವನ ಬಳಿ ಫೈರಿಂಗ್

By Mahesh
|
Google Oneindia Kannada News

ವಾಷಿಂಗ್ಟನ್, ಸೆ.17: ಇಲ್ಲಿನ ನೇವಿ ಯಾರ್ಡ್ ನಲ್ಲಿ ಅಜ್ಞಾತ ಬಂದೂಕುಧಾರಿಗಳು ಸೋಮವಾರ ನಡೆಸಿದ ಗುಂಡಿನ ದಾಳಿಗೆ ಸುಮಾರು 12 ಮಂದಿ ಮೃತಪಟ್ಟಿದ್ದಾರೆ. ಸೇನಾ ಸಂಕೀರ್ಣದಲ್ಲಿ ನಡೆದಿರುವ ಘಟನೆಯನ್ನು ಒಂದು ಹೇಡಿತನದ ಕೃತ್ಯವೆಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಕಟುವಾಗಿ ಟೀಕಿಸಿದ್ದಾರೆ.

ದಾಳಿಕಾರರಲ್ಲಿ ಒಬ್ಬ ಹತನಾಗಿದ್ದು, ಉಳಿದಿಬ್ಬರು ಶಂಕಿತರಿಗಾಗಿ ಪೊಲೀಸರು ವ್ಯಾಪಕ ಶೋಧಕಾರ್ಯ ನಡೆಸಿದ್ದಾರೆ ಎಂದು ಕೊಲಂಬಿಯ ಜಿಲ್ಲಾ ಪೊಲೀಸ್ ಮುಖ್ಯಸ್ಥ ಕ್ಯಾಥಿ ಲ್ಯಾನಿಯರ್ ಹೇಳಿದ್ದಾರೆ. ಗುಂಡಿನ ದಾಳಿಯ ಬಳಿಕ ಸುತ್ತುಮತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. [ಈ ಹಿಂದಿನ ದಾಳಿಯಲ್ಲಿ ಮೃತರ ಸಾವಿಗೆ ಕಂಬನಿ ಮಿಡಿದ ಒಬಾಮಾ ]

ಓರ್ವ ಬಂದೂಕುಧಾರಿ ಕಟ್ಟಡದ ಮೇಲಂತಸ್ತಿನಿಂದ ಕೆಳಭಾಗದಲ್ಲಿರುವ ಉಪಾಹಾರ ಗೃಹವನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದರೆ, ಇನ್ನೋರ್ವ ಬಂದೂಕುಧಾರಿಯು ಇನ್ನೊಂದು ಅಂತಸ್ತಿನ ಕೊಠಡಿಯಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದ್ದನು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನೇವಿ ಯಾರ್ಡ್ ನ ಸಂಕೀರ್ಣದಲ್ಲಿ ಘಟನೆಯ ವೇಳೆ ಸುಮಾರು 3 ಸಾವಿರ ಮಂದಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದರು ಎನ್ನಲಾಗಿದೆ. ಘಟನೆ ನಂತರದ ಚಿತ್ರಗಳು ಇಲ್ಲಿವೆ ನೋಡಿ..

[ಇದನ್ನೂ ಓದಿ]

ವಾಷಿಂಗ್ಟನ್ ನಲ್ಲಿ

ವಾಷಿಂಗ್ಟನ್ ನಲ್ಲಿ

ಯುಎಸ್ ಕಾಪಿಟೋಲ್ ಪೊಲೀಸ್ ಅಧಿಕಾರಿಗಳು ಶ್ವೇತಭವನ ಬಳಿಯ ಈಸ್ಟ್ ಪ್ಲಾಜಾ ಮೇಲೆ ನಿಗಾ ವಹಿಸಿದ್ದಾರೆ. ತನಿಖೆ ಮುಂದುವರೆದಿದೆ.

ಬಿಗಿ ಭದ್ರತೆ

ಬಿಗಿ ಭದ್ರತೆ

ಘಟನೆ ನಡೆದ ಸ್ಥಳದಿಂದ ನಾಗರೀಕರನ್ನು ಭದ್ರತೆ ನಡುವೆ ಕರೆದೊಯ್ಯುತ್ತಿರುವ ಸಿಬ್ಬಂದಿ

ಪೊಲೀಸ್ ಪಹರೆ

ಪೊಲೀಸ್ ಪಹರೆ

ವಾಷಿಂಗ್ಟನ್ ನೇವಿ ಯಾರ್ಡ್ ಸುತ್ತಾ ಪೊಲೀಸ್ ಪಹರೆ ಹಾಕಲಾಗಿದೆ.

ತುರ್ತು ಚಿಕಿತ್ಸೆ

ತುರ್ತು ಚಿಕಿತ್ಸೆ

ಘಟನಾ ಸ್ಥಳಕ್ಕೆ ಆಗಮಿಸಿದ ವೈದ್ಯರು ಸಂತ್ರಸ್ತರಿಗೆ ತುರ್ತು ವೈದ್ಯಕೀಯ ನೆರವು ನೀಡುತ್ತಿರುವ ದೃಶ್ಯ

ಹೆಲಿಕಾಪ್ಟರ್ ನೆರವು

ಹೆಲಿಕಾಪ್ಟರ್ ನೆರವು

ಯುಎಸ್ ಪಾರ್ಕ್ ಪೊಲೀಸ್ ಹೆಲಿಕಾಪ್ಟರ್ ಬಳಸಿ ಬಾಸ್ಕೆಟ್ ನಲ್ಲಿ ಹೂತಿದ್ದ ವ್ಯಕ್ತಿಯನ್ನು ಹೊರ ಬಿಟ್ಟರು.

ತುರ್ತು ಸೇವಾ ಸಿಬ್ಬಂದಿ

ತುರ್ತು ಸೇವಾ ಸಿಬ್ಬಂದಿ

ವಾಷಿಂಗ್ಟನ್ ಆಗ್ನೇಯ ಭಾಗದ ಎಂ ಸ್ಟ್ರೀಟ್ ನ ದೃಶ್ಯ. ನೇವಿ ಕಟ್ಟಡದ ಬಳಿ ದಾಳಿ ನಡೆಸಿದ ವ್ಯಕ್ತಿಗೆ ಭಾರಿ ಪೆಟ್ಟಾಗಿದೆ ಎಂದು ಯುಎಸ್ ನೇವಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಬಾಮಾ ಹೇಳಿಕೆ

ಒಬಾಮಾ ಹೇಳಿಕೆ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮಾತನಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕಾದಿದೆ. ಆತಂಕ ಬೇಡ ಎಂದು ಜನತೆಗೆ ಧೈರ್ಯ ತುಂಬಿದ್ದಾರೆ.

ವಾಷಿಂಗ್ಟನ್ ನಲ್ಲಿ

ವಾಷಿಂಗ್ಟನ್ ನಲ್ಲಿ ನಡೆದ ದಾಳಿ ಬಗ್ಗೆ ಸಿಎನ್ ಎನ್ ವರದಿ

English summary
At least 13 people, including a gunman, were killed and the police were looking for another suspect, in an audacious mass shooting at the high-security Washington Navy Yard located at a short distance from the White House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X