ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಢಾಕಾದಲ್ಲಿ ಉಗ್ರರ ದಾಳಿ: 60 ವಿದೇಶಿಗರು ಒತ್ತೆಯಾಳು

By Madhusoodhan
|
Google Oneindia Kannada News

ಢಾಕಾ, ಜುಲೈ, 01: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ದಳದ ನಡುವೆ ಶುಕ್ರವಾರ ರಾತ್ರಿ ಗುಂಡಿನ ಕಾಳಗ ನಡೆದಿದೆ.

ಘಟನೆಯಲ್ಲಿ ನಾಲ್ಕು ಜನ ಪೊಲೀಸರು ಗಂಭಿರವಾಗಿ ಗಾಯಗೊಂಡಿದ್ದಾರೆ. ದಾಳಿಕೋರರು 60 ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.[ರಂಜಾನ್ ತಿಂಗಳಲ್ಲಿ ಹೆಚ್ಚಾಗುತ್ತಿದೆ ಉಗ್ರರ ದಾಳಿ!]

dhaka

ಹೋಲಿ ಆರ್ಟಿಸನ್ ಬೇಕರಿ ರೆಸ್ಟೋರೆಂಟ್ ಸಮೀಪ ಭಯೋತ್ಪಾದಕ ದಾಳಿ ನಡೆದಿದ್ದು ವಿವಿಧ ದೇಶದ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ, 34 ದೇಶಗಳ ರಾಯಭಾರಿ ಕಚೇರಿ ಇರುವ ಪ್ರದೇಶದಲ್ಲಿ ದಾಳಿ ನಡೆದಿದೆ.[ಟರ್ಕಿಯ ಮೇಲೆ ದಾಳಿ ಮಾಡಿದ್ದ ಉಗ್ರರು]

ರೆಸ್ಟೋರೆಂಟ್ ಮೇಲೆ ಏಕಾಏಕಿ ದಾಳಿ ನಡೆಸಿದ ಉಗ್ರರು ವಿದೇಶಿಗರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಒತ್ತೆಯಾಳುಗಳಲ್ಲಿ ಭಾರತೀಯರು ಇರಬಹುದು ಎಂದು ಹೇಳಲಾಗಿದ್ದು ವಿವರ ತಿಳಿದು ಬರಬೇಕಿದೆ. ಘಟನೆಯಲ್ಲಿ ಕೆಲವು ನಾಗರಿಕರಿಗೂ ಗಂಭೀರ ಗಾಯವಾಗಿದೆ.

ಜಮ್ಮು ಕಾಶ್ಮೀರದ ಸೇನಾ ನೆಲೆ ಮೇಲೆ ದಾಳಿ
ಜಮ್ಮು ಕಾಶ್ಮೀರದ ಸೇನಾ ನೆಲೆಗಳ ಮೇಲೂ ಉಗ್ರರು ಶುಕ್ರವಾರ ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದರು. ಉಗ್ರರ ದಾಳಿಯಲ್ಲಿ ಮೂರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
A gun battle broke out between unidentified attackers and the law keepers in the diplomatic circle of the Bangladeshi capital on Friday night, officials said. Four policemen were injured in the fight and the condition of one was serious.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X