ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌: ವ್ಯಕ್ತಿಯನ್ನು ಹೀನಾಯವಾಗಿ ಥಳಿಸಿದ ಪೊಲೀಸ್ ಇನ್ಸ್‌ಪೆಕ್ಟರ್: ತನಿಖೆಗೆ ಆದೇಶ

|
Google Oneindia Kannada News

ಅಹಮದಾಬಾದ್, ಅಕ್ಟೋಬರ್ 7: ಗುಜರಾತ್‌ನ ಖೇಡಾದಲ್ಲಿ ಗರ್ಬಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೆಲವು ಮುಸ್ಲಿಂ ಪುರುಷರನ್ನು ಪೊಲೀಸರು ಥಳಿಸಿರುವ ಘಟನೆ ನಡೆದಿದೆ. ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ಪುರುಷರನ್ನು ಕಂಬಗಳಿಗೆ ಕಟ್ಟಿ ಹಾಕಿ ದೊಣ್ಣೆಗಳಿಂದ ಥಳಿಸುತ್ತಿರುವ ದೃಶ್ಯ ವೈರಲ್ ಆಗಿದ್ದು, ಸ್ಥಳೀಯರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಪೊಲೀಸ್ ಮುಖ್ಯಸ್ಥ ಆಶಿಶ್ ಭಾಟಿಯಾ ನಿನ್ನೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. "ನಾನು ತನಿಖೆಗೆ ಆದೇಶಿಸಿದ್ದೇನೆ. ಆರೋಪದ ಅನುಗುಣವಾಗಿ ನಾವು ಶಿಸ್ತು ಕ್ರಮವನ್ನು ತೆಗೆದುಕೊಳ್ಳುತ್ತೇವೆ" ಎಂದು ಆಶಿಶ್ ಭಾಟಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯು ಮುಂದಿನ ಒಂದೆರಡು ದಿನಗಳಲ್ಲಿ ತನ್ನ ವರದಿಯನ್ನು ಪೊಲೀಸರಿಗೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆ ಆರಂಭಿಸಲು ಬೇಡಿಕೆ

ವ್ಯಕ್ತಿಯನ್ನು ಥಳಿಸಿದ ಸಾದಾ ಬಟ್ಟೆಯಲ್ಲಿದ್ದ ಪುರುಷರ ಗುಂಪು ಖೇಡಾದ ಸ್ಥಳೀಯ ಅಪರಾಧ ವಿಭಾಗದ (LCB) ಘಟಕದ ಪೊಲೀಸ್ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಇದನ್ನು ದೃಢೀಕರಿಸಿದ ಪೊಲೀಸ್ ಅಧಿಕಾರಿಗಳು, ಪುರುಷರನ್ನು ಥಳಿಸುತ್ತಿರುವ ವ್ಯಕ್ತಿಯನ್ನು ಪೊಲೀಸ್ ಇನ್ಸ್‌ಪೆಕ್ಟರ್ ಎವಿ ಪರ್ಮಾರ್ ಎಂದು ಗುರುತಿಸಿದ್ದಾರೆ. ಥಳಿತಕ್ಕೊಳಗಾದ ವ್ಯಕ್ತಿಗಳ ಜೇಬಿನಿಂದ ಫೋನ್ ಮತ್ತು ವಾಲೆಟ್‌ಗಳನ್ನು ತೆಗೆಯುತ್ತಿರುವ ಇನ್ನೊಬ್ಬ ವ್ಯಕ್ತಿಯನ್ನು ಸಬ್ ಇನ್‌ಸ್ಪೆಕ್ಟರ್ ಡಿಬಿ ಕುಮಾವತ್ ಎಂದು ಗುರುತಿಸಲಾಗಿದೆ. ಪರ್ಮಾರ್ ಮತ್ತು ಕುಮಾವತ್ ಇಬ್ಬರೂ ಖೇಡಾದಲ್ಲಿ ಎಲ್‌ಸಿಬಿ ಘಟಕದೊಂದಿಗೆ ಪೋಸ್ಟ್ ಮಾಡಲಾಗಿದ್ದು, ಕರೆಗಳು ಅಥವಾ ಪಠ್ಯ ಸಂದೇಶಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂದು ತಿಳಿದುಬಂದಿದೆ.

ಶಿಸ್ತು ಕ್ರಮಕ್ಕೆ ಸೂಚನೆ

ಶಿಸ್ತು ಕ್ರಮಕ್ಕೆ ಸೂಚನೆ

ವಿಡಿಯೋ ತುಣುಕುಗಳಲ್ಲಿ ಕಂಡುಬರುವ ಇನ್ನುಳಿದ ಸಿಬ್ಬಂದಿಯನ್ನು ಪೊಲೀಸರು ಇನ್ನೂ ಹೆಸರಿಸಿಲ್ಲ. ಕಪದ್ವಂಜ್ ತಾಲೂಕಿನ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಎನ್ ಸೋಲಂಕಿ ಅವರಿಗೆ ತನಿಖೆಯ ಉಸ್ತುವಾರಿ ನೀಡಲಾಗಿದೆ. "ಇಂದು ನನಗೆ ತನಿಖೆಯನ್ನು ವಹಿಸಲಾಗಿದೆ. ವಿಡಿಯೊ ತುಣುಕುಗಳ ವಿವರಗಳನ್ನು ನಾನು ಇನ್ನೂ ಪರಿಶೀಲಿಸಿಲ್ಲ"ಎಂದು ಅವರು ಹೇಳಿದರು.

ಪರ್ಮಾರ್ ಮತ್ತು ಕುಮಾವತ್ ಬಗ್ಗೆ ಕೇಳಿದಾಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೀಗೆ ಹೇಳಿದರು: ''ಇವರು ನಮ್ಮ ಪುರುಷರು ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ. ಅವರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಿತ್ತು'' ಎಂದಿದ್ದಾರೆ.

ಎಲ್‌ಸಿಬಿ ಘಟಕದ ಏಳು ಸಿಬ್ಬಂದಿ ತನಿಖೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. "ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದ ನಂತರ, ಅಧಿಕಾರಿಗಳು ಮೊದಲ ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ'' ಎಂದು ಅಧಿಕಾರಿಯೊಬ್ಬರು ಹೇಳಿದರು. ಮಂಗಳವಾರ ಹೊರಬಿದ್ದ ವಿಡಿಯೋ ಕ್ಲಿಪ್‌ಗಳು, ಕನಿಷ್ಠ ನಾಲ್ವರನ್ನು ಒಬ್ಬರ ನಂತರ ಒಬ್ಬರಂತೆ, ಚೌಕ್‌ನಲ್ಲಿನ ವಿದ್ಯುತ್ ಕಂಬಕ್ಕೆ ವ್ಯಕ್ತಿಯನ್ನು ಹಿಡಿದ ಥಳಿಸಿದ್ದಾರೆ.

ಮದರಸಾದೊಂದಿಗೆ ಗೋಡೆಯನ್ನು ಹಂಚಿಕೊಂಡ ದೇವಸ್ಥಾನ

ಮದರಸಾದೊಂದಿಗೆ ಗೋಡೆಯನ್ನು ಹಂಚಿಕೊಂಡ ದೇವಸ್ಥಾನ

ಸೋಮವಾರ ರಾತ್ರಿ ಗರ್ಬಾ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆಸಿದ ನಂತರ ಗುಜರಾತ್‌ನ ಖೇಡಾ ಜಿಲ್ಲೆಯ ಮಟರ್ ತಾಲೂಕಿನ ಉಂಧೇಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗರ್ಬಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಥಳಿಸಿ ಬಂಧಿಸಲ್ಪಟ್ಟ ವ್ಯಕ್ತಿಗಳನ್ನು ಗುರುತಿಸಲಾಗಿಲ್ಲವಾದರೂ, ಅವರೆಲ್ಲರೂ ಮುಸ್ಲಿಂ ಸಮುದಾಯದವರು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಗ್ರಾಮದ ಸರಪಂಚ್‌ನ ಇಂದ್ರವದನ್ ಪಟೇಲ್, ದೇವಸ್ಥಾನದ ಹೊರಗೆ ಗರ್ಬಾವನ್ನು ಆಯೋಜಿಸಿದ್ದರು. ಅದು ಮಸೀದಿಗೆ ಎದುರಾಗಿದೆ ಮತ್ತು ಮದರಸಾದೊಂದಿಗೆ ಗೋಡೆಯನ್ನು ಹಂಚಿಕೊಂಡಿದೆ. ಸುಮಾರು 6,000 ಜನಸಂಖ್ಯೆಯನ್ನು ಹೊಂದಿರುವ ಗ್ರಾಮವು ಎರಡು ಸಮುದಾಯಗಳ ಬಹುತೇಕ ಸಮಾನ ಜನಸಂಖ್ಯೆಯನ್ನು ಹೊಂದಿದೆ. ಎರಡೂ ಸಮುದಾಯ ಗುರುತಿಸಲಾದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಗುರುವಾರದಂದು, ದಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರಾಮಕ್ಕೆ ಭೇಟಿ ನೀಡಿದಾಗ, ಅಲ್ಪಸಂಖ್ಯಾತ ಪ್ರದೇಶದ ಬಹುತೇಕ ಮನೆಗಳಿಗೆ ಬೀಗ ಹಾಕಲಾಗಿತ್ತು. ಸಮುದಾಯದ ಕೆಲವು ಸದಸ್ಯರು, ಹೆಚ್ಚಾಗಿ ಮಹಿಳೆಯರು ಅಥವಾ ವೃದ್ಧರು ಕಾಣಿಸಿಕೊಂಡರು, ಆದರೆ ಹೆಚ್ಚಿನವರು ಘಟನೆಯ ಬಗ್ಗೆ ಮಾತನಾಡಲು ನಿರಾಕರಿಸಿದರು.

"ನೀವು ಹೋಗಿ ಆ ರಾತ್ರಿ ಏನಾಯಿತು ಎಂದು ಸರಪಂಚರನ್ನು ಕೇಳಬೇಕು. ಅವರು ವಿವಿಧ ಆರೋಪಗಳ ಅಡಿಯಲ್ಲಿ ನಮ್ಮ ಸಮುದಾಯದ ಪುರುಷರನ್ನು ಎತ್ತಿಕೊಂಡು ಹೋಗಿದ್ದಾರೆ. ವಯಸ್ಸಾದ ನಮ್ಮನ್ನು ಇಂತಹ ದುರ್ಬಲ ಸ್ಥಿತಿಯಲ್ಲಿ ಒಂಟಿಯಾಗಿ ಬಿಟ್ಟಿದ್ದಾರೆ... ಪೊಲೀಸರು ಸರಿಯಾದ ತನಿಖೆಯಿಲ್ಲದೆ ನಮ್ಮ ಪುರುಷರ ಮೇಲೆ ಹೊಡೆಯುತ್ತಿರುವಾಗ ನಮ್ಮ ಸುರಕ್ಷತೆಗೆ ಯಾರು ಹೊಣೆ, "ಎಂದು ಮಹಿಳೆಯೊಬ್ಬರು ಹೇಳಿದರು.

'ಗಾರ್ಬಾಕ್ಕೆ ಅಡ್ಡಿಪಡಿಸಿದ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ'

'ಗಾರ್ಬಾಕ್ಕೆ ಅಡ್ಡಿಪಡಿಸಿದ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ'

ಮತ್ತೊಂದೆಡೆ, ನಿವಾಸಿ ರವೀಂದ್ರ ಪಟೇಲ್ ಹೇಳಿದರು: "ಗಾರ್ಬಾಕ್ಕೆ ಅಡ್ಡಿಪಡಿಸಿದ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಕೇಳಿದ ಗ್ರಾಮದ ಜನರು ಚೌಕ್‌ನಲ್ಲಿ ಜಮಾಯಿಸಿದರು. ನಾವು ಪೊಲೀಸರಿಗೆ ತಕ್ಕ ಪಾಠ ಕಲಿಸುವಂತೆ ಕೇಳಿಕೊಂಡೆವು. ಸುಮಾರು ಎಂಟು ಪುರುಷರು ಯಾವಾಗಲೂ ಇತರರನ್ನು ಪ್ರಚೋದಿಸುತ್ತಾರೆ ಮತ್ತು ನಮಗೆ ಬೆದರಿಕೆ ಹಾಕುತ್ತಾರೆ. ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ನಡೆಸಿದಾಗ ಎಲ್ಲರೂ ಹರ್ಷೋದ್ಗಾರ ಮಾಡಿದರು. ಇಷ್ಟು ವರ್ಷಗಳ ಬೆದರಿಕೆಯನ್ನು ಎದುರಿಸಿದ ನಂತರ ಇದೇ ಮೊದಲ ಬಾರಿಗೆ ನಮಗೆ ನ್ಯಾಯ ಸಿಕ್ಕಿದೆ' ಎಂದಿದ್ದಾರೆ.

"ನಾವು ಗ್ರಾಮದಲ್ಲಿ ಪೊಲೀಸ್ ಚೌಕಿಗೆ ಬೇಡಿಕೆ ಸಲ್ಲಿಸುವ ಅರ್ಜಿಯನ್ನು ಸಿದ್ಧಪಡಿಸುತ್ತಿದ್ದೇವೆ. ಗರ್ಬಾದ ಮುಂಚೆಯೇ, ನಾವು ಪೊಲೀಸ್ ರಕ್ಷಣೆಯನ್ನು ಕೋರಿದ್ದೆವು ಏಕೆಂದರೆ, ಹಲವಾರು ದಶಕಗಳಿಂದ, ಚೌಕ್‌ನಲ್ಲಿ ಯಾವುದೇ ಹಬ್ಬವನ್ನು ಆಚರಿಸುವಾಗ ನಮ್ಮ ಸಮುದಾಯದ ಮೇಲೆ ದಾಳಿ ಮಾಡಲಾಗುತ್ತಿದೆ. ಈ ಬಾರಿ ಅವರು (ಆರೋಪಿಗಳು) ಪೊಲೀಸರನ್ನು ಸಹ ಬಿಡಲಿಲ್ಲ' ಎಂದು ಮಾಟರ್ ತಾಲೂಕು ಪಂಚಾಯತ್‌ನ ಬಿಜೆಪಿ ಸದಸ್ಯ ಶೈಲೇಶ್ ಸೋಲಂಕಿ ಹೇಳಿದರು.

ಕಲ್ಲು ತೂರಾಟದ ನಂತರ ನಡೆದ ಘರ್ಷಣೆಯಲ್ಲಿ ಕೆಲವು ಪೊಲೀಸರು ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಎಫ್‌ಐಆರ್‌ನಲ್ಲಿ ಗುರುತಿಸಲಾಗಿರುವ 43 ಆರೋಪಿಗಳ ಪೈಕಿ 13 ಮಂದಿಯನ್ನು ಗಲಭೆ ಮತ್ತು ಕೊಲೆ ಯತ್ನ ಸೇರಿದಂತೆ ಆರೋಪದ ಮೇಲೆ ಇದುವರೆಗೆ ಬಂಧಿಸಲಾಗಿದೆ.

ಕಲ್ಲು ತೂರಾಟದ ಬಗ್ಗೆ ತನಿಖೆ

ಕಲ್ಲು ತೂರಾಟದ ಬಗ್ಗೆ ತನಿಖೆ

"ನಾವು ಗ್ರಾಮದ ಚೌಕ್‌ನಲ್ಲಿ ಯಾವುದೇ ಶಾಂತಿಯುತ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಾಗಲಿಲ್ಲ. ಅವರು (ಮುಸ್ಲಿಂ ಸಮುದಾಯ) ಇತ್ತೀಚೆಗೆ ಅದೇ ಸ್ಥಳದಲ್ಲಿ ಆಚರಣೆಯನ್ನು ನಡೆಸಿದಾಗ, ನಮ್ಮ ಹಿರಿಯರು ಅವರಿಗೆ ಅಡ್ಡಿಪಡಿಸಬೇಡಿ ಎಂದು ನಮಗೆ ಹೇಳಿದರು. ನಾಔಉ ಅಡ್ಡಿ ಮಾಡಲಿಲ್ಲ. ಆಧರೂ ನಮಗೆ ಏಕೆ ಗಾರ್ಬಾ ರಾತ್ರಿಯನ್ನು ನಡೆಸಲು ತೊಂದರೆ ಮಾಡಲಾಯಿತು?" ಎಂದು ಗಾಯಗೊಂಡವರಲ್ಲಿ ಒಬ್ಬ ಗ್ರಾಮಸ್ಥ ಆಕಾಶ್ ಸಿಸೋಡಿಯಾ ಹೇಳಿದರು.

ಸ್ಪೆಷಲ್ ಆಪರೇಷನ್ ಗ್ರೂಪ್ (ಎಸ್‌ಒಜಿ), ಖೇಡಾ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ದಾಖಲಿಸಲಾದ ಎಫ್‌ಐಆರ್‌ನ ತನಿಖೆ ನಡೆಸುತ್ತಿದೆ. "ನಾವು ಪುರಾವೆಗಳನ್ನು ಪರಿಶೀಲಿಸುತ್ತಿದ್ದೇವೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ತಂಡಗಳು ಶೋಧ ನಡೆಸುತ್ತಿವೆ. ಘಟನೆಯು ಪೂರ್ವಯೋಜಿತವಾಗಿದೆ ಎಂದು ನಾವು ಭಾವಿಸಿದರೆ, ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ನಾಡಿಯಾಡ್ ಉಪ ಪೊಲೀಸ್ ವರಿಷ್ಠಾಧಿಕಾರಿ ವಿ ಆರ್ ಬಾಜ್ಪೇಯಿ ಹೇಳಿದರು.

ಬುಧವಾರ, ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಅವರು "ಇದು ಕೆಲವು ಸಮಾಜ ವಿರೋಧಿ ಗ್ಯಾಂಗ್" ಎಂದು ಹೇಳಿದ್ದರು.

English summary
An incident took place in Kheda, Gujarat where some Muslim men were thrashed by the police for allegedly disrupting the Garba event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X