ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ದಾಖಲೆಯ ದುಬಾರಿ ನೆಕ್ಲೇಸ್ ಹರಾಜು ಕಟ್ಟೆಗೆ

By Srinath
|
Google Oneindia Kannada News

ಸಿಂಗಪುರ, ಅ.5: ಏಷ್ಯಾ ರಾಷ್ಟ್ರಗಳಲ್ಲೂ ಅಮೂಲ್ಯ ವಜ್ರಾಭರಣಗಳಿಗೆ ಬೇಡಿಕೆ ಕುದುರುತ್ತಿದೆ. ವಿಶ್ವದ ಅತಿ ದುಬಾರಿ ನೆಕ್ಲೇಸ್ ಅಕ್ಟೋಬರ್ ಅಂತ್ಯಕ್ಕೆ ಹರಾಜು ಕಟ್ಟೆಯಲ್ಲಿ ಬಿಕರಿಯಾಗಲಿದೆ.

L'Incomparable ಎಂದು ಹೆಸರು ಪಡೆದಿರುವ ಈ ದುಬಾರಿ ನೆಕ್ಲೇಸ್ ಅನ್ನು Mouawad ಐಷಾರಾಮಿ ಆಭರಣ ತಯಾರಿಕಾ ಕಂಪನಿ ಸಿದ್ಧಪಡಿಸಿದೆ. 90 ಬಿಳಿ ವಜ್ರಗಳಿಂದ ಹಳದಿ ಲೇಪನದ 407 ಕ್ಯಾರೆಟ್ ಈ ವಜ್ರಾಭರಣವನ್ನು ಚಿನ್ನದ ಕೇಸಿನಲ್ಲಿ ಇಡಲಾಗಿದೆ.

Guinness World Record World's Most Expensive Necklace For Auction at Singapore

ಇತ್ತೀಚೆಗೆ ಪ್ರತಿಷ್ಠಿತ ಹರಾಜು ಕೇಂದ್ರಗಳಲ್ಲಿ ಅಮೂಲ್ಯ ಆಭರಣಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ನೆಕ್ಲೇಸ್ ಆಭರಣಕ್ಕೂ ವಿಪರೀತ ಎನಿಸುವಷ್ಟು ಬಂದೋಬಸ್ತ್ ಕಲ್ಪಿಸಲಾಗಿದೆ. ಕಂಪನಿಯು ಪ್ರತಿ ದಿನ ಈ ಆಭರಣವನ್ನು ಹರಾಜು ಕೇಂದ್ರದಿಂದ ತನ್ನ ಕೇಂದ್ರಕ್ಕೆ ವಿಶೇಷ ಭದ್ರತೆಯೊಂದಿಗೆ ವಾಪಸ್ ತೆಗೆದುಕೊಂಡು ಹೋಗುತ್ತಿದೆ.

ಏಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳ ಸಂಭಾವ್ಯ ಖರೀದಿದಾರರು ಈಗಾಗಲೇ ಆಸಕ್ತಿ ತೋರಿದ್ದಾರೆ ಎಂದು Mouawad ಕಂಪನಿಯ ಮುಖ್ಯಸ್ಥ ಜೀನ್ ನಾಸರ್ ತಿಳಿಸಿದ್ದಾರೆ. ಈ ದುಬಾರಿ ನೆಕ್ಲೇಸಿಗೆ ಆಭರಣದ ಮೌಲ್ಯಕ್ಕಿಂತ ಹೆಚ್ಚು ಮಹತ್ವವಿದೆ. ಇದೊಂದು ಹೂಡಿಕೆಯ ಸಾಧನವಾಗಲಿದೆ ಎಂದು ಅವರು ವರ್ಣಿಸಿದ್ದಾರೆ. Guinness World Recordsನಲ್ಲಿ ಅತಿ ಹೆಚ್ಚು ಮೌಲ್ಯದ ವಜ್ರಾಭರಣ (ಅಂದರೆ ಕೇವಲ 330 ಕೋಟಿ ರೂಪಾಯಿಗಳು ಮಾತ್ರ!) ಎಂದು ಈ ನೆಕ್ಲೇಸ್ ದಾಖಲಾಗಿದೆ.

ನೆಕ್ಲೇಸಿನ ಕೇಂದ್ರಾಕರ್ಷಣೆಯಾಗಿರುವ ವಜ್ರವು ಅಂಡಾಕಾರದಲ್ಲಿದೆ. ಇದು ಕಾಂಗೋದಲ್ಲಿ ಸುಮಾರು 30 ವರ್ಷಗಳ ಹಿಂದೆ ಗಣಿ ಗುಡ್ಡೆಯಲ್ಲಿ ಯುವತಿಯೊಬ್ಬಳ ಕಣ್ಣಿಗೆ ಬಿದ್ದಿತ್ತು. ಈ ವಜ್ರಕ್ಕೆ ಆನಂತರದ ದಿನಗಳಲ್ಲಿ ಅಮೆರಿಕ, ಯುರೋಪ್ ಮತ್ತು ಏಷ್ಯಾದ ಡಿಸೈನರುಗಳು ಸಾಕಷ್ಟು ಪರಿಶ್ರಮ ಹಾಕಿ, ಅದರ ಮೇಲೆ 200 ದಶಲಕ್ಷ ಡಾಲರ್ ಬಂಡವಾಳ ಹೂಡಿದ್ದಾರೆ.

English summary
Guinness World Record World's Most Expensive Necklace For Auction at Singapore. The egg-sized diamond goes on sale this month at a jewellery show in Singapore, reflecting Asia's growing appetite for precious gems and expensive baubles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X