ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಮೂನ್ ಎಲ್ಲೆಲ್ಲಿ ಕಾಣಿಸುತ್ತಾನೆ? ಇಲ್ಲಿದೆ ಗೈಡ್

By Mahesh
|
Google Oneindia Kannada News

ಬೆಂಗಳೂರು, ಸೆ.27: ಸೂಪರ್ ಮೂನ್, ಚಂದ್ರ ಗ್ರಹಣ ನೋಡಲು ವಿಶ್ವದ ಅನೇಕ ಮಂದಿ ಕಾತುರರಾಗಿದ್ದಾರೆ. ಕೆಂಪು ಚಂದ್ರನ ಬಗ್ಗೆ ಎದ್ದಿದ್ದ ಊಹಾಪೋಹ ಸುದ್ದಿಗಳನ್ನು ನಾಸಾ ತಳ್ಳಿ ಹಾಕಿದೆ. ಸೂಪರ್ ಮೂನ್ ಎಲ್ಲೆಲ್ಲಿ ಕಾಣಿಸುತ್ತಾನೆ? ಇಲ್ಲಿದೆ ಮಾರ್ಗದರ್ಶನ...

ಭಾನುವಾರ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರ ಗ್ರಹಣ ಸಂಭವಿಸಲಿದೆ. ಅಮೆರಿಕ, ರಷ್ಯಾ ಹಾಗೂ ಆಫ್ರಿಕಾ ದೇಶದವರಿಗೆ ಗ್ರಹಣ ಗೋಚರಿಸಲಿದೆ. ಪಶ್ಚಿಮ ಯುರೋಪ್ ಹಾಗೂ ಆಫ್ರಿಕಾ ದೇಶಗಳಲ್ಲಿ ಚಂದಿರ ಸುಂದರವಾಗಿ ಕಾಣುತ್ತಾನೆ. ಪಶ್ಚಿಮ ಯುನೈಟೆಡ್ ಸ್ಟೇಟ್ಸ್, ಕೆನಡಾದ ಕೆಲ ಭಾಗಗಳಲ್ಲಿ ಭಾಗಶಃ ಗೋಚರ ಲಭ್ಯ. ಅಲಾಸ್ಕಾದಲ್ಲಿ ಚಂದ್ರೋದಯ ಕಾಲದ ದೃಶ್ಯ ಸಿಗುತ್ತದೆ.

Guide to watch spectacular Supermoon Lunar Eclipse of 2015

ಸೆ. 28ರ ಬೆಳಗ್ಗೆ 6:40ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಲಿದ್ದು, ಭಾರತದಲ್ಲಿ ಆಗ ಚಂದ್ರ ದರ್ಶನವಾಗುವುದಿಲ್ಲವಾದ್ದರಿಂದ, ಇಲ್ಲಿ ಗ್ರಹಣವಿಲ್ಲ. ಕೆಂಪು ಚಂದ್ರನ ದರ್ಶನ ಭಾಗ್ಯವಿಲ್ಲ. ಆದರೆ 27ರ ರಾತ್ರಿ ಹುಣ್ಣಿಮೆಯ ಚಂದ್ರ ಅತ್ಯಂತ ಸುಂದರವಾಗಿ ಹೆಚ್ಚಿನ ಪ್ರಭೆಯಿಂದ ಕಾಣಿಸಲಿದೆ. ಸೆ. 28ರ ಮುಂಜಾವಿನಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಇರಾನ್ ಪೂರ್ವ ಭಾಗದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ. [ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ]

ಹುಣ್ಣಿಮೆ ಜೊತೆಗೆ ಚಂದ್ರ ಭೂಮಿಗೆ ಅತೀ ಸಮೀಪದಲ್ಲಿರುತ್ತಾನೆ. ಸುಮಾರು 3,56,877 ಕಿ.ಮೀ ಹತ್ತಿರವಾಗಿರುವ ಚಂದ್ರ ಕೆಂಪಗೆ ಕಾಣುತ್ತಾನೆ. ನ್ಯಾಷನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಆರ್ಗನೈಜೇಶನ್ (ನಾಸಾ) ಈ ಸೂಪರ್ ಮೂನ್ ಅಧ್ಯಯನಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಸಾಮಾನ್ಯವಾಗಿ ಹುಣ್ಣಿಮೆ ದಿನ ಕಾಣುವ ಚಂದ್ರನಿಗಿಂತ ಈ ಹುಣ್ಣಿಮೆಯ ಚಂದ್ರ ಸುಮಾರು ಶೇ.12ರಷ್ಟು ದೊಡ್ಡದಾಗಿ ಹಾಗೂ ಶೇ.24ರಷ್ಟು ಹೆಚ್ಚಿನ ಪ್ರಭೆಯೊಂದಿಗೆ ಕಾಣಿಸುತ್ತಾನೆ. 1982ರ ನಂತರ ಇಂಥ ದೊಡ್ಡ ಚಂದ್ರ ಕಾಣುತ್ತಿದ್ದಾನೆ. 2033ರಲ್ಲಿ ಮತ್ತೊಮ್ಮೆ ಇದೇ ರೀತಿಯ ಪ್ರಭೆ ಬೀರಲಿದ್ದಾನೆ. [ಕೆಂಪು ಚಂದ್ರನ ಹೈಲೈಟ್ಸ್]

ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸುತ್ತದೋ ಅಲ್ಲೆಲ್ಲ ಜನರು ಬರಿಗಣ್ಣಿನಿಂದ ಚಂದ್ರ ಗ್ರಹಣವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ವೀಕ್ಷಿಸಬಹುದು. ಭಾರತದಲ್ಲಿ ಗೋಚರಿಸದಿಲ್ಲ ಎಂದು ಚಿಂತಿಸಬೇಡಿ. ನಾಸಾ ಒದಗಿಸುತ್ತಿರುವ ಲೈವ್ ಸ್ಟ್ರೀಮಿಂಗ್ ಮೂಲಕ ಈ ಅದ್ಭುತವನ್ನು ವೀಕ್ಷಿಸಿ ಆನಂದಿಸಿ. ಲೈವ್ ಸ್ಟ್ರೀಮಿಂಗ್ ಲಿಂಕ್ ಕ್ಲಿಕ್ ಮಾಡಿ.

English summary
First time in more than 30 years: you’ll be able to witness a supermoon in combination with a lunar eclipse. A total lunar eclipse will mask the moon’s larger-than-life face for more than an hour. Almost everyone in the Americas and Western Europe will have a beautiful view of this eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X