ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ವಾಟೆಮಾಲಾದಲ್ಲಿ ಚಿಮ್ಮಿದ ಜ್ವಾಲಾಮುಖಿ: 6 ಮಂದಿ ಬಲಿ

By Nayana
|
Google Oneindia Kannada News

ಗ್ವಾಟೆಮಾಲಾ, ಜೂನ್ 4: ಹವಾಯಿ ನಂತರ ಇದೀಗ ಅಕೇಂದ್ರ ಅಮೆರಿಕದಲ್ಲಿರುವ ಗ್ವಾಟೆಮಾಲಾದಲ್ಲಿ ಫುಯೆಗೊ ಜ್ವಾಲಾಮುಖಿ ಎದ್ದಿದೆ, ಇದಕ್ಕೆ 6 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 20ಕ್ಕೂ ಹೆಚ್ಚುಮಂದಿಗೆ ಗಾಯಗಳಾಗಿವೆ.

ಭಾನುವಾರ ಜ್ವಾಲಾಮುಖಿ ಕಾಣಿಸಿಕೊಂಡಿದೆ. ಗ್ವಾಟಾಮಾಲದ ನೈಋತ್ಯ ಭಾಗದ 40 ಕಿ.ಮೀ ವ್ಯಾಪ್ತಿಯಲ್ಲಿ ಜ್ವಾಲಾಮುಖಿ ಕಾಣಿಸಿಕೊಂಡಿದೆ. ಅಲ್ಲಿ ಸಂಪೂರ್ಣವಾಗಿ ಸುತ್ತಮುತ್ತಲ ಪ್ರದೇಶ ಹಾಗೂ ಆಕಾಶ ಸಂಪೂರ್ಣವಾಗಿ ಹೊಗೆಯಿಂದ ಆವೃತವಾಗಿದೆ.

ಜ್ವಾಲಾಮುಖಿ ಉಗುಳಿದಾಗ, ನಮ್ಮದಲ್ಲದ್ದನ್ನು ಅಪ್ಪಿದಾಗ! ಜ್ವಾಲಾಮುಖಿ ಉಗುಳಿದಾಗ, ನಮ್ಮದಲ್ಲದ್ದನ್ನು ಅಪ್ಪಿದಾಗ!

ಗ್ವಾಟೆಮಾಲಾ ನಗರದಲ್ಲಿರುವ ಲಾ ಅರೋರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅಲ್ಲಿರುವ ಸುತ್ತಮುತ್ತಲ ಹಳ್ಳಿಗಳಿಗೆ ಸಾಕಷ್ಟು ತೊಂದರೆಯನ್ನು ಉಂಟುಮಾಡಿದೆ.

Guatemala volcano: 6 dies as volcano erupts

ಅಲ್ಲಿನ ಸರ್ಕಾರವು ಜ್ವಾಲಾಮುಖಿ ಉದ್ಭವಿಸಿರುವ ಪ್ರದೇಶದಿಂದ ಬೇರೆಡೆಗೆ ತೆರಳುವಂತೆ ಸೂಚಿಸಿದೆ. ಗ್ವಾಟೆಮಾಲಾ ಅಧ್ಯಕ್ಷ ಜಿಮಿ ಮೊರಾಲಿಸ್ ರಾಷ್ಟ್ರೀಯ ಎಮರ್ಜೆನ್ಸಿಯನ್ನು ಘೋಷಿಸಿದೆ. ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ಜ್ವಾಲಾಮುಖಿಯಿಂದ 1.7 ಮಿಲಿಯನ್ ಮಂದಿಗೆ ತೊಂದರೆಯಾಗಿದೆ. 3100ಕ್ಕೂ ಹೆಚ್ಚು ಮಂದಿ ತಮ್ಮ ನಿವಾಸಸ್ಥಳವನ್ನು ಬಿಟ್ಟು ತೆರಳಿದ್ದಾರೆ. 20ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅದರಲ್ಲಿ 12 ಮಂದಿ ಮಕ್ಕಳಿದ್ದಾರೆ.

English summary
At least six people were killed and 20 others were injured after the Fuego volcano erupted near Guatemala City on Sunday, leaving the residents in panic, according to officials. The Fuego volcano, about 40km (25 miles) south-west of the capital Guatemala City, has been spewing rocks, black smoke and ash into the sky.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X