ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ಹೋರಾಟಕ್ಕೆ 100,000 ಡಾಲರ್ ದೇಣಿಗೆ ನೀಡಿದ ಗ್ರೇಟಾ ಥನ್‍ಬರ್ಗ್

|
Google Oneindia Kannada News

ದೆಹಲಿ, ಏಪ್ರಿಲ್ 30: ಕೊರೊನಾ ವೈರಸ್‌ ಹೋರಾಟಕ್ಕೆ ಹಾಗೂ ಕೊವಿಡ್ ಸೋಂಕಿನಿಂದ ಕಷ್ಟ ಎದುರಿಸುತ್ತಿರುವ ಮಕ್ಕಳಿಗೆ ನೆರವಿಗೆ ಸ್ವಿಡೇನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಮುಂದಾಗಿದ್ದು, ಒಂದು ಲಕ್ಷ ಡಾಲರ್ ($100,000) ಹಣವನ್ನು ಯುನಿಸೆಫ್‌ಗೆ ದೇಣಿಗೆ ನೀಡಿದ್ದಾರೆ.

ಡ್ಯಾನಿಶ್ ಫೌಂಡೇಶನ್‌ನಲ್ಲಿ ತಾನು ಗೆದ್ದಿದ್ದ ಈ ಹಣವನ್ನು ವಿಶ್ವ ಸಂಸ್ಥೆಯ ಮಕ್ಕಳ ನಿಧಿಗೆ ಬಳಕೆ ಮಾಡುವಂತೆ ಗುರುವಾರ ತಿಳಿಸಿದ್ದಾರೆ. ಡ್ಯಾನಿಶ್ ಫೌಂಡೇಶನ್‌ ಬಡತನ ವಿರೋಧಿ ಸರ್ಕಾರೇತರ ಸಂಸ್ಥೆಯಾಗಿದ್ದು, ಗ್ರೇಟಾ ಥನ್‍ಬರ್ಗ್ ಅವರ ಪರಿಸರ ಕಾಳಜಿ ಮತ್ತು ಮಕ್ಕಳ ಹೋರಾಟಕ್ಕಾಗಿ $100,000 ಹಣವನ್ನು ಬಹುಮಾನವಾಗಿ ನೀಡಿತ್ತು.

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪಾಸ್: ಕೊರೊನಾಗೆ ಸಿಕ್ಕಿತೇ ಮದ್ದು?ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪಾಸ್: ಕೊರೊನಾಗೆ ಸಿಕ್ಕಿತೇ ಮದ್ದು?

ಜಗತ್ತಿಗೆ ಮಾರಕವಾಗಿರುವ ಕೊರೊನಾ ಕುರಿತು ಮಾತನಾಡಿದ ಗ್ರೇಟಾ ಥನ್‍ಬರ್ಗ್ 'ಹವಾಮಾನ ಬಿಕ್ಕಟ್ಟಿನಂತೆ ಕೊರೊನಾ ವೈರಸ್‌ ಮಕ್ಕಳ ಹಕ್ಕಿಗೆ ಬಿಕ್ಕಟ್ಟು ತಂದಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಇದು ಎಲ್ಲ ಮಕ್ಕಳ ಮೇಲೆ ದೀರ್ಘ ಸಮಯ ಪ್ರಭಾವ ಬೀರುತ್ತದೆ. ದುರ್ಬಲ ಗುಂಪುಗಳು ಮೇಲೆ ಕೊರೊನಾ ಹೆಚ್ಚು ಪ್ರಭಾವ ಬೀರುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Greta Thunberg Donated $100,000 To UNICEF To Support Children During Covid19

'ಮಕ್ಕಳ ಜೀವಗಳನ್ನು ಉಳಿಸಲು, ಆರೋಗ್ಯವನ್ನು ರಕ್ಷಿಸಲು ಮತ್ತು ಅವರ ಶಿಕ್ಷಣವನ್ನು ಮುಂದುವರೆಸಲು ಯುನಿಸೆಫ್ ಜೊತೆ ಎಲ್ಲರೂ ಕೈಜೋಡಿಸಿ' ಎಂದು ಗ್ರೇಟಾ ಥನ್‍ಬರ್ಗ್ ವಿನಂತಿಸಿಕೊಂಡಿದ್ದಾರೆ.

ಇನ್ನು ಗ್ರೇಟಾ ಥನ್‍ಬರ್ಗ್ ನೀಡಿರುವ ಹಣವನ್ನು 'ಲಾಕ್‌ಡೌನ್‌ ಹಾಗೂ ಶಾಲೆಗಳು ಮುಚ್ಚಿರುವುದರಿಂದ ತೊಂದರೆಗೆ ಒಳಗಾಗಿರುವ ಮಕ್ಕಳ ಕಲ್ಯಾಣಕ್ಕೆ ಈ ಹಣವನ್ನು ಬಳಸುವುದಾಗಿ ಯುನಿಸೆಫ್ ತಿಳಿಸಿದೆ.

English summary
Swedish climate activist Greta Thunberg has donated a $100,000 prize she won from a Danish foundation to the United Nations Children's Fund (UNICEF).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X