ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಳಯ ಫಿಕ್ಸ್ ಅಂತಿದ್ದಾರೆ ವಿಜ್ಞಾನಿಗಳು, ಮುಳುಗಿ ಹೋಗಲಿದೆ 'ಮಾನವ ಸಾಮ್ರಾಜ್ಯ'..!

|
Google Oneindia Kannada News

ವಿಜ್ಞಾನಿಗಳು ನೂರಾರು ವರ್ಷಗಳಿಂದ ಭೂಮಿ ಮೇಲಿನ ತಾಪಮಾನ ಏರಿಕೆ ಬಗ್ಗೆ ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ ವಿಜ್ಞಾನಿಗಳ ಈ ಬುದ್ಧಿ ಮಾತು 'ಬುದ್ಧಿವಂತ ಜೀವಿ' ಎನಿಸಿಕೊಂಡ ಮಾನವನ ಕಿವಿಗೆ ಬೀಳಲೇ ಇಲ್ಲ.

ಅಭಿವೃದ್ಧಿ, ಅಭಿವೃದ್ಧಿ ಎನ್ನುತ್ತಾ ಪ್ರಕೃತಿ ಮೇಲೆ ದೌರ್ಜನ್ಯ ಮಾಡುತ್ತಲೇ ಬಂದಿದ್ದ. ಈ ತಪ್ಪುಗಳೇ ಮುಳುವಾಗಿ, ಪ್ರಳಯ ಫಿಕ್ಸ್ ಆಗುತ್ತಿದೆ. ಹೌದು, ಇನ್ನೇನು ಕೆಲವೇ ವರ್ಷಗಳಲ್ಲಿ ಭೂಮಿ ಮೇಲೆ ಸಾಕಷ್ಟು ದೇಶಗಳು ನಾಶ ಆಗಲಿವೆ ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಅಂದಹಾಗೆ ವಿಜ್ಞಾನಿಗಳ ಈ ಎಚ್ಚರಿಕೆಗೆ ಕಾರಣ ಗ್ರೀನ್ ಲ್ಯಾಂಡ್‌ನಲ್ಲಿನ ಹಿಮ ಕರುಗುತ್ತಿರುವುದು. 1880ರಿಂದ ಗ್ರೀನ್ ಲ್ಯಾಂಡ್‌ ಮೇಲೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ. ಈ ಅಧ್ಯಯನ ಹಲವು ಆಘಾತಕಾರಿ ಮಾಹಿತಿ ನೀಡುತ್ತಾ ಬಂದಿದೆ.

ಈಗ ಮತ್ತೊಂದು ಶಾಕ್ ಸಿಕ್ಕಿದ್ದು, ಈಗಿನಂತೆ ಮನುಷ್ಯ ಪ್ರಕೃತಿ ಮೇಲೆ ದೌರ್ಜನ್ಯ ಮುಂದುವರಿಸಿದರೆ ಎಲ್ಲ ಮುಗಿದು ಹೋಗಲಿದೆ. ಭೂಮಿ ಬಿಸಿಯಾದಷ್ಟು ಭೂಮಿ ಮೇಲಿನ ಹಿಮ ಕರಗಿ, ನೀರಾಗಿ ಸಮುದ್ರ ಸೇರಲಿದೆ. ಹೀಗೆ ಹಿಮ ಕರಗಿದರೆ ಸಮುದ್ರ ನೀರಿನ ಮಟ್ಟ ಸುಮಾರು 7 ಮೀಟರ್ ಏರಲಿದ್ದು, ಭೂಮಿ ಮೇಲಿನ ಸಾಕಷ್ಟು ದೇಶಗಳು ಮುಳುಗಿಹೋಗಲಿವೆ. ಮನುಷ್ಯನೂ ನಾಶವಾಗಲಿದ್ದಾನೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

 ಪ್ರಕೃತಿ ಮೇಲೆ ತೋರುತ್ತಿರುವ ದೌರ್ಜನ್ಯ ನಿಲ್ಲುತ್ತಿಲ್ಲ

ಪ್ರಕೃತಿ ಮೇಲೆ ತೋರುತ್ತಿರುವ ದೌರ್ಜನ್ಯ ನಿಲ್ಲುತ್ತಿಲ್ಲ

ಎಷ್ಟೇ ಹೇಳಿದರೂ, ಎಷ್ಟೇ ಬೇಡಿದರೂ ಮಾನವ ಪ್ರಕೃತಿ ಮೇಲೆ ತೋರುತ್ತಿರುವ ದೌರ್ಜನ್ಯ ನಿಲ್ಲುತ್ತಿಲ್ಲ. ಇದರ ಎಫೆಕ್ಟ್ ಭೂಮಿ ಮೇಲಾಗುತ್ತಿದೆ. ಇದು ಮಾನವನಿಗೇ 'ತಿರುಗಬಾಣ'ವಾಗುತ್ತಿದ್ದು, ಪ್ರಕೃತಿ ಮೇಲಿನ ದೌರ್ಜನ್ಯ ರಿಸಲ್ಟ್ ಕೊಡುತ್ತಿದೆ. ಗ್ರೀನ್‌ ಲ್ಯಾಂಡ್‌ನಲ್ಲಿರುವ ಹಿಮಪದರ ಸುಮಾರು 17 ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿದ್ದು, ಇದು ಮುಂದಿನ 900 ವರ್ಷದಲ್ಲಿ ಕರಗಿ ನೀರಾಗಿ ಸಮುದ್ರ ಸೇರಲಿದೆ. ಅಲ್ಲಿಗೆ ಮಾನವನ ಭವಿಷ್ಯ ನಾಶವಾಗಿ ಹೋಗಲಿದೆ ಎಂದು ಕೋಪನ್ ಹೇಗನ್ ವಿವಿ, ನಾರ್ವೆಯ ಆರ್ಕ್ಟಿಕ್ ವಿವಿ ಅಧ್ಯಯನ ತಿಳಿಸಿದೆ.

 ಸೈಬೀರಿಯಾ ಪ್ರಾಂತ್ಯ

ಸೈಬೀರಿಯಾ ಪ್ರಾಂತ್ಯ

ಜಗತ್ತಿಗೆ ಶೇಕಡ 10ರಷ್ಟು ಆಕ್ಸಿಜೆನ್ ಪೂರೈಕೆ ಆಗುತ್ತಿರುವುದು ರಷ್ಯಾ ಕಾಡುಗಳಿಂದ. ಅದರಲ್ಲೂ ರಷ್ಯಾ ಅರಣ್ಯ ಸಂಪತ್ತು ಬಹುಪಾಲು ಅವಲಂಬಿಸಿರುವುದು ಸೈಬೀರಿಯಾ ಮೇಲೆ. ಆದರೆ ಗ್ಲೋಬಲ್ ವಾರ್ಮಿಂಗ್‌ ವ್ಯತಿರಿಕ್ತ ಪರಿಣಾಮ ಹೆಚ್ಚಾಗುತ್ತಿದೆ. ಸೈಬೀರಿಯಾದಲ್ಲಿ ಹಬ್ಬಿರುವ ಕಾಡ್ಗಿಚ್ಚು ಮಾನವನ ವಿನಾಶಕ್ಕೆ ನಾಂದಿ ಹಾಡಿದಂತಿದೆ. ಏಕೆಂದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಹಬ್ಬಿರುವ ಅರಣ್ಯ ಪ್ರದೇಶ ಹಾಗೂ ಅಲ್ಲಿನ ಮಣ್ಣು ಭಾರಿ ಪ್ರಮಾಣದಲ್ಲಿ ಕಾರ್ಬನ್ ಸಂಯುಕ್ತ ಒಳಗೊಂಡಿರುತ್ತದೆ. ಹೀಗಾಗಿಯೇ ಇಲ್ಲಿ ಕಾಡ್ಗಿಚ್ಚಿನ ಪರಿಣಾಮ ಊಹೆಗೂ ನಿಲುಕದಷ್ಟು ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮೊನಾಕ್ಸೈಡ್ ವಾತಾವರಣ ಸೇರುತ್ತಿದೆ.

 ಇಂಡೋನೇಷ್ಯಾಗೆ ಕಂಟಕ

ಇಂಡೋನೇಷ್ಯಾಗೆ ಕಂಟಕ

ಜ್ವಾಲಾಮುಖಿ, ಸುನಾಮಿ, ಪ್ರವಾಹ, ಭಾರಿ ಮಳೆ, ಸಮುದ್ರದ ನೀರಿನ ಮಟ್ಟ ಏರಿಕೆ ಹೀಗೆ ಇಂಡೋನೇಷ್ಯಾಗೆ ಒಂದಾದ ನಂತರ ಮತ್ತೊಂದು ಕಂಟಕ ಎದುರಾಗುತ್ತಿದೆ. ಸದ್ಯ ವಿಜ್ಞಾನಿಗಳು ನೀಡಿರುವ ಎಚ್ಚರಿಕೆ ಮುಖ್ಯವಾಗಿ ಇಂಡೋನೇಷ್ಯಾಗೆ ಅನ್ವಯಿಸುವಂತಿದೆ. ಈಗಾಗ್ಲೇ ಇಂಡೋನೇಷ್ಯಾದ ಜಕಾರ್ತಾ ಸೇರಿದಂತೆ ಹಲವು ದೊಡ್ಡ ದೊಡ್ಡ ನಗರಗಳಿಗೆ ಸಮುದ್ರದ ನೀರಿನ ಮಟ್ಟ ಏರಿಕೆ ಪರಿಣಾಮ ಕಂಟಕ ಎದುರಾಗಿದೆ. ಭವಿಷ್ಯದಲ್ಲಿ ಇದು ಮತ್ತಷ್ಟು ಹೆಚ್ಚುವ ಅಪಾಯವಿದೆ. ಇಂಡೋನೇಷ್ಯಾದ ಕರಾವಳಿ ನಗರಗಳು ಸಮುದ್ರದಲ್ಲಿ ಮುಳುಗಿರುವ ದೃಶ್ಯ ಸ್ಯಾಟಲೈಟ್ ಚಿತ್ರಗಳ ಮೂಲಕ ಕನ್ಫರ್ಮ್ ಆಗುತ್ತಿದೆ. ದಿನದಿಂದ ದಿನಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿದೆ.

 ಜಾಗತಿಕ ತಾಪಮಾನ ಏರಿಕೆ

ಜಾಗತಿಕ ತಾಪಮಾನ ಏರಿಕೆ

ಜಾಗತಿಕ ತಾಪಮಾನ ಏರಿಕೆ ಹಾಗೂ ಇದರಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಬಲಿ ಆಗುವುದೇ ದ್ವೀಪ ರಾಷ್ಟ್ರಗಳು. ಏಕೆಂದರೆ ಧ್ರುವ ಪ್ರದೇಶದ ಹಿಮ ಕರಗಿ, ಸಮುದ್ರದ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಕರಾವಳಿ ಭಾಗದ ಅದರಲ್ಲೂ ಸಣ್ಣಪುಟ್ಟ ದ್ವೀಪ ರಾಷ್ಟ್ರಗಳ ಜನ ನಲುಗಿ ಹೋಗುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಾ ಬಂದರೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರುತ್ತಿಲ್ಲ. ಸಮುದ್ರದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಸಹಜವಾಗಿ ಭೂಮಿಯನ್ನ ನುಂಗಿ ಹಾಕುತ್ತಿದೆ. ಈಗಾಗಲೇ ಅದೆಷ್ಟೋ ಸಣ್ಣಪುಟ್ಟ ದ್ವೀಪಗಳು ಹೀಗೆ ಸಮುದ್ರದ ಆರ್ಭಟಕ್ಕೆ ಮುಳುಗಿ ಹೋಗಿರುವ ಉದಾಹರಣೆ ಇದೆ.

 ಪ್ರಾಕೃತಿಕ ವಿಕೋಪ

ಪ್ರಾಕೃತಿಕ ವಿಕೋಪ

ಜಾಗತಿಕ ತಾಪಮಾನ ಏರಿಕೆ ಹಾಗೂ ಇದರಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಬಲಿ ಆಗುವುದೇ ದ್ವೀಪ ರಾಷ್ಟ್ರಗಳು. ಏಕೆಂದರೆ ಧ್ರುವ ಪ್ರದೇಶದ ಹಿಮ ಕರಗಿ, ಸಮುದ್ರದ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಕರಾವಳಿ ಭಾಗದ ಅದರಲ್ಲೂ ಸಣ್ಣಪುಟ್ಟ ದ್ವೀಪ ರಾಷ್ಟ್ರಗಳ ಜನ ನಲುಗಿ ಹೋಗುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಾ ಬಂದರೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರುತ್ತಿಲ್ಲ. ಸಮುದ್ರದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಸಹಜವಾಗಿ ಭೂಮಿಯನ್ನ ನುಂಗಿ ಹಾಕುತ್ತಿದೆ. ಈಗಾಗಲೇ ಅದೆಷ್ಟೋ ಸಣ್ಣಪುಟ್ಟ ದ್ವೀಪಗಳು ಹೀಗೆ ಸಮುದ್ರದ ಆರ್ಭಟಕ್ಕೆ ಮುಳುಗಿ ಹೋಗಿರುವ ಉದಾಹರಣೆ ಇದೆ.

 ಬೆಚ್ಚಿಬೀಳುವ ಸಂಗತಿ

ಬೆಚ್ಚಿಬೀಳುವ ಸಂಗತಿ

2020ರ ಬಗ್ಗೆ ಬೆಚ್ಚಿಬೀಳುವ ಸಂಗತಿಯೊಂದನ್ನ ವಿಜ್ಞಾನಿಗಳು ಬಿಚ್ಚಿಟ್ಟಿದ್ದಾರೆ. ಮಾನವ ಬದುಕಿನ ಇತಿಹಾಸದಲ್ಲಿ 2020 3ನೇ ಅತಿಹೆಚ್ಚು ತಾಪಮಾನ ತೋರಿದ ವರ್ಷವಾಗಿದೆ. 2016, 2019ರ ನಂತರ 2020 ಅತಿ ಹೆಚ್ಚಾದ ತಾಪಮಾನ ಹೊಂದಿರುವ ವರ್ಷವಾಗಿದೆ. ತಾಪಮಾನ ಏರಿಕೆ ಕಡಿವಾಣಕ್ಕೆ ಎಷ್ಟೇ ಮುತುವರ್ಜಿ ವಹಿಸಿದರೂ ಪ್ರಯೋಜನವಾಗುತ್ತಿಲ್ಲ. ತಾಪಮಾನ ಏರಿಕೆ ತಡೆಯಲು ಪ್ಯಾರಿಸ್ ಒಪ್ಪಂದಂತಹ ಪ್ರಯತ್ನ ವಿಫಲವಾಗಿದೆ. 2020ರಲ್ಲಿ ತಾಪಮಾನ 1.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ರೆ ರಷ್ಯಾದ ಸೈಬೀರಿಯಾ ಪ್ರಾಂತ್ಯದಲ್ಲಿ ಅತಿಹೆಚ್ಚು ತಾಪಮಾನ ಏರಿಕೆಯಾಗಿದೆ. ಸೈಬೀರಿಯಾ ಪ್ರಾಂತ್ಯದಲ್ಲಿ 2020ರಲ್ಲಿ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡಿದೆ. ಇದು ರಷ್ಯಾದ ಇತಿಹಾಸದಲ್ಲೇ ಭಯಾನಕ ವರ್ಷವಾಗಿದೆ.

English summary
Scientists warned that Greenland ice sheet will completely melt in 900 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X