ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿವಾಳಿಯತ್ತ ಗ್ರೀಸ್: ದಿಕ್ಕೆಟ್ಟು ಹೋದ ದೇಶದ ಜನತೆ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಕೆಲವು ದಿನಗಳ ಹಿಂದೆ ಗ್ರೀಸ್ ನಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಪಕ್ಷ, ಮಿತವ್ಯಯದ (Austerity) ವಿರುದ್ದ ಪ್ರಚಾರ ನಡೆಸಿ, ಅಧಿಕಾರಕ್ಕೆ ಬಂದಿತ್ತು. Austerity ಅಂದರೆ, ಸಾರ್ವಜನಿಕರಿಗೆ ಸರಕಾರ ಮಾಡುವ ಖರ್ಚ ಉಳಿಸಲು ತೆಗೆದುಕೊಳ್ಳುವ ಅತ್ಯಂತ ಕಠಿಣ ಕ್ರಮ.

2009 ಅಥವಾ ಅದಕ್ಕೂ ಕೆಲವು ವರ್ಷ ಮೊದಲೇ ಶುರುವಾದ ಎಕನಾಮಿಕ್ ಕ್ರೈಸಿಸ್, ಯೂರೋಪಿನ ಹಲವು ದೇಶಗಳ ತಳಪಾಯವನ್ನೇ ಅಲುಗಾಡಿಸಿತ್ತು. ಅದರಂತೇ, ಪೋರ್ಚುಗಲ್, ಇಟೆಲಿ, ಸ್ಪೇನ್, ಗ್ರೀಸ್ ಮತ್ತು ಸೈಪ್ರಸ್ ದೇಶಗಳಿಗೆ ಯೂರೋಪಿನ ಯೂನಿಯನ್ ಒಕ್ಕೂಟ ಬಡ್ದಿ ರೂಪದಲ್ಲಿ ಸಾಲ ನೀಡಿತ್ತು.

ಜೊತೆಗೆ, ಬಡ್ಡಿ ಸಮೇತ ಅಸಲು ವಾಪಸ್ ಮಾಡಲು ಗಡುವು ವಿಧಿಸಿತ್ತು. ಹಾಗೇ ವಾಪಸ್ಸು ಕೊಡಲು ಏನೇನು ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿ ತನ್ನ ಅಣತಿಯಂತೆಯೇ ನಡೆಯಬೇಕು ಎನ್ನುವ ಷರತ್ತನ್ನು ವಿಧಿಸಿತ್ತು.

ಇದರಿಂದ ಆರಾಮಾಗಿ ಬದುಕಿ ಕೊಂಡಿದ್ದ ಗ್ರೀಸ್ ಜನರು ಒಮ್ಮೆಲೆ ತಮ್ಮ ಮೇಲೆ ಎರಗಿದ ಹಣಕಾಸು ಬಿಕ್ಕಟ್ಟಿನಿಂದ ಕೆಂಗೆಟ್ಟರು. ಜೊತೆಗೆ ತಮ್ಮ ಸರಕಾರದ ವಿರುದ್ದ ನಿತ್ಯ ಆಂದೋಲನ ಶುರು ಮಾಡಿದರು.

Greek debt crisis, created instability in the country - Part 2

ಗ್ರೀಸ್ ದೇಶದ ಪ್ರಧಾನಿ ಅಲೆಕ್ಷಿಸ್ ತ್ಸಿಪ್ರಾಸ್, ಯೂರೋಪಿಯನ್ ಯೂನಿಯನ್ ಬಳಿ ಕನಿಷ್ಠ 313 ಬಿಲಿಯನ್ ಯುರೋ ಸಾಲ ಮನ್ನಾ ಮಾಡಲು ಮನವಿ ಮಾಡಿಕೊಂಡಿದ್ದಲ್ಲದೇ, ತಕ್ಷಣ ಸರಕಾರ ನಡೆಸಲು ಏಳು ಬಿಲಿಯನ್ ಯುರೋ ಹೊಸ ಸಾಲ ಕೊಡಿ ಎನ್ನುವ ಬೇಡಿಕೆಯಿಟ್ಟರು. ಷೇರು ಮಾರುಕಟ್ಟೆ ಹೈರಾಣವಗಲು ಇದುವೇ ಮೂಲ ಕಾರಣವಾಯಿತು.

ಇದರಿಂದ ಯುರೋ ಕರೆನ್ಸಿ ಟ್ರೇಡ್ ಮಾಡುತಿದ್ದ ದೇಶಗಳು ಭಯಕ್ಕೆ ಬಿದ್ದವು, ಆಕಸ್ಮಾತ್ ಗ್ರೀಸ್ ಕೊಟ್ಟ ಸಾಲವನ್ನು ವಾಪಸ್ಸು ಕೊಡದೆ ಹೋಗಿ ಯುರೋ ಜೋನ್ ನಿಂದ ಹೊರನೆಡೆದರೆ ಎನ್ನುವ ಭಯ ಇತರ ದೇಶಗಳಿಗೆ ಕಾಡಲಾರಂಭಿಸಿತು.

ಹೇಗಾದರೂ ಆಗಲಿ ನಮ್ಮ ರಕ್ಷಣೆ ನಮ್ಮದು ಎನ್ನುವ ಭಾವದಿಂದ ಯುರೋ ಜೂನ್ ದೇಶಗಳು ಡಾಲರ್ ನಲ್ಲಿ ಟ್ರೇಡ್ ಮಾಡಲಾರಂಭಿಸಿದವು. ಇದರ ಪರಿಣಾಮ ಯುರೋ ಶುರುವಾದ ಹೊಸತರಲ್ಲಿ ಒಂದು ಯುರೋ ಸುಮಾರು ಬೆಲೆ ತೊಂಬತ್ತು ರೂಪಾಯಿ ಇದ್ದದ್ದು, ಎಪ್ಪತ್ತರ ಆಸುಪಾಸಿಗೆ ಬಂದು ನಿಂತಿತು, ಗ್ರೀಸ್ ದಿವಾಳಿಯತ್ತ ಬಂದು ನಿಂತಿತು.

ಗ್ರೀಸ್ ತೆಗೆದು ಕೊಂಡ ಸಾಲ ತೀರಿಸದೆ ಯುರೋ ಗ್ರೂಪ್ ನಿಂದ ಹೊರ ನಡೆದರೆ ಏನಾಗಬಹುದು ?

* ಹೊಸದಾಗಿ ಸಾಲ ಕೊಡುವರಿಲ್ಲದೇ ಗ್ರೀಸ್, ಸೈಪ್ರಸ್ ದೇಶದಂತೆ ಅಧಿಕೃತವಾಗಿ 'ದಿವಾಳಿ' ಎನ್ನುವ ಕಪ್ಪುಪಟ್ಟಿಗೆ ಸೇರಬಹುದು.
* ಹೂಡಿಕೆದಾರರು, ಕೇವಲ ಗ್ರೀಸ್ ನಲ್ಲಿ ಮಾತ್ರ ಅಲ್ಲ, ಯುರೋ ಜೋನ್ ನಲ್ಲಿ ಹೂಡಿಕೆ ಮಾಡಲು ಶಂಕೆ ವ್ಯಕ್ತಪಡಿಸಿದರೆ, ಗ್ರೀಸ್ ಜೊತೆ ಸ್ಪೇನ್, ಇಟೆಲಿ, ಪೋರ್ಚುಗಲ್ ದೇಶಗಳು ಕೂಡಾ ಸಂಕಷ್ಟ ಎದುರಿಸಬೇಕಾಗಿ ಬರಬಹುದು.
* ಹೂಡಿಕೆದಾರ, ತಮ್ಮ ಹಳೆ ಹೂಡಿಕೆಯನ್ನು ಹಿಂದಕ್ಕೆ ಪಡೆಯಲು ಹವಣಿಸಿದರೆ, ಗ್ರೀಸ್ ಮಾರುಕಟ್ಟೆ ಪೂರ್ಣ ಕುಸಿತ ಕಾಣಬಹುದು.
* ರಾಜಕೀಯ ಅಸ್ಥಿರತೆ ಉಂಟಾಗಿ, ಬಲಿಷ್ಠ ರಾಷ್ಟ್ರಗಳು ತಮ್ಮ ಹಣ ಬಲದಿಂದ ಗ್ರೀಸ್ ದೇಶದ ಪ್ರಮುಖ ಬಂದರು , ವಿಮಾನ ನಿಲ್ದಾಣ, ಶಿಕ್ಷಣ ಸಂಸ್ಥೆ ಇತ್ಯಾದಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲೂ ಬಹುದು.

English summary
Greek debt crisis, created instability in the country - Part 2
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X