ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿವಾಳಿಯತ್ತ ಗ್ರೀಸ್ : ಎಟಿಎಂನಲ್ಲಿ ಹಣ ಇಲ್ಲ, ಬ್ಯಾಂಕ್ ತೆರೆದಿಲ್ಲ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಯುರೊ ಕರೆನ್ಸಿ ವಲಯದ ಸದಸ್ಯ ರಾಷ್ಟ್ರಗಳು ಗ್ರೀಸ್‌ ದೇಶಕ್ಕೆ ನೀಡಿದ್ದ ಸಾಲ ಮರುಪಾವತಿ ಗಡುವು ಮಂಗಳವಾರಕ್ಕೆ (ಜೂ 30) ಮುಕ್ತಾಯವಾಗಲಿದ್ದು ಗ್ರೀಸ್ 'ದಿವಾಳಿ ರಾಷ್ಟ್ರ' ಎಂದು ಘೋಷಣೆಯಾಗುವ ಸಾಧ್ಯತೆ ಇದೆ.

ದೇಶದ ಈ ಆರ್ಥಿಕ ದುಸ್ಥಿತಿಯಿಂದ ಗ್ರೀಸ್ ಜನತೆ ನೋವಿನಲ್ಲಿದ್ದಾರೆ. ಎಟಿಎಂನಲ್ಲಿ ಹಣ ಇಲ್ಲ, ಬ್ಯಾಂಕ್ ಬಾಗಿಲು ತೆಗೆದಿಲ್ಲ. ಹತ್ತಾರು ವರ್ಷದ ಹಣ ಕ್ಷಣದಲ್ಲಿ ಕರಗಿ ಹೋಗುತ್ತಿದೆ. ಕೆಲಸ ಇಲ್ಲ, ಮುಂದೇನು ಎನ್ನುವುದರ ಅರಿವು ಇಲ್ಲ, ಇದು ಗ್ರೀಸ್ ದೇಶದ ಈಗಿನ ಪರಿಸ್ಥಿತಿ.

ಗ್ರೀಸ್ ದೇಶ ಈ ಪರಿಸ್ಥಿತಿಗೆ ಬರಲು ಕಾರಣವೇನು? ಗ್ರೀಸ್ ಷೇರು ಮಾರುಕಟ್ಟೆ ನಡುಗಿದ್ದೇಕೆ? ಆಕಸ್ಮಾತ್ ಗ್ರೀಸ್ ದೇಶ ಯೂರೋಪಿಯನ್ ಯೂನಿಯನ್ ನಿಂದ ಪಡೆದ ಸಾಲ ಹಿಂತಿರುಗಿಸದೇ, ಯೂನಿಯನ್ ನಿಂದ ಹೊರನಡೆದರೆ ಏನಾಗಬಹುದು?

Greek debt crisis, created instability in the country - Part 1

ಇಂತಹ ಆತಂಕಗಳಿಗೆ ಉತ್ತರ ತಿಳಿಯಬೇಕಾದಲ್ಲಿ ಮೊದಲು ಯೂರೋಪಿಯನ್ ಯೂನಿಯನ್ ಎಂದರೇನು? ಅವರೇಕೆ ಯುರೋ ಎನ್ನುವ ಕರೆನ್ಸಿ ಹುಟ್ಟುಹಾಕಿದರು? ಎನ್ನುವುದರ ಬಗ್ಗೆ ತಿಳಿಯುವುದು ಅವಶ್ಯಕ. (ಮಂಗಳವಾರದಿಂದ ಗ್ರೀಸ್ ದಿವಾಳಿ ರಾಷ್ಟ್ರ)

ಯೂರೋಪಿಯನ್ ಯೂನಿಯನ್ 1951ರಲ್ಲಿ ಆರು ದೇಶಗಳ ಒಕ್ಕೂಟದೊಂದಿಗೆ ಆರಂಭವಾಗಿ, ಇಂದಿಗೆ 28 ಸದಸ್ಯ ದೇಶಗಳನ್ನು ಹೊಂದಿದೆ. ವಿನಿಮಯ ಒಂದು ದೇಶದ ಕರೆನ್ಸಿ ಹಾಗೂ ಇನ್ನೊಂದು ದೇಶದ ಕರೆನ್ಸಿಗೆ ಯಾವಾಗಲೂ ಭಿನ್ನವಾಗಿರುತ್ತದೆ.

ಈ ಭಿನ್ನತೆ ಹೋಗಲಾಡಿಸಿ ಒಕ್ಕೂಟದ ಎಲ್ಲಾ ದೇಶಗಳು ಒಂದೇ ಕರೆನ್ಸಿ ಉಪಯೋಗಿಸಿದರೆ, ಸದಸ್ಯ ದೇಶಗಳ ನಡುವೆ ವ್ಯಾಪಾರ ವಹಿವಾಟು ಬಹಳ ಸುಲಭವಾಗಲಿದೆ ಎನ್ನುವುದು ಇದರ ಉದ್ದೇಶ.

ಜೊತೆಗೆ, ವಿಶ್ವ ವ್ಯಾಪಾರದಲ್ಲೂ ಚೌಕಾಸಿ ಮಾಡಲು ಅನುಕೂಲ. ಹೀಗಾಗಿ ಯುರೋಪಿಯನ್ ಯೂನಿಯನ್ 'ಯುರೋ' ಎನ್ನುವ ಕರೆನ್ಸಿಯನ್ನು ಸೃಷ್ಟಿಸಿತು. ಬ್ರಿಟನ್ ಈ ಯೂನಿಯನ್ ನಲ್ಲಿ ಇದ್ದರೂ, ಯುರೋ ಹಣವನ್ನು ಮಾತ್ರ ತನ್ನ ಕರೆನ್ಸಿಯನ್ನಾಗಿ ಒಪ್ಪಿಕೊಳ್ಳಲಿಲ್ಲ.

ಒಂದು ದೇಶ ಮತ್ತು ಇನ್ನೊಂದು ದೇಶದ ನಡುವೆ ವ್ಯಾಪಾರ ವಹಿವಾಟು ನಡೆಯುವುದು ಎರಡೂ ದೇಶಕ್ಕೂ ಸಮ್ಮತವಾದ ಕರೆನ್ಸಿಯಲ್ಲಿ. ಡಾಲರ್ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಟ್ರೇಡೆಡ್ ಕರೆನ್ಸಿ ಅಂದರೆ ಅದು ಯುರೋ. ವಹಿವಾಟಿನಲ್ಲಿ ಏನೂ ಮಾಡದೇ ಯೂರೋ ಮೂಲಕ ವಹಿವಾಟು ನಡೆಸಿದ್ದಕ್ಕೆ ಯೂರೋಪಿಯನ್ ಯೂನಿಯನಿಗೆ ಒಂದಷ್ಟು ಹಣ ಸಂದಾಯವಾಗುತ್ತದೆ.

ಹೀಗೆ ವಿಶ್ವದ ಹಲವು ರಾಷ್ಟ್ರಗಳು ನಡೆಸುವ ವ್ಯಾಪಾರದಲ್ಲಿ ಹೆಚ್ಚು ಕೆಲಸ ಮಾಡದೇ ಹಣ ಗಳಿಸುವ ಅಮೆರಿಕ ಮತ್ತು ಯುರೋ ಜೋನ್ ದೇಶಗಳು ಇಂದು ಈ ದೈನೇಸಿ ಸ್ಥಿತಿ ಹೇಗೆ ಬಂದವು? ಒಕ್ಕೂಟ ವ್ಯವಸ್ಥೆಯಲ್ಲಿನ ಸದಸ್ಯ ರಾಷ್ಟ್ರಗಳ ಅಂತರಿಕ ಜೀವನಶೈಲಿ ಮತ್ತು ನೀತಿಗಳು ಯುರೋ ಜೋನ್ ದೇಶಗಳನ್ನು ಇಂದು ಈ ಹಂತಕ್ಕೆ ತಳ್ಳಿವೆ.

English summary
Greek debt crisis, created instability in the country - Part 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X