ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಯನೀಯ ಸ್ಥಿತಿ ತಲುಪಿದ ಗ್ರೀಸ್ ದೇಶದ ಕಥೆ, ನೂರೆಂಟು ವ್ಯಥೆ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಸಾಲ ತೆಗೆದು ಕೊಳ್ಳುವಾಗ ಇರುವ ಖುಷಿ ಮತ್ತು ಮಜಾ ಅದನ್ನು ವಾಪಸ್ ಕೊಡುವಾಗ ಇರುವುದಿಲ್ಲ. ಇದು ಜಗತ್ತಿನ ಎಲ್ಲಾ ದೇಶ, ಜನರಿಗೂ ಅನ್ವಯ! ಗ್ರೀಸ್ ದೇಶ ಕೂಡಾ ಇದಕ್ಕೆ ಹೊರತಾಗಿಲ್ಲ.

2001ರಲ್ಲಿ ಯುರೋ ಕರೆನ್ಸಿಯನ್ನು ಗ್ರೀಸ್ ಒಪ್ಪಿಕೊಳ್ಳುವ ಮೊದಲು 'ದ್ರಾಚ್ಮ' (ದ್ರಾಚ್ಮ ಮತ್ತು ಲೆಪ್ಪ ಗ್ರೀಸ್ ದೇಶದ ಕರೆನ್ಸಿಯ ಹೆಸರು) 340 ದ್ರಾಚ್ಮ 75 ಲೆಪ್ಟ ಒಂದು ಯುರೋಗೆ ಸಮವಾಗಿತ್ತು.

ಯುರೋ, ಯೂರೋಪಿಯನ್ ಒಕ್ಕೂಟದ ಕರೆನ್ಸಿಯಾಗಿ ಜನವರಿ 1, 2001ರಿಂದ ಜಾರಿಗೆ ಬಂತು. ಫ್ರಾನ್ಸ್ ಮತ್ತು ಜರ್ಮನಿ ದೇಶಕ್ಕೆ ಇದರಿಂದ ಹೆಚ್ಚಿನ ಏರುಪೇರಾಗಲಿಲ್ಲ. ಆದರೆ ಯುರೋಪಿನ ಇತರ ರಾಷ್ಟ್ರಗಳಾದ ಸ್ಪೇನ್, ಪೋರ್ಚುಗಲ್, ಇಟಲಿ ಸೇರಿದಂತೆ ಇನ್ನಿತರ ದೇಶಗಳಲ್ಲಿ ಆದ ಬದಲಾವಣೆ ರಾತ್ರಿ ಹಗಲಿನಷ್ಟು. (ದಿವಾಳಿಯತ್ತ ಗ್ರೀಸ್)

ಉದಾರಣೆಗೆ 150 ದ್ರಾಚ್ಮಗೆ ಒಂದು ಲೋಟ ಕಾಫಿ ಸಿಗುತಿತ್ತು, ಸ್ಪೇನಿನಲ್ಲಿ 100 ಪೆಸೆಟಾಗೆ (ಯುರೋಗೆ ಮೊದಲು ಸ್ಪ್ಯಾನಿಷ್ ಕರೆನ್ಸಿ, 166.386 ಪೆಸೆಟಾ 1ಯುರೋಗೆ ಸಮ) ಒಂದು ಲೋಟ ಕಾಫಿ ಸಿಗುತ್ತಿತ್ತು.

ಯುರೋ ಬಂದ ನಂತರ ಒಂದು ಯುರೋ ಅಂದರೆ ವಸ್ತುವಿನ ಬೆಲೆ ನೂರು ಪಟ್ಟು ಹೆಚ್ಚಿತು. ಒಂದು ಲೆಕ್ಕದಲ್ಲಿ ಯುರೋ ಜೋನ್ ಹುಟ್ಟವಾಗಲೆ ಅಂಗವಿಕಲವಾಗಿತ್ತು ಅನ್ನಬಹುದು.

28 ದೇಶಗಳ ಯುರೋ ಜೋನ್ ಅನ್ನು ವಿತ್ತೀಯವಾಗಿ ಭಾಗ ಮಾಡುವುದಾದರೆ ಫ್ರಾನ್ಸ್ ಮತ್ತು ಜರ್ಮನಿ 56 ಭಾಗ, ಸ್ಪೇನ್ 11 ಭಾಗ, ಇಟಲಿ 9 ಭಾಗ, ಪೋರ್ಚುಗಲ್ ಹಾಗು ಗ್ರೀಸ್ ತಲಾ 2 ಭಾಗ, ಉಳಿದ 22 ದೇಶಗಳ ಒಟ್ಟು ವಿತ್ತೀಯ ಪಾಲುದಾರಿಕೆ 100ಕ್ಕೆ 20.

2003ರಿಂದ ಉಚ್ಚ್ರಾಯ ಸ್ಥಿತಿ ತಲುಪಿದ ಯುರೋ ಜೋನ್ ನಲ್ಲಿ ಮುಕ್ಕಾಲು ಪಾಲು ಆಡಳಿತ ಜರ್ಮನಿ ಹಾಗು ಫ್ರಾನ್ಸ್ ದೇಶದ್ದು, ಇತರ ಯೂರೋಪಿಯನ್ ದೇಶಗಳು ತಮ್ಮ ಮಟ್ಟಕ್ಕೆ ಬರಬೇಕೆಂಬ ಘನ ಉದ್ದೇಶದಿಂದ ಈ ಎರಡು ದೇಶಗಳು ಸಾಲ ಕೊಡತೊಡಗಿದವು. ( ಗ್ರೀಸ್ ಜನಮತಗಣನೆ)

ಐಷಾರಾಮಿ ಕಟ್ಟಡಗಳು, ರಸ್ತೆಗಳು, ಪಾರ್ಕುಗಳು, ಹೀಗೆ ಬೇಕೇ ಬೇಡವೇ.. ಎನ್ನುವ ವಿವೇಚನೆ ಇಲ್ಲದೆ, ಲಂಗುಲಗಾಮಿ ಇಲ್ಲದೆ ಕೊಟ್ಟ ದುಡ್ಡ ಖರ್ಚು ಮಾಡಿದ್ದರ ಫಲ 2008ರಿಂದ ಉಲ್ಟಾ ಹೊಡೆಯಲು ಶುರುವಾಯಿತು.

ಇದೇ ವಿತ್ತೀಯ ಕೊರತೆ ಇಂದು ಗ್ರೀಸ್ ಒಳಗೊಂಡಂತೆ ಅನೇಕ ಯುರೋಪ್ ದೇಶಗಳ ದಿವಾಳಿ ಸ್ಥಿತಿಗೆ ತಂದು ನಿಲ್ಲಲು ಪ್ರಮುಖ ಕಾರಣ. ಮುಂದೆ ಓದಿ..

ಸಾಲ ಕೊಟ್ಟವರಿಂದ ಷರತ್ತು

ಸಾಲ ಕೊಟ್ಟವರಿಂದ ಷರತ್ತು

ಸಾಲ ಕೊಟ್ಟ ದೇಶದವರು ಷರತ್ತು ವಿಧಿಸತೊಡಗಿದರು, ಮಿತವ್ಯಯ ದಿಂದ ಬೇಸತ್ತ ಜನತೆ ಸೋಷಿಯಲಿಸ್ಟ್ ಪಾರ್ಟಿಯನ್ನು ಆರಿಸಿದರು. ಹೆಚ್ಚಿದ ಯೂರೋಪಿಯನ್ ಯೂನಿಯನಿನ ಒತ್ತಡ ತಾಳಲಾರದೆ ಕಳೆದ ಭಾನುವಾರ ಜುಲೈ ಐದರಂದು ಯೂರೋಪಿಯನ್ ಯೂನಿಯನಿನ ಷರತ್ತು ಗಳನ್ನು ಪಾಲಿಸಬೇಕೆ ಬೇಡವೇ ಎನ್ನುವ ಬಗ್ಗೆ ಸಾರ್ವತ್ರಿಕ ಜನಾಭಿಪ್ರಾಯ ಕೇಳಲಾಯಿತು. ಅಧಿಕಾರರೂಢ ಪಕ್ಷ ಬೇಡ 'ನೋ' ಎನ್ನುವುದರ ಪರವಾಗಿತ್ತು ಮತ್ತು ಶೇ. 61.31 ಜನತೆ ಪಕ್ಷದ ಪರವಾಗಿ ಮತಚಲಾಯಿಸಿದರು.

ವಿತ್ತಸಚಿವರ ರಾಜೀನಾಮೆ

ವಿತ್ತಸಚಿವರ ರಾಜೀನಾಮೆ

ಜನರ ಒಲವು ತಮ್ಮ ಪರವಾಗಿದ್ದರೂ, ವಿತ್ತ ಮಂತ್ರಿ ಯಾನಿಸ್ ವರೌ ಫಾಕಿಸ್ ರಾಜೀನಾಮೆ ನೀಡಿದರು. ಯೂರೋಪಿನ್ ಯೂನಿಯನ್ ಹಾಗೂ ಯೂರೋಪಿಯನ್ ಬ್ಯಾಂಕ್ ನಿಂದ ಸದಾ ಒತ್ತಡ ಹಾಕುವ ಮತ್ತು ಅದನ್ನು ಹಾಗೇ ಮುಂದುವರಿಸುವ ರಾಜಕೀಯ ನಡೆಯಿಂದ ಬೇಸತ್ತು ಹಣಕಾಸು ಸಚಿವರು ಈ ನಿರ್ಧಾರಕ್ಕೆ ಬಂದರು. " ಸಾಲ ಕೊಟ್ಟವರು ಭಯೋದ್ಪಾದಕರು, greece creditors are terrorists' ಎನ್ನುವ ಹೇಳಿಕೆಯನ್ನು ವಿತ್ತಸಚಿವರು ನೀಡಿದರು.

ವಿತ್ತೀಯ ಪರಿಣತರ ಪ್ರಕಾರ

ವಿತ್ತೀಯ ಪರಿಣತರ ಪ್ರಕಾರ

ವಿತ್ತೀಯ ಪರಿಣಿತರ ಪ್ರಕಾರ ಗ್ರೀಸ್ ಯುರೋ ಜೋನ್ ನಿಂದ ಹೊರ ಹೋಗಬಹುದು, ದ್ರಾಚ್ಮ ಕರೆನ್ಸಿ ಮತ್ತೆ ಚಲಾವಣೆಗೆ ತರಬಹುದು. ಇದಕ್ಕೆ expert ಗಳು ನೀಡುವ ಕಾರಣ, ಮುಂದಿನ ಸ್ಲೈಡಿನಲ್ಲಿ, ನೋಡಿ..

ದ್ರಾಚ್ಮ ಮತ್ತೆ ಗ್ರೀಸ್ ದೇಶದ ಕರೆನ್ಸಿಯಾದರೆ?

ದ್ರಾಚ್ಮ ಮತ್ತೆ ಗ್ರೀಸ್ ದೇಶದ ಕರೆನ್ಸಿಯಾದರೆ?

* ದ್ರಾಚ್ಮ ಮತ್ತೆ ಗ್ರೀಸ್ ದೇಶದ ಕರೆನ್ಸಿಯಾದರೆ, ಜಗತ್ತಿನ ಇತರ ಕರೆನ್ಸಿ ಗಳ ಮುಂದೆ ಅದನ್ನು devalue (ಮೌಲ್ಯ ಕುಸಿತ ) ಮಾಡಲು ಯಾರ ಅನುಮತಿಯೂ ಬೇಕಾಗಿಲ್ಲ.
* ಹೀಗೆ ಮೌಲ್ಯ ಕುಸಿತ ಮಾಡುವುದರಿಂದ, ಜನರ ಖರೀದಿಸುವ ಶಕ್ತಿ ಹೆಚ್ಚುತ್ತದೆ .
* ಅಪಮೌಲ್ಯ ದ್ರಾಚ್ಮ ಅಂತರರಾಷ್ಟೀಯ ಹೂಡಿಕೆದಾರರ ಸೆಳೆಯಬಹುದು.
* ವಸ್ತು ಹಾಗೂ ಸೇವೆಯ ಶುಲ್ಕ ಕಡಿಮೆ ಆಗುವುದರಿಂದ ದೇಶದಲ್ಲಿ ಪ್ರವಾಸೋದ್ಯಮ ಹೆಚ್ಚುತ್ತದೆ, ಹಾಗೂ ಆ ಮೂಲಕ ದೇಶದಲ್ಲಿ ಹಣದ ಹರಿವು ಹೆಚ್ಚುತ್ತದೆ .
* 100 ಯುರೋ ಏನು ಖರೀದಿಸ ಬಹುದೋ ಅದನ್ನು 100 ದ್ರಾಚ್ಮದಿಂದ ಖರೀದಿಸ ಬಹುದಾದರೆ ಯಾರು ಬೇಡ ಎನ್ನುವರು ?

ಗ್ರೀಸ್ ಮುಂದಿನ ಹಾದಿ ಕಠಿಣ

ಗ್ರೀಸ್ ಮುಂದಿನ ಹಾದಿ ಕಠಿಣ

ಹೊಸ ದ್ರಾಚ್ಮ ಮುದ್ರಣ, ಅದರ ಚಲಾವಣೆ, ಅದರ ಮೌಲ್ಯ ಕಟ್ಟುವುದು, ಇವೆಲ್ಲಾ ಏನಿಲ್ಲ ಅಂದರೂ ಆರೇಳು ತಿಂಗಳು ಇದಕ್ಕೆ ತಗಲಬಹುದು. ಅದಾದ ನಂತರ ಜನರಲ್ಲಿ ದ್ರಾಚ್ಮದ ಬಗ್ಗೆ ವಿಶ್ವಾಸ ತುಂಬುವ ಕೆಲಸ, ಹೂಡಿಕೆದಾರರ ವಿಶ್ವಾಸಗಳಿಸುವ ಕೆಲಸ. ಪಡೆದ ಸಾಲವನ್ನು ಇಂದಲ್ಲ ನಾಳೆ ವಾಪಸ್ಸು ಕೊಡಲೇ ಬೇಕು, ಒಟ್ಟಿನಲ್ಲಿ ಗ್ರೀಸ್ ದೇಶ ಹಾಗು ಅಲ್ಲಿನ ಜನತೆ ಈಗಿನ ಪರಿಸ್ಥಿತಿ ಮತ್ತು ಮುಂದೆ ಸವೆಸಬೇಕಾದ ಹಾದಿ ಬಹು ಕಠಿಣ.

English summary
Greece debt crisis: Tough days ahead after country voted to reject the terms of bailout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X