ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀಸ್ ಬಿಕ್ಕಟ್ಟು: ಜನಮತ ಗಣನೆ ಏನೆನ್ನುತ್ತದೆ?

|
Google Oneindia Kannada News

ಅಥೆನ್ಸ್, ಜು, 06: ಸಾಲದ ಬಿಕ್ಕಟ್ಟು ಎದಿರಿಸುತ್ತಿರುವ ಗ್ರೀಸ್ ನಲ್ಲಿ ಜನಮತಗಣನೆ ಮಾಡಲಾಗಿದೆ. ವಿದೇಶಗಳಿಂದ ಪಡೆದ ಸಾಲದ ಮರುಪಾವತಿ ಅವಧಿಯನ್ನು ಹೆಚ್ಚಳ ಮಾಡಿಕೊಳ್ಳಲು ಸಾಲ ನೀಡಿದ ದೇಶಗಳು ಹಾಕುವ ಷರತ್ತುಗಳನ್ನು ಒಪ್ಪಿಕೊಳ್ಳಬೇಕೆ? ಬೇಡವೇ? ಎಂದು ಜನರಿಗೆ ಪ್ರಶ್ನೆ ಕೇಳಲಾಗಿತ್ತು.

ಪ್ರತಿ 5 ಜನರಲ್ಲಿ ಒಬ್ಬ ಷರತ್ತು ವಿರೋಧಿಸಿದ್ದು, ಶೇ.60.4ರಷ್ಟು 'ಬೇಡ' ಎಂದಿದ್ದಾರೆ. ಉಳಿದ ಶೇ. 40 ರಷ್ಟು ನಾಗರಿಕರು ಷರತ್ತುಗಳನ್ನು ಒಪ್ಪಿಕೊಳ್ಳಬಹುದು ಎಂದು ಹೇಳಿದ್ದಾರೆ. ಜನತೆ ಷರತ್ತು ವಿರೋಧಿಸಿರುವುದು ಪ್ರಧಾನಿ ಅಲೆಕ್ಸಿಸ್‌ ಸಿಪ್ರಸ್‌ಗೆ ಜಯ ಸಿಕ್ಕಂತೆ ಆಗಿದೆ.

ಮರುಪಾವತಿ ಸಂಬಂಧ ಹಣಕಾಸು ಸಂಸ್ಥೆಗಳ ಜೊತೆ ಮತ್ತೆ ಗ್ರೀಸ್ ಮಾತುಕತೆ ನಡೆಸಬಹುದು. ಇದು ಗ್ರೀಸ್‌, ಯುರೋಪ್‌ ಒಕ್ಕೂಟದಿಂದ ಹೊರಬರಲು ಕಾರಣವಾಗಬಹುದು.[ಗ್ರೀಸ್ ದಿವಾಳಿ ರಾಷ್ಟ್ರ?]

greece

ಗ್ರೀಸ್‌ಗೆ ಭಾರೀ ಪ್ರಮಾಣದ ಸಾಲ ನೀಡಿದ್ದ ಜರ್ಮನಿ ಮತ್ತು ಇತರೆ ಹಲವು ಹಣಕಾಸು ಸಂಸ್ಥೆಗಳು ನಷ್ಟ ಅನುಭವಿಸಬೇಕಾಗುತ್ತದೆ. ಜನತೆ, ಷರತ್ತಿಗೆ ಒಪ್ಪಿಕೊಂಡಿದ್ದರೆ, ಗ್ರೀಸ್‌ ಸರ್ಕಾರ ಅನಿವಾರ್ಯವಾಗಿ ತೆರಿಗೆ ಪ್ರಮಾಣ ಹೆಚ್ಚಿಸಬೇಕಿತ್ತು, ಆರ್ಥಿಕ ಶಿಸ್ತು ಜಾರಿ ಹಾಗೂ ವೆಚ್ಚ ಕಡಿತದಂತಹ ಕ್ರಮಗಳನ್ನು ಜಾರಿಗೊಳಿಸಬೇಕಿತ್ತು.

ಗ್ರೀಸ್ ನಲ್ಲಾಗುತ್ತಿರುವ ಬೆಳವಣಿಗೆ ಪ್ರಪಂಚದ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ. ಭಾರತದ ಮಾರುಕಟ್ಟೆ ಹಿನ್ನಡೆಗೂ ಕಾರಣವಾಗಿದೆ. ಈಗಾಗಲೇ ಗ್ರೀಸ್ ನಲ್ಲಿ ಬ್ಯಾಂಕ್ ಗಳು ಬಾಗಿಲು ಹಾಕಿ ವಾರ ಕಳೆದಿದೆ. ಮುಂದೆ ಗ್ರೀಸ್ ತೆಗೆದುಕೊಳ್ಳುವ ನಿರ್ಧಾರ ಯುರೋಪಿಯನ್ ಮಾರುಕಟ್ಟೆಯ ದಿಕ್ಕನ್ನು ತೋರಿಸಲಿದೆ.

English summary
Greek voters have decisively rejected the terms of an international bailout. The final result in the referendum, published by the interior ministry, was 61.3% "No", against 40% who voted "Yes". Greece's governing Syriza party had campaigned for a "No", saying the bailout terms were humiliating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X