ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ಗೆ ಸಿಕ್ಕಿತಾ ಔಷಧಿ?; ಕುತೂಹಲ ಮೂಡಿಸಿದ ಡೊನಾಲ್ಡ್ ಟ್ರಂಪ್ ಟ್ವೀಟ್

|
Google Oneindia Kannada News

ಅಮೆರಿಕ, ಜುಲೈ 15 : ಜಗತ್ತಿನ ವಿವಿಧ ದೇಶಗಳು ಕೊರೊನಾ ವೈರಸ್ ಸೋಂಕಿಗೆ ಔಷಧಿ ಕಂಡುಹಿಡಿಯಲು ಪ್ರಯತ್ನ ನಡೆಸಿದೆ. ಈ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ಭಾರಿ ಚರ್ಚೆಗೆ ಕಾರಣವಾಗಿದೆ.

Recommended Video

China ಸೈನಿಕರಿಗೆ ಅವಮಾನ | Oneindia Kannada

ಡೊನಾಲ್ಡ್ ಟ್ರಂಪ್ ಮಾಡಿರುವ ಒಂದು ಲೈನ್ ಇರುವ ಟ್ವೀಟ್ ಜಗತ್ತಿನಲ್ಲಿ ಸಂಚಲನ ಉಂಟು ಮಾಡಿದೆ. ಅಮೆರಿಕ ಕೊರೊನಾ ವೈರಸ್ ಸೋಂಕಿಗೆ ಔಷಧಿ ಕಂಡುಹಿಡಿಯಿತೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಕೊವಿಡ್ 19 ಔಷಧಿ ಬೆಲೆ ಮಾತ್ರೆಯೊಂದಕ್ಕೆ 75 ರು ಮಾತ್ರ! ಕೊವಿಡ್ 19 ಔಷಧಿ ಬೆಲೆ ಮಾತ್ರೆಯೊಂದಕ್ಕೆ 75 ರು ಮಾತ್ರ!

Great News On Vaccines Tweets Donald Trump

ಬುಧವಾರ ಡೊನಾಲ್ಡ್ ಟ್ರಂಪ್ 'Great News on Vaccines!' ಎಂದು ಕೇವಲ ಒಂದು ಲೈನ್ ಟ್ವೀಟ್ ಮಾಡಿದ್ದಾರೆ. ಕೇವಲ ಅರ್ಧಗಂಟೆಯಲ್ಲಿ ಈ ಟ್ವೀಟ್‌ ಅನ್ನು 7.4 ಸಾವಿರ ಜನರು ರೀ ಟ್ವೀಟ್ ಮಾಡಿದ್ದಾರೆ.

ಸುಳ್ಳುಸುಳ್ಳು: 2020ರಲ್ಲಿ ಕೊವಿಡ್-19 ಔಷಧಿ ಸಿಗುತ್ತೆ ಎನ್ನುವುದೇ ಸುಳ್ಳು! ಸುಳ್ಳುಸುಳ್ಳು: 2020ರಲ್ಲಿ ಕೊವಿಡ್-19 ಔಷಧಿ ಸಿಗುತ್ತೆ ಎನ್ನುವುದೇ ಸುಳ್ಳು!

ಕೊರೊನಾ ವೈರಸ್ ಸೋಂಕಿತರು ಅತಿ ಹೆಚ್ಚು ಇರುವ ಜಗತ್ತಿನ ರಾಷ್ಟ್ರಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ 3,547,450 ಸೋಂಕಿತರು ಇದ್ದಾರೆ. 2ನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, 3ನೇ ಸ್ಥಾನದಲ್ಲಿ ಭಾರತವಿದೆ.

ಕೊವಿಡ್ 19: ಏಕಾಏಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬಳಕೆ ನಿಲ್ಲಿಸಿದ ಅಮೆರಿಕ ಕೊವಿಡ್ 19: ಏಕಾಏಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಬಳಕೆ ನಿಲ್ಲಿಸಿದ ಅಮೆರಿಕ

ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿಗೆ ಔಷಧಿ ಕಂಡುಹಿಡಿಯುವ ಪ್ರಯತ್ನಗಳು ನಡೆದಿದ್ದವು. ಈ ಪ್ರಯತ್ನ ಯಶಸ್ವಿಯಾಗಿಯೇ? ಎಂದು ಟ್ರಂಪ್ ತಮ್ಮ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿಲ್ಲ. ಡೊನಾಲ್ಡ್ ಟ್ರಂಪ್ ಮಾಡುವ ಮುಂದಿನ ಟ್ವೀಟ್ ಕುತೂಹಲ ಮೂಡಿಸಿದೆ.

ಭಾನುವಾರ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇಂದು ಅವರು ಔಷಧಿ ಬಗ್ಗೆ ಟ್ವೀಟ್ ಮಾಡಿದ್ದಾರೆ.

English summary
America president Donald Trump tweet goes viral. In a tweet he said that great news on vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X