ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನ್ಮಾರ್ ನಲ್ಲಿ ಹಿಂದೂಗಳ ಸಾಮೂಹಿಕ ಹತ್ಯೆ

|
Google Oneindia Kannada News

ಯಂಗೋನ್ (ಮ್ಯಾನ್ಮಾರ್), ಸೆಪ್ಟೆಂಬರ್ 25: ಮತೀಯ ಗಲಭೆಗೆ ತುತ್ತಾಗಿರುವ ಮ್ಯಾನ್ಮಾರ್ ನ ರಾಖಿನೆ ರಾಜ್ಯದ ಯೆ ಬೌ ಕ್ಯಾ ಎಂಬ ಹಳ್ಳಿಯಲ್ಲಿ ಸುಮಾರು 28 ಹಿಂದೂಗಳನ್ನು ಹತ್ಯೆ ಮಾಡಿರುವ ರೋಹಿಂಗ್ಯ ಮುಸ್ಲಿಮರು ಆ ಶವಗಳನ್ನು ಒಂದೇ ಗುಂಡಿಯಲ್ಲಿ ಹೂತುಹಾಕಿರುವುದನ್ನು ತಾನು ಪತ್ತೆ ಮಾಡಿರುವುದಾಗಿ ಮ್ಯಾನ್ಮಾರ್ ಸೇನೆ ಪ್ರಕಟಿಸಿದೆ.

ಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯಾ ಮುಸ್ಲಿಮರ ಸುತ್ತಮುತ್ತಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯಾ ಮುಸ್ಲಿಮರ ಸುತ್ತಮುತ್ತ

ರೋಹಿಂಗ್ಯ ಮುಸ್ಲಿಮರ ವಿರುದ್ಧ ಅಲ್ಲಿ ನಡೆದ ಸೇನಾ ಕಾರ್ಯಾಚರಣೆಯಿಂದಾಗಿ ಕ್ಷುದ್ರಗೊಂಡಿರುವ ರೋಹಿಂಗ್ಯ ಉಗ್ರವಾದಿಗಳು (ಅರಕಾನ್ ರೋಹಿಂಗ್ಯ ಸಾಲ್ವೇಷನ್ ಆರ್ಮಿ - ಎಆರ್ ಎಸ್ಎ) ಈ ಹಿಂದೂಗಳನ್ನು ಹತ್ಯೆ ಮಾಡಿದೆ ಎಂದು ಸೇನೆ ಹೇಳಿದೆ.

Grave Of 28 Hindus Killed By Rohingya Militants Found, Says Myanmar Army

ಯೆ ಬೌ ಕ್ಯಾ ಹಳ್ಳಿಯಲ್ಲಿ ತಾನು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಕೊಳತ ಶವಗಳ ವಾಸನೆಯು ಈ ಗುಂಡಿಯ ಕಡೆಗೆ ಸೈನಿಕರನ್ನು ಕರೆದೊಯ್ದಿದ್ದು, ಆಗ ಗುಂಡಿಯನ್ನು ತೋಡಿದಾಗ 20 ಹೆಂಗಸರ ಹಾಗೂ 8 ಗಂಡರ ಶವಗಳು ಪತ್ತೆಯಾಗಿವೆ. ಇವುಗಳಲ್ಲಿ 10 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳ ಸುಮಾರು 6 ಶವಗಳೂ ಸೇರಿವೆ ಎಂದು ಸೇನೆ ಹೇಳಿರುವುದಾಗಿ ಎನ್ ಡಿ ಟಿವಿ ವರದಿ ಮಾಡಿದೆ.

English summary
Myanmar's army said Sunday it had discovered a mass grave containing the bodies of 28 Hindus, including women and children, in violence-wracked Rakhine state, blaming the killings on Muslim Rohingya militants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X