ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕರಿಗೆ 'ನರಕದ ಬಾಗಿಲು' ತೆರೆದ ಟರ್ಕಿ ಸರ್ಕಾರ: ಮೂರು ತಲೆ ನಾಯಿಯ ರಹಸ್ಯವೇನು?

|
Google Oneindia Kannada News

ಡೆನಿಜ್ಲಿಯ ಜೂನ್ 27: 'ನರಕದ ಬಾಗಿಲು' ಎಂದು ಕರೆಯಲ್ಪಡುವ ಅನೇಕ ಸ್ಥಳಗಳು ಜಗತ್ತಿನಲ್ಲಿವೆ. ಸಾಮಾನ್ಯವಾಗಿ ಜನರು ಈ ಸ್ಥಳಗಳಿಗೆ ಹೋಗಲು ಇಷ್ಟಪಡುವುದಿಲ್ಲ. ಆದರೆ ಈಗ ಟರ್ಕಿ ಸರ್ಕಾರವು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಅಡಿಯಲ್ಲಿ ಪಶ್ಚಿಮ ಪ್ರಾಂತ್ಯದ ಡೆನಿಜ್ಲಿಯಲ್ಲಿರುವ 'ನರಕದ ಬಾಗಿಲು' ಜನರಿಗಾಗಿ ತೆರೆಯಲ್ಪಟ್ಟಿದೆ. ಇದರ ಒಳಗೆ ಅನೇಕ ರಹಸ್ಯಗಳು ಹುದುಗಿವೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಟರ್ಕಿಯ ಡೆನಿಜ್ಲಿಯಲ್ಲಿ ಪುರಾತತ್ತ್ವ ಶಾಸ್ತ್ರದ ಸ್ಥಳವಿದೆ. ಇದನ್ನು ಸ್ಥಳೀಯರು ನರಕದ ಬಾಗಿಲು ಎಂದು ಕರೆಯುತ್ತಾರೆ. ಇದನ್ನು ಜೂನ್ 21 ರಂದು ಸಾರ್ವಜನಿಕರ ವೀಕ್ಷಣೆಗೆಂದು ತೆರೆಯಲಾಗಿದೆ. ಇದರಿಂದಾಗಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದನ್ನು ನೋಡಲು ತೆರಳುತ್ತಿದ್ದಾರೆ. ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಸ್ಥಳೀಯ ಆರ್ಥಿಕತೆಯನ್ನು ಇದು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಸರ್ಕಾರ ಭಾವಿಸುತ್ತದೆ. ಈ ಸ್ಥಳವು ಧಾರ್ಮಿಕ ಮಹತ್ವವನ್ನೂ ಹೊಂದಿದೆ.

ಪ್ರಾಣಿಗಳ ಬಲಿ ಕೊಡುವ ಸ್ಥಳ

ಪ್ರಾಣಿಗಳ ಬಲಿ ಕೊಡುವ ಸ್ಥಳ

ಈ ಪುರಾತತ್ತ್ವ ಶಾಸ್ತ್ರದ ಸ್ಥಳದಲ್ಲಿ ಗ್ರೀಕ್ ದೇವರು ಹೇಡಸ್ನ ಪ್ರತಿಮೆ ಇದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಇದನ್ನು ಭೂಗತ ಜಗತ್ತಿನ ದೇವರು ಎಂದು ಕರೆಯಲಾಗುತ್ತದೆ. ಆ ಪ್ರತಿಮೆಯ ಬಳಿ ಸರ್ಬರಸ್ ಎಂಬ ನಾಯಿಯ ಪ್ರತಿಮೆ ಇದ್ದು ಈ ನಾಯಿಗೆ ಮೂರು ತಲೆಗಳಿದ್ದವು ಎಂದು ಹೇಳಲಾಗುತ್ತದೆ. ಇದರಿಂದಾಗಿ ಈ ಹಿಂದೆ ಜನರು ಈ ಸ್ಥಳಕ್ಕೆ ಹೋಗಲು ಹೆದರುತ್ತಿದ್ದರು. ದಶಕಗಳ ಹಿಂದೆ ಇಲ್ಲಿ ಪ್ರಾಣಿಗಳನ್ನು ಬಲಿ ನೀಡಲಾಗುತ್ತಿತ್ತು. ಹೀಗಾಗಿ ಅದರ ಬಗ್ಗೆ ಜನರ ಮನಸ್ಸಿನಲ್ಲಿ ಭಯ ಉಳಿದಿದೆ.

ಒಳಪ್ರವೇಶಕ್ಕೆ ಆತಂಕ

ಒಳಪ್ರವೇಶಕ್ಕೆ ಆತಂಕ

ಈ ಮೊದಲು ಈ ಸ್ಥಳವು ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದರೆ 2013 ರಲ್ಲಿ ಇಟಲಿಯ ಪ್ರೊಫೆಸರ್ ಫ್ರಾನ್ಸೆಸ್ಕೊ ಡಿ ಆಂಡ್ರಿಯಾ ಇಲ್ಲಿ ಸಂಶೋಧನೆಯನ್ನು ಪ್ರಾರಂಭಿಸಿದರು ಎಂದು ವರದಿ ಹೇಳಿದೆ. ಈ ಸ್ಥಳದ ಒಳಗೆ ಗೇಟ್ ಇದ್ದು, ಅಲ್ಲಿ ಪ್ರಾಣಿಗಳನ್ನು ಬಲಿ ನೀಡಲಾಗುತ್ತಿತ್ತು ಎನ್ನಲಾಗುತ್ತಿದೆ. ಈ ಸ್ಥಳವು ತುಂಬಾ ಕಿರಿದಾಗಿತ್ತು, ಇದರಿಂದಾಗಿ ಅನೇಕ ಕಾರಣಗಳಿಂದ ಅಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುತ್ತದೆ. ಸರಕಾರ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸ್ಥಳವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.

ಸರ್ಕಾರದಿಂದ ತಪ್ಪು ಗ್ರಹಿಕೆಗೆ ತೆರೆ

ಸರ್ಕಾರದಿಂದ ತಪ್ಪು ಗ್ರಹಿಕೆಗೆ ತೆರೆ

ಸ್ಥಳೀಯರ ಪ್ರಕಾರ, ಜನರು ಈ ಸ್ಥಳದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿದ್ದರು. ಇದು ಧಾರ್ಮಿಕ ಸ್ಥಳವಾಗಿದ್ದರೂ, ಇಲ್ಲಿಗೆ ಬರಲು ಅನೇಕರು ಭಯಪಡುತ್ತಾರೆ. ಈಗ ಸರ್ಕಾರವೇ ಈ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿದೆ. ಇದಾದ ನಂತರ ಹೆಚ್ಚಿನ ಸಂಖ್ಯೆಯ ಜನರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಜನರ ಉದ್ಯೋಗಕ್ಕೆ ಚಾಲನೆ ದೊರೆಯುತ್ತದೆ.

ಬೆಳೆಯುವ ಬಾಗಿಲು

ಬೆಳೆಯುವ ಬಾಗಿಲು

ಸೈಬೀರಿಯಾದಲ್ಲಿಯೀ ಇಂತಹ ಸ್ಥಳವಿದೆ. ಇದನ್ನು ನರಕದ ಬಾಗಿಲು ಎಂದು ಕರೆಯಲಾಗುತ್ತದೆ. ಜೊತೆಗೆ ಇದನ್ನು ಬಟಗಿಕಾ ಕ್ರೇಟರ್ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲ್ಮೈಯಲ್ಲಿ ಮಾಡಿದ ದೊಡ್ಡ ಕುಳಿಯಾಗಿದ್ದು, ಇದರ ಉದ್ದವು ದಿನ ಕಳೆದಂತೆ ಹೆಚ್ಚುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಕಳೆದ ಮೂರು ದಶಕಗಳಲ್ಲಿ, ನರಕದ ಈ ಬಾಗಿಲು 1 ಕಿಲೋಮೀಟರ್ ಉದ್ದವಾಗಿದೆ. ಅದರ ಆಳವು 86 ಮೀಟರ್‌ಗೆ ಏರಿದೆ.

English summary
The Turkish government has opened the door for 'hell' in Denizli, a western province. There are many secrets hidden inside this place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X