ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಲ್ಲಿ ಕೊರೊನಾ ಸೋಂಕು ಪತ್ತೆ

|
Google Oneindia Kannada News

ಅಟ್ಲಾಂಟ, ಸೆಪ್ಟೆಂಬರ್ 11: ಅಮೆರಿಕದ ಅಟ್ಲಾಂಟಾದಲ್ಲಿನ ಮೃಗಾಲಯದಲ್ಲಿರುವ ಕೆಲವು ಗೊರಿಲ್ಲಾಗಳಲ್ಲಿ ಕೊರೊನಾ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ಗೊರಿಲ್ಲಾಗಳಲ್ಲಿ ಕೆಲವು ದಿನಗಳಿಂದ ಕೆಮ್ಮು, ನೆಗಡಿ, ಹಸಿವು ಇಲ್ಲದಿರುವಿಕೆ ಮುಂತಾದ ಲಕ್ಷಣಗಳು ಗೋಚರಿಸಿವೆ. ಆಗ ಗೊರಿಲ್ಲಾಗಳ ಮಲ, ಮೂಗಿನ ಗಂಟಲಿನ ದ್ರವ ಮಾದರಿಯನ್ನು ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಗೊರಿಲ್ಲಾಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಣಾಂತಿಕ ರೋಗಕ್ಕೆ ಲಸಿಕೆ ಅಭಿಯಾನ ಆರಂಭ!ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಣಾಂತಿಕ ರೋಗಕ್ಕೆ ಲಸಿಕೆ ಅಭಿಯಾನ ಆರಂಭ!

ಅಟ್ಲಾಂಟಾ ಮೃಗಾಲಯ ಈ ಕುರಿತು ಮಾಹಿತಿ ನೀಡಿದೆ. ಮಾಹಿತಿ ದೃಢತೆಗೆ ರಾಷ್ಟ್ರೀಯ ಪಶು ಸೇವೆಗೆ ಮಾದರಿಗಳನ್ನು ಕಳುಹಿಸಲಾಗಿದೆ.

Gorillas In Atlanta Zoo Tests Positive For Coronavirus

ಎಷ್ಟು ಗೊರಿಲ್ಲಾಗಳಿಗೆ ಸೋಂಕು ತಗುಲಿದೆ ಎಂಬ ಕುರಿತು ನಿಖರ ಮಾಹಿತಿ ಇಲ್ಲ. ಆದರೆ ಸುಮಾರು ಹದಿಮೂರು ಗೊರಿಲ್ಲಾಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಅಟ್ಲಾಂಟಾದ ಕಾನ್‌ಸ್ಟಿಟ್ಯೂಟ್ನ್ ವರದಿ ಮಾಡಿದೆ.

ಪ್ರಾಣಿಗಳ ಆರೈಕೆ ಮಾಡುವ ಸಿಬ್ಬಂದಿಯಲ್ಲಿ ಈಚೆಗೆ ಕೊರೊನಾ ದೃಢಪಟ್ಟಿತ್ತು. ಅವರಿಂದ ಗೊರಿಲ್ಲಾಗಳಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಸಿಬ್ಬಂದಿ ಲಸಿಕೆ ಪಡೆದಿದ್ದು, ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪ್ರಾಣಿಗಳ ಆರೈಕೆ ಮಾಡುತ್ತಿದ್ದರು ಎನ್ನಲಾಗಿದೆ.

 ಹುಷಾರ್..! ನಿಮ್ಮ ಮನೆ ಬೆಕ್ಕು, ನಾಯಿಗೂ ಅಟ್ಯಾಕ್ ಆಗುತ್ತೆ ಡೆಡ್ಲಿ ಕೊರೊನಾ..! ಹುಷಾರ್..! ನಿಮ್ಮ ಮನೆ ಬೆಕ್ಕು, ನಾಯಿಗೂ ಅಟ್ಯಾಕ್ ಆಗುತ್ತೆ ಡೆಡ್ಲಿ ಕೊರೊನಾ..!

ಈ ಬೆಳವಣಿಗೆ ಬೆನ್ನಲ್ಲೇ ಎಲ್ಲಾ ಗೊರಿಲ್ಲಾಗಳ ಮಾದರಿಗಳನ್ನು ಮೃಗಾಲಯ ಸಿಬ್ಬಂದಿ ಸಂಗ್ರಹಿಸುತ್ತಿದ್ದಾರೆ.

ಈ ಹಿಂದೆ ಹುಲಿ, ಸಿಂಹಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿದ್ದವು. ಇದೀಗ ಗೊರಿಲ್ಲಾಗಳಲ್ಲಿಯೂ ಸೋಂಕು ಪತ್ತೆಯಾಗಿದೆ. ಮನುಷ್ಯರಿಂದ ಪ್ರಾಣಿಗಳಿಗೂ ಸೋಂಕು ತಗುಲಿರುವುದು ಆತಂಕ ತಂದಿದೆ.

Gorillas In Atlanta Zoo Tests Positive For Coronavirus

ಸದ್ಯಕ್ಕೆ ಗೊರಿಲ್ಲಾಗಳಲ್ಲಿ ಈ ಸೋಂಕು ನಿವಾರಣೆಗೆ ಝೋಟಿಸ್ ಲಸಿಕೆಯನ್ನು ನೀಡಲಾಗುತ್ತಿದೆ. ಇದನ್ನು ಪ್ರಾಣಿಗಳಲ್ಲಿನ ಕೊರೊನಾ ಸೋಂಕಿಗೆಂದೇ ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದೆ.

ಈ ಲಸಿಕೆಯನ್ನು ಮೃಗಾಲಯದಲ್ಲಿನ ಹುಲಿ, ಸಿಂಹ ಹಾಗೂ ಚಿರತೆಗಳಿಗೂ ನೀಡಲು ಮೃಗಾಲಯ ಅಧಿಕಾರಿಗಳು ಮುಂದಾಗಿದ್ದಾರೆ. ಗೊರಿಲ್ಲಾಗಳು ಗುಣಮುಖವಾಗುತ್ತಿದ್ದಂತೆ ಅವುಗಳಿಗೂ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಲಸಿಕೆಗೆ ಅಮೆರಿಕದ ಕೃಷಿ ಇಲಾಖೆ ಹಾಗೂ ಜಾರ್ಜಿಯಾ ಪಶು ಇಲಾಖೆ ಅನುಮೋದನೆ ನೀಡಿದೆ.

'ಸೋಂಕಿತ ಗೊರಿಲ್ಲಾಗಳೆಡೆಗೆ ಲಕ್ಷ್ಯ ನೀಡಿದ್ದು, ಆದಷ್ಟು ಬೇಗ ಗುಣಮುಖವಾಗಿಸಲು ಪ್ರಯತ್ನಗಳು ಸಾಗಿದೆ' ಎಂದು ಮೃಗಾಲಯ ಸಿಬ್ಬಂದಿ ತಿಳಿಸಿದ್ದಾರೆ. ಗೊರಿಲ್ಲಾಗಳು ಸಾಮಾನ್ಯವಾಗಿ ಒಟ್ಟಿಗೆ ಇರುವುದರಿಂದ ಸೋಂಕು ವೇಗವಾಗಿ ಹರಡುತ್ತದೆ. ಅವುಗಳನ್ನು ಪ್ರತ್ಯೇಕವಾಗಿ ಇರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಜೊತೆಗೆ ಮೃಗಾಲಯಕ್ಕೆ ಭೇಟಿ ನೀಡುವವರಿಂದಲೂ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಎಲ್ಲಾ ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಲಸಿಕೆ ನೀಡಲು ಆರಂಭಿಸಲಾಗಿದೆ.

ಜನವರಿಯಲ್ಲಿಯೂ ಮೃಗಾಲಯದ ಗೊರಿಲ್ಲಾಗಳಲ್ಲಿ ಅಸ್ವಸ್ಥತೆ ಉಂಟಾಗಿತ್ತು. ಎಂಟು ಗೊರಿಲ್ಲಾಗಳಿಗೆ ಜನವರಿ ತಿಂಗಳಿನಲ್ಲಿ ಆರೋಗ್ಯ ಕೆಟ್ಟಿತ್ತು. ಆನಂತರ ಎಲ್ಲಾ ಗೊರಿಲ್ಲಾಗಳು ಚೇತರಿಸಿಕೊಂಡಿದ್ದವು.

ಈ ಮೃಗಾಲಯದಲ್ಲಿನ 20 ಗೊರಿಲ್ಲಾಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗಿದ್ದು, ಎಲ್ಲಾ ತಂಡಗಳ ಗೊರಿಲ್ಲಾಗಳಲ್ಲಿಯೂ ಸೋಂಕು ಪತ್ತೆಯಾಗಿದೆ.

ಪ್ರಾಣಿಗಳಲ್ಲಿಯೂ ಕಂಡುಬರುತ್ತದೆ ಸೋಂಕು:
ಈಚೆಗೆ ನೆದರ್‌ಲ್ಯಾಂಡ್‌ನಲ್ಲಿ ನಡೆದ ಅಧ್ಯಯನವೊಂದು, ಪ್ರಾಣಿಗಳಿಗೆ ಸೋಂಕು ತಗುಲುವ ಕುರಿತು ಮಾಹಿತಿ ನೀಡಿದೆ. ಬೆಕ್ಕು, ನಾಯಿ ಸೇರಿದಂತೆ ಸಾಕು ಪ್ರಾಣಿಗಳಿಗೆ ಬೇಗನೆ ಕೊರೊನಾ ಸೋಂಕು ತಗುಲುತ್ತದೆ ಎಂದು ಎಚ್ಚರಿಕೆ ನೀಡಿದೆ.

ಕೊರೊನಾ ಸೋಂಕಿತರ ಮನೆಯಲ್ಲಿ ಸಾಕು ಪ್ರಾಣಿಗಳು ಇದ್ದರೆ ಜಾಗ್ರತೆಯಿಂದಿರಬೇಕು. ಇಲ್ಲದಿದ್ದರೆ ಅವರ ಜೊತೆಗೆ ಅವರ ಮುದ್ದಿನ ಪ್ರಾಣಿಗೂ ಕಂಟಕ ಎದುರಾಗುತ್ತದೆ ಎಂದು ಹೇಳಿದೆ.

ಅಮೆರಿಕದಲ್ಲಿ ನಡೆದಿದ್ದ ಅಧ್ಯಯನದ ವರದಿ ಆಧಾರದಲ್ಲಿ ಮಿಂಕ್ ಪ್ರಾಣಿಗಳಿಂದ ಕೊರೊನಾ ಹರಡುವುದು ದೃಢವಾಗಿತ್ತು. ಈ ವರದಿ ತನ್ನ ಕೈಸೇರಿದ ತಕ್ಷಣ ಡೆನ್ಮಾರ್ಕ್ ಸರ್ಕಾರ ಸುಮಾರು 1 ಕೋಟಿ 70 ಲಕ್ಷ ಮಿಂಕ್‌ಗಳನ್ನ ಕೊಂದು ಹಾಕಿತ್ತು.

ಇದೇ ಕಾರಣಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬರುತ್ತಿದ್ದಂತೆ ಹಲವು ದೇಶಗಳಲ್ಲಿ ಮೃಗಾಲಯಗಳನ್ನು ಮುಚ್ಚಲಾಗುತ್ತದೆ.

English summary
Gorillas at Zoo in Atlanta have tested positive for the coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X