ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃಗಾಲಯದಲ್ಲಿರುವ ಗೊರಿಲ್ಲಾಗೆ ಸ್ಮಾರ್ಟ್‌ಫೋನ್‌ ಅಂದ್ರೆ ಹೆಚ್ಚು ಪ್ರೀತಿ

|
Google Oneindia Kannada News

ಚಿಕಾಗೋ ಏಪ್ರಿಲ್ 20: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗೆ ತುಂಬಾ ಜನ ಅಡಿಕ್ಟ್ ಆಗಿದ್ದಾರೆ. ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡುವುದು, ರಸ್ತೆಯಲ್ಲಿ ನಡೆಯುವ ಪರಿವಿಲ್ಲದೇ, ಯಾರಾದರೂ ಮಾತನಾಡಿಸಿದರೂ ಗಮನವಿಲ್ಲದೇ ಮಸೇಜ್ ಮಾಡುತ್ತಲೋ ಅಥವಾ ಮತ್ತೇನನ್ನೋ ನೋಡುತ್ತಲೇ ದಿನದ ಬಹುತೇಕ ಸಮಯವನ್ನು ಫೋನಿನಲ್ಲೇ ಕಳೆಯುವವರು ನಮ್ಮ ನಡುವೆ ತುಂಬಾ ಜನ ಇದ್ದಾರೆ. ಆದರೆ ಇದು ತುಂಬಾ ಸಾಮಾನ್ಯ ವಿದ್ಯಮಾನವಾಗಿದೆ.

ಮನುಷ್ಯರು ಬುದ್ದಿ ಜೀವಿಗಳು ಫೋನ್‌ ಬಗ್ಗೆ ಆಸಕ್ತಿ ಉಳ್ಳವರು. ಜೊತೆಗೆ ಫೋನ್ ಬಗ್ಗೆ ಕ್ರೇಜ್ ಇರುವವರು ಆಗಿದ್ದಾರೆ. ಹೀಗಾಗಿ ಜನ ಅಡಿಕ್ಟ್ ಆಗುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಇಲ್ಲೊಂದು ಪ್ರಾಣಿ ಸ್ಮಾರ್ಟ್ ಫೋನ್‌ಗೆ ಅಡಿಕ್ಟ್ ಆಗಿದೆ. ಗೊರಿಲ್ಲಾವೊಂದು ಮುನುಷ್ಯರಂತೆ ಸ್ಮಾರ್ಟ್‌ಪೋನ್‌ಗೆ ಅಡಿಕ್ಟ್ ಆಗಿ ಗಮನ ಸೆಳೆದಿದೆ.

ಚಿಕಾಗೋದ ಲಿಂಕನ್ ಪಾರ್ಕ್ ಮೃಗಾಲಯದಲ್ಲಿ ವಾಸಿಸುವ ಅಮರೆ ಎಂಬ ಗೊರಿಲ್ಲಾ ಸ್ಮಾರ್ಟ್‌ಫೋನ್‌ಗಳ ಬಗ್ಗೆ ವಿಶೇಷವಾದ ಒಲವು ಹೊಂದಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ವರದಿ ಸೂಚಿಸುತ್ತದೆ. 190 ಕೆ.ಜಿ ತೂಕದ ಈ ಗೊರಿಲ್ಲಾ ಸ್ಮಾರ್ಟ್‌ಫೋನ್‌ಗೆ ಎಷ್ಟು ಅಡಿಕ್ಟ್ ಆಗಿಬಿಟ್ಟಿದೆಯೆಂದರೆ ಒಮ್ಮೆಲೇ ತನ್ನ ಮೇಲೆ ದಾಳಿ ಮಾಡಲು ಹಿಂದಿನಿಂದ ಮತ್ತೊಂದು ಗೊರಿಲ್ಲಾ ಬರುತ್ತಿದೆ ಎಂಬುದು ಸಂಪೂರ್ಣ ಅರಿವಿಗೆ ಬಾರದಂತೆ ಅಡಿಕ್ಟ್ ಆಗಿದೆ. ಹೀಗಾಗಿ ಮೃಗಾಲಯದ ಅಧಿಕಾರಿಗಳು ಈ ಗೊರಿಲ್ಲಾ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಅದು ಫೋನ್ ಚಟದಿಂದ ಹೊರಬರುವಂತೆ ಮಾಡಲು ಶ್ರಮಿಸುತ್ತಿದ್ದಾರೆ.

Gorilla addicted to smartphone

ಗೊರಿಲ್ಲಾ ಬಳಿ ಸ್ಮಾರ್ಟ್‌ಫೋನ್ ಇಲ್ಲ, ಅದು ಹೇಗೆ ಚಟವಾಯಿತು? ಎನ್ನುವ ಪ್ರಶ್ನೆ ನಿಮಗೆ ಉದ್ಬವಿಸಬಹುದು. ಅದಕ್ಕೆ ಇಲ್ಲಿದೆ ನೋಡಿ ಉತ್ತರ. ಮೃಗಾಲಯಕ್ಕೆ ಬರುವ ಜನರು ಅವರ ಫೋಟೋಗಳನ್ನು ಕ್ಲಿಕ್ ಮಾಡಲು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಜೊತೆಗೆ ಮೃಗಾಲಯಕ್ಕೆ ಹೋಗುವವರು ಗೊರಿಲ್ಲಾಗೆ ಗಾಜಿನ ಮೂಲಕ ತಮ್ಮ ಫೋನ್‌ಗಳಲ್ಲಿ ಜೀವಿಗಳ ಚಿತ್ರಗಳು ಮತ್ತು ವಿಡಿಯೊಗಳನ್ನು ತೋರಿಸುತ್ತಲೇ ಇರುತ್ತಾರೆ. ಮಾತ್ರವಲ್ಲದೆ ಅವರು ಗೊರಿಲ್ಲಾ ಫೋಟೋವನ್ನು ಕ್ಲಿಕ್ಕಿಸಿ ಅದನ್ನು ಅದಕ್ಕೆ ತೋರಿಸುತ್ತಾರೆ. ಪ್ರತಿನಿತ್ಯ ಹೀಗೆ ಮೃಗಾಲಯಕ್ಕೆ ಸಾವಿರಾರು ಜನರು ಅದರ ಫೋಟೋ,ವಿಡಿಯೋ ಕ್ಲಿಕ್ಕಿಸುವ ಮೂಲಕ ಅದಕ್ಕೂ ಫೋಟೋ, ವಿಡಿಯೋ, ಫೋಸ್ ನೀಡುವ ರೂಢಿಯಾಗಿದೆ. ಈ ಗೊರಿಲ್ಲಾ ಕೂಡ ಫೋನ್ ಬಗ್ಗೆ ವಿಶೇಷ ಆಸಕ್ತಿ ತೋರಿಸುವುದರಿಂದ ಪ್ರವಾಸಿಗರೂ ಇದನ್ನು ಹೆಚ್ಚಾಗಿ ಪ್ರೀತಿಸುತ್ತಾರೆ.

ಗೊರಿಲ್ಲಾಗೆ ಫೋನ್ ಬಗ್ಗೆ ಇರುವ ಆಸಕ್ತಿಯನ್ನು ಕಡಿಮೆ ಮಾಡಲು ಮೃಗಾಲಯದ ಸಿಬ್ಬಂದಿ ಗಾಜಿನತ್ತ ಜನರು ಪ್ರವೇಶಿಸದಿರಲು ಹಗ್ಗವನ್ನು ಹಾಕಿದ್ದಾರೆ. ಆಗಾಗ್ಗೆ ಸೆಲ್ಫಿ ಕ್ಲಿಕ್ ಮಾಡಬೇಡಿ ಮತ್ತು ಯೂಟ್ಯೂಬ್‌ನಲ್ಲಿನ ತಮಾಷೆಯ ವೀಡಿಯೊಗಳನ್ನು ತೋರಿಸಬೇಡಿ ಎಂದು ಜನರಿಗೆ ವಿನಂತಿಸಲಾಗುತ್ತಿದೆ.

ಮೃಗಾಲಯಗಾರರ ಪ್ರಕಾರ, ಅಮರೆ ಪ್ರಕಾಶಮಾನವಾದ ಪ್ರದರ್ಶನಗಳಿಂದ ವಿಚಲಿತನಾಗುತ್ತಾನೆ. ಹೀಗಾಗಿ ಅವರು ಜನರ ಈ ಹುಚ್ಚಾಟವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಮರೆ ಗಾಜಿನ ಪಂಜರದಲ್ಲಿ ಲಾಕ್ ಆಗಿದ್ದರೂ, ಅವನು ಫೋನ್‌ಗೆ ವ್ಯಸನಿಯಾಗಿದ್ದಾನೆ. ಅವನು ಜನರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾನೆ ಮತ್ತು ಅವರ ಫೋನ್‌ಗಳಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸುತ್ತಾನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Gorilla addicted to smartphone

ಇದರಿಂದ ಇತರ ಗೊರಿಲ್ಲಾಗಳು ಅಮರೆಗೆ ಕಿರುಕುಳ ನೀಡಬಹುದು ಮತ್ತು ಆಕ್ರಮಣಕಾರಿಯಾಗಿ ದಾಳಿ ಮಾಡಬಹುದು ಎಂದು ಪ್ರಾಣಿ ಸಂಗ್ರಹಕಾರರು ಭಯಪಡುತ್ತಾರೆ. ಇದು ಬೆದರಿಸುವಿಕೆಗೆ ಕಾರಣವಾಗಬಹುದು ಎನ್ನುತ್ತಾರೆ. ಮೃಗಾಲಯವು ಹೇಳುವಂತೆ, 'ಇಲ್ಲಿ ಸಮಸ್ಯೆ ಏನೆಂದರೆ, ಅಮರೇ ಫೋನ್‌ಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಾನೆ, ಹೀಗಾಗಿ ಹೆಚ್ಚಿನ ಜನರು ಅವುಗಳನ್ನು ತೋರಿಸಲು ಬಯಸುತ್ತಾರೆ. ಈ ಬೆಳವಣಿಗೆ ಉಳಿದ ಗೊರಿಲ್ಲಾಗಳ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಅಮರೆ ಇತರ ಗೊರಿಲ್ಲಾಗಳಿಗೆ ಭಿನ್ನವಾಗಿ ವರ್ತಿಸುತ್ತಾನೆ' ಎಂದು ಹೇಳಿದೆ.

ಮೃಗಾಲಯದ ನಿರ್ದೇಶಕ ಸ್ಟೀಫನ್ ರಾಸ್ ಮಾತನಾಡಿ, 'ಗೊರಿಲ್ಲಾ ಫೋನ್ ಪರದೆಯನ್ನು ನೋಡುವುದರಲ್ಲಿ ನಿರತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಅವನು ತನ್ನ ಸಹವರ್ತಿ ಗೊರಿಲ್ಲಾಗಳೊಂದಿಗೆ ಆ ಸಮಯವನ್ನು ಕಳೆಯಬೇಕು. ಹೀಗಾಗಿ ಈಗ ಮೃಗಾಲಯದಲ್ಲಿ ಪ್ರತ್ಯೇಕ ವಲಯವನ್ನು ರಚಿಸಲಾಗಿದೆ. ಇದರಿಂದ ಜನರು ಗೊರಿಲ್ಲಾದ ಹತ್ತಿರ ಹೋಗಲು ಸಾಧ್ಯವಿಲ್ಲ. ಈ ರೀತಿಯಾಗಿ, ಗೊರಿಲ್ಲಾವನ್ನು ಫೋನ್‌ನಿಂದ ದೂರವಿಡಲು ಮತ್ತು ತನ್ನ ಸಹಚರರೊಂದಿಗೆ ಹೆಚ್ಚು ಸಮಯ ಕಳೆಯಲು ನಾವು ಪ್ರಯತ್ನಿಸುತ್ತಿದ್ದೇವೆ' ಎಂದಿದ್ದಾರೆ.

English summary
A gorilla named Amare at the Lincoln Park Zoo in Chicago is addicted to a smartphone. Learn more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X