ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಸಬ್‌ಸೀ ಕೇಬಲ್: ಸೆಕೆಂಡಿಗೆ 250 ಟಿಬಿ ಡೇಟಾ ತಲುಪಿಸುತ್ತದೆ!

|
Google Oneindia Kannada News

ವಾಷಿಂಗ್ಟನ್‌, ಫೆಬ್ರವರಿ 04: ಅಮೆರಿಕಾ ಮತ್ತು ಯುರೋಪ್ ನಡುವಿನ ಹೊಸ ಸಬ್‌ಸೀ ಕೇಬಲ್ ದಾಖಲೆಯನ್ನೇ ಮಾಡಿದ್ದು, ಈಗ ಸೇವೆಗೆ ಸಿದ್ಧವಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮತ್ತು ರೆಡ್‌ಕ್ರಾಸ್‌ನ ಸಂಸ್ಥಾಪಕ ಹೆನ್ರಿ ಡನೆಟ್ ಅವರ ಹೆಸರಿನ ಈ ಕೇಬಲ್‌ ವಿಶೇಷತೆ ಎಂದರೆ ಇದು ಸೆಕೆಂಡಿಗೆ 250 ಟಿಬಿ ಡೇಟಾ ತಲುಪಿಸುವ ಸಾಮರ್ಥ್ಯ ಹೊಂದಿದೆ. ಇದರರ್ಥ ಪ್ರತಿ ಸೆಕೆಂಡಿಗೆ ಮೂರು ಬಾರಿ ಸಂಪೂರ್ಣ ಡಿಜಿಟಲೀಕರಿಸಿದ ಲೈಬ್ರರಿ ಆಫ್ ಕಾಂಗ್ರೆಸ್ ಅನ್ನು ರವಾನಿಸಬಹುದು ಎಂದು ಗೂಗಲ್ ಪ್ರಕಟಿಸಿದೆ.

ಅಮೆರಿಕಾದ ವರ್ಜೀನಿಯಾ ಬೀಚ್ ಮತ್ತು ಫ್ರೆಂಚ್ ಅಟ್ಲಾಂಟಿಕ್ ಕರಾವಳಿಯ ಸೇಂಟ್-ಹಿಲೇರ್-ಡಿ-ರೈಜ್ ನಡುವಿನ ಈ ವ್ಯವಸ್ಥೆಯು ಗೂಗಲ್‌ನ ಜಾಗತಿಕ ಜಾಲವನ್ನು ವಿಸ್ತರಿಸಿ ಸಾಮರ್ಥ್ಯ, ವೈವಿಧ್ಯತೆ ಮತ್ತು ಇತರ ನೆಟ್‌ವರ್ಕ್ ಮೂಲಸೌಕರ್ಯಗಳೊಂದಿಗೆ ಪರಸ್ಪರ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ.

ನೂರಾರು ವೈಯಕ್ತಿಕ ಸಾಲದ ಆ್ಯಪ್‌ಗಳನ್ನು ತೆಗೆದುಹಾಕಿದ ಗೂಗಲ್ನೂರಾರು ವೈಯಕ್ತಿಕ ಸಾಲದ ಆ್ಯಪ್‌ಗಳನ್ನು ತೆಗೆದುಹಾಕಿದ ಗೂಗಲ್

"12 ಫೈಬರ್ ಸ್ಪೇಸ್-ಡಿವಿಷನ್ ಮಲ್ಟಿಪ್ಲೆಕ್ಸಿಂಗ್ (ಎಸ್‌ಡಿಎಂ) ವಿನ್ಯಾಸವನ್ನು ಒಳಗೊಂಡಿರುವ ಡನೆಟ್ ಕೇಬಲ್, ಮೊದಲ ದೀರ್ಘ ಪ್ರಯಾಣದ ಸಬ್‌ಸೀ ಕೇಬಲ್ ಎಂದು ನಾವು ಘೋಷಿಸಿದ್ದೇವೆ ಮತ್ತು ಸಾಗರದಾದ್ಯಂತ ಸೆಕೆಂಡಿಗೆ 250 ಟಿಬಿ ದಾಖಲೆಯ ಸಾಮರ್ಥ್ಯವನ್ನು ತಲುಪಿಸುತ್ತೇವೆ" ಎಂದು ಗೂಗಲ್ ಹೇಳಿದೆ.

 Google Subsea Cable Set To Deliver 250TB Data Per Second

ಜಾಗತಿಕ ಪಾಲುದಾರರಾದ ಸಬ್‌ಕಾಮ್‌ನ ಸಹಭಾಗಿತ್ವದಲ್ಲಿ ಈ ಐತಿಹಾಸಿಕ ಹೆಜ್ಜೆಯನ್ನು ಇಡಲು ಸಾಧ್ಯವಾಯಿತು. ಜಾಗತಿಕ ಸಾಂಕ್ರಾಮಿಕ ರೋಗದ ಹೊರತಾಗಿಯೂ ನಿಗದಿತ ಸಮಯದಲ್ಲಿ ಇದನ್ನು ವಿನ್ಯಾಸಗೊಳಿಸಿದೆ ಎಂದು ಗೂಗಲ್ ತಿಳಿಸಿದೆ.

English summary
Henry Dunant, is now ready for service and can transmit the entire digitised Library of Congress three times every second, Google has announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X