ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಭೂ ದಿನಕ್ಕೆ ಗೂಗಲ್ ರಚಿಸಿದ ವಿಶೇಷ ಡೂಡಲ್ ಹೇಗಿದೆ ನೋಡಿ!

|
Google Oneindia Kannada News

ಇಂದು ವಿಶ್ವ ಭೂದಿನ, ಗೂಗಲ್ ವಿಶೇಷವಾಗಿ ಈ ದಿನದ ಪ್ರಯುಕ್ತ ಡೂಡಲ್ ರಚಿಸಿದೆ.

ಕೊರೊನಾ ಸೋಂಕು ಮನುಕುಲಕ್ಕೆ ತಂದೊಡ್ಡಿರುವ ಆತಂಕದಿಂದ ವಿಶ್ವದ ಚಟುವಟಿಕೆಗಳೇ ಸ್ತಬ್ಧವಾಗಿವೆ. ಆದರೆ ಇದರ ಜತೆಗೆ ಹವಾಮಾನ ಬದಲಾವಣೆಯೂ ದೊಡ್ಡ ಮಟ್ಟದ ಅಪಾಯವನ್ನು ತಂದೊಡ್ಡುತ್ತಿದೆ.

ಮಾಸ್ಕ್ ಧರಿಸಿ, ಜೀವ ಉಳಿಸಿ: ಗೂಗಲ್ ಡೂಡಲ್ ಮನವಿಮಾಸ್ಕ್ ಧರಿಸಿ, ಜೀವ ಉಳಿಸಿ: ಗೂಗಲ್ ಡೂಡಲ್ ಮನವಿ

1990ರವರೆಗೂ ಭೂ ದಿನದ ಚಿಂತನೆಗಳು ಅಷ್ಟೇನೂ ಪ್ರಚಾರಕ್ಕೆ ಬಂದಿರಲಿಲ್ಲ, 1990ರಲ್ಲಿ 141 ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ಜಾಗತಿಕ ವೇದಿಕೆಯಲ್ಲಿ ಈ ಚಿಂತನೆಗಳ ಮಹತ್ವವನ್ನು ಮನದಟ್ಟು ಮಾಡಿಕೊಡಲಾಯಿತು. 2010ರ ವೇಳೆ ಇದು, ವಿಶ್ವ ನಾಯಕರಿಗೆ ಪರಿಸರದ ಕುರಿತು ಸಂದೇಶವನ್ನು ಕಳುಹಿಸುವ ದಿನವಾಗಿ ಮಾರ್ಪಾಡಾಗಿತ್ತು.

Googles Earth Day Doodle Shows How Everyone Can Plant Trees To Help Save The Planet

1970ರಲ್ಲಿ ಕಂಡುಬಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟಗಳು ಈಗ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ಒಂದು ಭೂಮಿ, ಒಂದು ಪರಿಸರ ಒಂದು ಮಾನವಕೋಟಿ ಎಂಬ ಧ್ವನಿ ವಿಶ್ವಾದ್ಯಂತ ಮೊಳಗಬೇಕಾದ ಅಗತ್ಯ ಹೆಚ್ಚಾಗಿದೆ.

ಗ್ರಾಫಿಕ್ಸ್ ಹಾಗೂ ಅನಿಮೇಷನ್ ಬಳಸಿ ಡೂಡಲ್ ಗೂಗಲ್ ವಿಶ್ವ ಭೂ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದೆ. ಡೂಡಲ್‌ನಲ್ಲಿ ಗಿಡವನ್ನು ನೆಟ್ಟು ಈ ಭೂಮಿ ತಾಯಿಯನ್ನು ರಕ್ಷಿಸೋಣ ಎಂಬ ಸಂದೇಶವನ್ನು ನೀಡಲಾಗಿದೆ.

ಗೂಗಲ್ ಸೃಷ್ಟಿಸಿರುವ ಡೂಡಲ್ ಮೇಲೆ ಕ್ಲಿಕ್ ದಾಗ ವಿಡಿಯೋ ಪ್ಲೇ ಆಗುವ ರೀತಿ ಮಾಡಲಾಗಿದೆ. ಕಳೆದ 23 ವರ್ಷಗಳಿಂದ ವಿಶ್ವ ಭೂಮಿ ದಿನದಂದು ವಿಶೇಷ ಡೂಡಲ್ ಅರ್ಪಿಸುತ್ತಿರುವ ಗೂಗಲ್ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಜನತೆಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ.

ವಿಶ್ವ ಭೂ ದಿನಾಚರಣೆ ಎನ್ನುವುದು ಯಾವುದೋ ಒಂದು ಸಂಸ್ಥೆಗೆ ಮೀಸಲಾದ ದಿನಾಚರಣೆಯಲ್ಲ. ಈ ಭೂಮಿಯನ್ನು ನಾಶಮಾಡಲು ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣವಾಗಿರುವ ಪ್ರತಿ ಮನುಷ್ಯನೂ ಇದರ ಮಹತ್ವವನ್ನು ಅರಿತು ತನ್ನನ್ನು ತಾನು ತಿದ್ದಿಕೊಂಡು ಮುನ್ನಡೆಯಲು ಈ ದಿನಾಚರಣೆ ಒಂದು ಮಾರ್ಗವಾಗಿದೆ.

English summary
On the occasion of Earth Day on Thursday, Google published a doodle on its homepage of a woman reading a book under a large tree while her daughter carries a sapling to plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X