ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

22 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹುಡುಕಿದ Google Maps!

|
Google Oneindia Kannada News

Recommended Video

ರೂಲ್ಸ್ ಮೇಲೆ ರೂಲ್ಸ್ ಬೆಚ್ಚಿಬಿದ್ದ ಜನತೆ..? | New Traffic Rules | Oneindia Kannada

ವೆಲ್ಲಿಂಗ್ಟನ್(ನ್ಯೂಜಿಲೆಂಡ್), ಸೆಪ್ಟೆಂಬರ್ 13: ಎರಡು ದಶಕಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಪತ್ತೆಗೆ ಗೂಗಲ್ ಮ್ಯಾಪ್ಸ್ ನೆರವಾಗಿದೆ!

ನ್ಯೂಜಿಲೆಂಡಿನ ವೆಲ್ಲಿಂಗ್ಟನ್ ನ ಮೂನ್ ಬೇ ಸರ್ಕಲ್ ಬಳಿ ಮುಳುಗಿದ ಕಾರಿನ ಚಿತ್ರವೊಂದನ್ನು ಗೂಗಲ್ ಮ್ಯಾಪ್ಸ್ ಪತ್ತೆಹಚ್ಚಿತ್ತು. ವ್ಯಕ್ತಿಯೊಬ್ಬರು ಗೂಗಲ್ ಸರ್ಚ್ ಮಾಡುತ್ತಿದ್ದ ಸದರ್ಭದಲ್ಲಿ ಈ ದೃಶ್ಯ ಪತ್ತೆಯಾಗಿತ್ತು. ಕೂಡಲೆ ಈ ವಿಷಯವನ್ನು ಆ ವ್ಯಕ್ತಿಯು ಪೊಲೀಸರ ಗಮನಕ್ಕೆ ತಂದಿದ್ದರು.

ಆನ್ ಲೈನ್ ಕಾಯ್ದೆ ಉಲ್ಲಂಘಿಸಿದ ಗೂಗಲ್; 1224 ಕೋಟಿ ಪಾವತಿಗೆ ಒಪ್ಪಿಗೆಆನ್ ಲೈನ್ ಕಾಯ್ದೆ ಉಲ್ಲಂಘಿಸಿದ ಗೂಗಲ್; 1224 ಕೋಟಿ ಪಾವತಿಗೆ ಒಪ್ಪಿಗೆ

ಕೂಡಲೆ ಸ್ಥಳಕ್ಕೆ ತೆರಳಿದ ಪೊಲೀಸರು ಕಾರನ್ನು ಪತ್ತೆ ಮಾಡಿ, ಅದನ್ನು ಹೊರತೆಗೆದಾಗ ಕಾರಿನೊಳಗೆ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಹೆಚ್ಚಿನ ತನಿಖೆ ನಡೆಸಿದಾಗ ಈ ಕಾರಿನಲ್ಲಿದ್ದಿದ್ದು 22 ವರ್ಷಗಳ ಹಿಂದೆ ಕಾಣೆಯಾಗಿದ್ದ ವಿಲಿಯಂ ಮಾಲ್ಡ್ಟ್ ಎಂಬುದು ಪತ್ತೆಯಾಗಿದೆ.

Google Maps Found Body Of A Man Who Was Missing 2 Decades Back

1997ರ ನವೆಂಬರ್ 7 ರಂದು ಕ್ಲಬ್ಬಿಗೆ ತೆರಳಿ ವಾಪಸ್ಸಾಗುತ್ತಿದ್ದ ವಿಲಿಯಂ ಅವರು ನಂತರ ನಾಪತ್ತೆಯಾಗಿದ್ದರು. ಅವರ ಸುಳಿವು ಎಲ್ಲಿಯೂ ಸಿಕ್ಕಿರಲಿಲ್ಲ. 2007 ರಲ್ಲಿಯೇ ಈ ಚಿತ್ರ ಗೂಗಲ್ ಮ್ಯಾಪ್ಸ್ ನಲ್ಲಿ ಪತ್ತೆಯಾಗಿತ್ತಾದರೂ ಈ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ಈ ಪ್ರದೇಶದ ನಿವಾಸಿಯೊಬ್ಬರು ಈ ಚಿತ್ರವನ್ನು ನೋಡಿ ಪೊಲೀಸರಿಗೆ ದೂರು ನೀದಿದ ನಂತರ ಘಟನೆ ಹೊರಬಂದಿದೆ.

ನಿಮ್ಮ ಗೂಗಲ್‌ ಖಾತೆ ಇನ್ನಷ್ಟು ಭದ್ರ: ಬೆರಳಚ್ಚೇ ಪಾಸ್‌ವರ್ಡ್ನಿಮ್ಮ ಗೂಗಲ್‌ ಖಾತೆ ಇನ್ನಷ್ಟು ಭದ್ರ: ಬೆರಳಚ್ಚೇ ಪಾಸ್‌ವರ್ಡ್

ಬಹುಶಃ ವೇಗ ನಿಯಂತ್ರಿಸಲಾಗಿದೆ ಮೊಲ್ಡ್ಟ್ ಕಾರಿನ ಸಮೇತ ನೀರಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

English summary
Google maps found body of a man who was missing 2 decades back,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X