ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ: 48 ಸಿಬ್ಬಂದಿಯನ್ನು ಕಿತ್ತೆಸೆದ ಗೂಗಲ್

|
Google Oneindia Kannada News

ಕ್ಯಾಫೋರ್ನಿಯಾ, ಅಕ್ಟೋಬರ್ 26: ಕಳೆದ ಎರಡು ವರ್ಷಗಳಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಟ್ಟು 48 ಸಿಬ್ಬಂದಿಯನ್ನು ಗೂಗಲ್ ಸಂಸ್ಥೆ ಕಿತ್ತೆಸೆದಿದೆ ಎಂದು ಸರ್ಚ್ ಇಂಜಿನ್ ದೈತ್ಯ ಗೂಗಲ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್ ಪಿಚೈ ಹೇಳಿದ್ದಾರೆ.

ಲೈಂಗಿಕ ಕಿರುಕುಳ ಎದುರಿಸುತ್ತಿದ್ದ ಮೂವರು ಹಿರಿಯ ಅಧಿಕಾರಿಗಳನ್ನು ಗೂಗಲ್ ರಕ್ಷಿಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಮಾಡಿದ್ದ ವರದಿಯನ್ನು ತಳ್ಳಿಹಾಕಿದ ಅವರು, 'ನಾವು ಕಚೇರಿಯ ವಾತಾವರಣ ಸುರಕ್ಷಿತವಾಗಿರುವಂತೆಯೇ ನೋಡಿಕೊಂದಿದ್ದೇವೆ.

ಲೈಂಗಿಕ ಆರೋಪ ಹೊತ್ತ ಅಧಿಕಾರಿಗೆ ಬೋನಸ್ ಕೊಟ್ಟು ರಕ್ಷಿಸಿದ್ದ ಗೂಗಲ್! ಲೈಂಗಿಕ ಆರೋಪ ಹೊತ್ತ ಅಧಿಕಾರಿಗೆ ಬೋನಸ್ ಕೊಟ್ಟು ರಕ್ಷಿಸಿದ್ದ ಗೂಗಲ್!

ಇಂಥ ಆರೋಪಗಳು ಬಂದಲ್ಲಿ ತಕ್ಷಣವೇ ಕ್ರಮ ಕೈಗೊಂಡಿದ್ದೇವೆ, ಕಂಪನಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ 48 ಸಿಬ್ಬಂದಿಯನ್ನು ಕಳೆದ ಎರಡು ವರ್ಷಗಳಲ್ಲಿ ಕೆಲಸದಿಂದ ಕಿತ್ತೆಸೆದಿದ್ದೇವೆ. ಸುರಕ್ಷಿತ ಔದ್ಯೋಗಿಕ ವಾತಾವರಣವನ್ನು ಸೃಷ್ಟಿಸಿದ್ದೇವೆ' ಎಂದು ಭಾರತೀಯ ಮೂಲದ ಪಿಚೈ ಹೇಳಿದ್ದಾರೆ.

ಭದ್ರತಾ ಲೋಪ: ಸಾಮಾಜಿಕ ಜಾಲತಾಣ 'ಗೂಗಲ್ +' ಸ್ಥಗಿತ!ಭದ್ರತಾ ಲೋಪ: ಸಾಮಾಜಿಕ ಜಾಲತಾಣ 'ಗೂಗಲ್ +' ಸ್ಥಗಿತ!

'ಗೂಗಲ್, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ತನ್ನ ಮೂವರು ಹಿರಿಯ ಅಧಿಕಾರಿಗಳನ್ನು ಸಂರಕ್ಷಿಸುತ್ತಿದೆ' ಎಂದು ಇತ್ತೀಚೆಗಷ್ಟೇ ನ್ಯೂಯಾರ್ಕ್ ಟೈಮ್ಸ್ ಆರೋಪ ಹೊರಿಸಿತ್ತು.

Google fires 48 employees for Sexual harassment case in 2 years

ಗೂಗಲ್ ಪೋರಿಗೆ 20 ರ ಹರೆಯವಂತೆ, ವಿಶ್ ಮಾಡಿದ್ದೀರಾ?!ಗೂಗಲ್ ಪೋರಿಗೆ 20 ರ ಹರೆಯವಂತೆ, ವಿಶ್ ಮಾಡಿದ್ದೀರಾ?!

ಈ ಕುರಿತು ಗೂಗಲ್ ನ ಎಲ್ಲಾ ಸಿಬ್ಬಂದಿಗೂ ಸುಂದರ್ ಪಿಚೈ ಇಮೇಲ್ ಕಳಿಸಿದ್ದಾರೆ. ಗೂಗಲ್ ಎಂದಿಗೂ ತನ್ನ ಸಿಬ್ಬಂದಿಗಳಿಗೆ ಸುರಕ್ಷತೆ ನೀಡಲು ಬದ್ಧ. ಯಾವುದೇ ರೀತಿಯ ಅಹಿತಕರ ಘಟನೆ ಮತ್ತು ಅಸಭ್ಯ ವರ್ತನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ಹಿಂದೆ ಬಿದ್ದಿಲ್ಲ ಎಂದು ಪಿಚೈ ಹೇಳಿದ್ದಾರೆ.

ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ

ವಿವಿಧ ರಂಗಗಳಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ಕಿರುಕುಳ ಭಾರತದಲ್ಲಿ ಮೀಟೂ ಅಭಿಯಾನದ ಮೂಲಕ ಬೆಳಕಿಗೆ ಬರುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
Google Inc Chief Executive Sundar Pichai said on Thursday the company had fired 48 employees for sexual harassment over the past two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X