ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೆಂಚ್ ಸುದ್ದಿ ಸಂಸ್ಥೆಗಳೊಂದಿಗೆ ಕಲಹ: ಗೂಗಲ್‌ಗೆ 4,408 ಕೋಟಿ ರೂ. ದಂಡ

|
Google Oneindia Kannada News

ಪ್ಯಾರಿಸ್, ಜುಲೈ 13: ಫ್ರೆಂಚ್ ಸುದ್ದಿ ಸಂಸ್ಥೆಗಳೊಂದಿಗೆ ಗೂಗಲ್ ಸಂಘರ್ಷ ಮಾಡಿಕೊಂಡಿದ್ದು, ಇದೀಗ 4,408 ಕೋಟಿ ರೂ ದಂಡ ಪಾವತಿಸಬೇಕಿದೆ.

ಸ್ಥಳೀಯ ಮಾಧ್ಯಮಗಳು ಹಾಗೂ ಪ್ರಸಾರ ಸಂಸ್ಥೆಗಳು ಪ್ರಕಟಿಸುವ ವಿಷಯಗಳನ್ನು ಗೂಗಲ್ ತನ್ನ ಸರ್ಚ್ ಎಂಜಿನ್‌ನಲ್ಲಿ ತೋರಿಸಲು ಅಥವಾ ನ್ಯೂಸ್ ಫೀಡ್ಸ್‌ನಲ್ಲಿ ಬಳಕೆ ಮಾಡಲು, ಸಂಸ್ಥೆಯು ಮಾಧ್ಯಮಗಳಿಗೆ ಹಣ ಸಂದಾಯ ಮಾಡಬೇಕು ಎಂದು ಫ್ರೆಂಚ್ ಪಬ್ಲಿಷರ್‌ಗಳು ಪಟ್ಟು ಹಿಡಿದಿದ್ದಾರೆ.

ಈ ಬಗ್ಗೆ ಸ್ಪಂದಿಸಲು ಗೂಗಲ್ ಮೀನಾಮೇಷ ಎಣಿಸುತ್ತಿದೆ, ಫ್ರಾನ್ಸ್‌ನ ಸ್ಪರ್ಧಾ ನಿಯಂತ್ರಣ ಸಂಸ್ಥೆಯು ಮಂಗಳವಾರ 500 ಮಿಲಿಯನ್ ಯೂರೋ ದಂಡ ವಿಧಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

Google Fined $592 Million In Dispute With French Publishers

ಗೂಗಲ್ ಹಾಗೂ ಇತರೆ ಟೆಕ್ ಕಂಪನಿಗಳು ಸುದ್ದಿ ಪ್ರಕಟಣೆ ಮಾಡುವ ಸಂಸ್ಥೆಗಳಿಗೆ ಪರಿಹಾರ ನೀಡುವಂತೆ ಯುರೋಪಿಯನ್ ಒಕ್ಕೂಟವು ಕೈಗೊಂಡಿರುವ ಪ್ರಯತ್ನದ ಭಾಗಿಯಾಗಿ ಈ ನಿರ್ಧಾರ ಪ್ರಕಟವಾಗಿದೆ.

ಸುದ್ದಿ ಮಾಧ್ಯಮಗಳಿಗೆ ಪರಿಹಾರ ನೀಡುವ ಕುರಿತು ಎರಡು ತಿಂಗಳ ಒಳಗೆ ಪ್ರಸ್ತಾವನೆ ಸಲ್ಲಿಸದಿದ್ದರೆ , ಗೂಗಲ್‌ಗೆ ದಿನಕ್ಕೆ 9 ಲಕ್ಷ ಯೂರೋ ಅಂದರೆ 9.93 ಕೋಟಿಯಷ್ಟು ದಂಡ ಹಾಕುವ ಎಚ್ಚರಿಕೆ ನೀಡಲಾಗಿದೆ.

ಈ ಕುರಿತು ಗೂಗಲ್ ಫ್ರಾನ್ಸ್ ಪ್ರತಿಕ್ರಿಯಿಸಿದ್ದು ದಂಡ ಹಾಕುವ ನಿರ್ಧಾರವು ಬಹಳ ನಿರಾಶೆ ಉಂಟು ಮಾಡಿದೆ. ವಿಧಿಸಲಾಗಿರುವ ದಂಡವು ವಾಸ್ತವದಲ್ಲಿ ಸುದ್ದಿ ವಿಷಯಗಳನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಬಳಸುವುದಕ್ಕೂ ಅಥವಾ ಅದರ ಶ್ರಮದ ಸೂಚಕವಾಗಿಯೂ ಕಾಣುತ್ತಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಉತ್ತಮ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಹಾಗೂ ಕೆಲವು ಮಾಧ್ಯಮ ಸಂಸ್ಥೆಗಳೊಂದಿಗೆ ಒಪ್ಪಂದದ ಅಂಚಿನವರೆಗೂ ತಲುಪಿದ್ದೇವೆ ಎಂದು ಗೂಗಲ್ ಫ್ರಾನ್ಸ್ ಹೇಳಿದೆ.

ಫ್ರೆಂಚ್ ಮತ್ತು ಯುರೋಪಿಯನ್ ಒಕ್ಕೂಟದ ಆಂಟಿ ಟ್ರಸ್ಟ್‌ಪ್ರಾಧಕಾರಿಗಳು ಗೂಗಲ್‌ನ ಹಲವು ವಾಣಿಜ್ಯ ಚಟುವಟಿಕೆಗಳ ಮೇಲೆ ಗುರಿಯಾಗಿಸಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಪಾಶ್ಚಿಮಾತ್ಯ ದೇಶಗಳ ಡಿಜಿಟಲ್ ಸೇವೆಗಳ ಸಕ್ರಿಯ ನಿಯಂತ್ರಕ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿರುವ ಯುರೋಪಿಯನ್ ಯೂನಿಯನ್ ಆಂಟಿಟ್ರಸ್ಟ್‌ ಮೂರು ತಿಂಗಳ ಒಳಗೆ ಸುದ್ದಿ ಪ್ರಕಟಣೆ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುವಂತೆ ಈ ವರ್ಷದ ಆರಂಭದಲ್ಲಿ ಗೂಗಲ್‌ಗೆ ತಾತ್ಕಾಲಿಕ ಆದೇಶ ನೀಡಿತ್ತು.

English summary
France’s competition regulator said Tuesday it fined Google 500 million euros ($592 million) for failing to negotiate in good faith with French publishers in a dispute over payments for their news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X