ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಾರಿಯರ್ಸ್‌ಗಳಿಗೆ ಗೂಗಲ್‌ ಡೂಡಲ್‌ನಿಂದ ವಿಶೇಷ ಧನ್ಯವಾದ

|
Google Oneindia Kannada News

ನವದೆಹಲಿ, ಏಪ್ರಿಲ್ 26: ಗೂಗಲ್ ಕೊರೊನಾ ವಾರಿಯರ್ಸ್‌ಗಾಗಿ ವಿಶೇಷ ಡೂಡಲ್ ರಚಿಸಿ ಧನ್ಯವಾದ ಅರ್ಪಿಸಿದೆ.

ವಿಶ್ವದೆಲ್ಲೆಡೆ ಕೊರೊನಾ ಸೋಂಕು ಎತೇಚ್ಚವಾಗಿದ್ದು, ಈ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸೇವೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು, ಸಂಶೋಧಕರಿಗೆ ಗೂಗಲ್ ಡೂಡಲ್ ವಿಶೇಷ ಧನ್ಯವಾದ ಸಲ್ಲಿಸಿದೆ.

ಭಾರತಕ್ಕೆ 135 ಕೋಟಿ ನೆರವು ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ 135 ಕೋಟಿ ನೆರವು ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ

‌ ಏಪ್ರಿಲ್ 4 ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು, ಏಪ್ರಿಲ್ 14 ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಜನರು ಹಾಗೂ ಏಪ್ರಿಲ್ 17 ರಿಂದ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3.5 ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

Google Doodle Says Thanks TO All The Health Workers And Researchers Amid Covid 19 Crisis

ಕೊರೊನಾ ವಾರಿಯರ್ಸ್‌ಗಳಾದ ವೈದ್ಯರು, ನರ್ಸ್‌ಗಳು, ತುರ್ತು ಸೇವಾ ಸಿಬ್ಬಂದಿ ಸೇರಿದಂತೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಲಾಗಿದೆ. ಗೂಗಲ್ ಅನ್ನು ತೆರೆದಾಗ ವಿಶೇಷವಾಗು ಗೂಗಲ್ ಎಂದು ಬರೆದಿರುವುದು ಕಾಣಸಿಗುತ್ತದೆ. ಹಾರ್ಟ್ ಚಿತ್ರವನ್ನೂ ಇದರಲ್ಲಿ ಸೇರಿಸಲಾಗಿದೆ.

ಕೋವಿಡ್-19 ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತಿರುವ ಎಲ್ಲಾ ಕಾರ್ಮಿಕರ ಗೌರವಾರ್ಥವಾಗಿ ಎಲ್ಲರೂ ಸಹ ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಿದೆ.

ಕೊರೊನಾ ನಡುವೆ ಕೊರೊನಾ ವಾರಿಯರ್ಸ್ ಹಗಲಿರುಳು ಶ್ರಮಿಸುವುದೂ ಮುಂದುವರೆದಿದೆ. ಹೀಗಿರುವಾಗ ಕೊರೊನಾ ವೈರಸ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್‌ಗಳಿಗೆ ಕೃತಜ್ಞತೆ ಸಲ್ಲಿಸಲಾಗಿದೆ.

ಗೂಗಲ್ ಈವರೆಗೆ ತನ್ನ ಡೂಡಲ್ ಮೂಲಕ ಹಲವಾರು ಪ್ರಖ್ಯಾತ ವ್ಯಕ್ತಿಗಳ ಹುಟ್ಟುಹಬ್ಬ, ಹಬ್ಬಗಳು ಹಾಗೂ ದೇಶದ ಇತಿಹಾಸದಲ್ಲಿನ ಮಹತ್ವದ ದಿನಗಳನ್ನು ಸ್ಮರಿಸಿದೆ. ಮಹತ್ವದ ಸಂದರ್ಭಗಳನ್ನು ಗುರುತಿಸಲು ಗೂಗಲ್ ತನ್ನ ಲೋಗೋದಲ್ಲಿ ಬದಲಾವಣೆಗಳನ್ನು ಮಾಡುತ್ತದೆ.

English summary
Google Doodle said a big thank you to emergency responders at the forefront of the coronavirus crisis with a special illustration on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X