ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಜಿನ ಮಹಿಳೆ ಮಾರ್ಗಾ ಫೌಲ್ ಸ್ಟಿಶ್‌ಗೆ ಗೂಗಲ್ ಗೌರವ

By Nayana
|
Google Oneindia Kannada News

ನವದೆಹಲಿ, ಜೂನ್ 16: ಗಾಜಿನ ವಿಜ್ಞಾನದಲ್ಲಿ 300 ಕ್ಕೂ ಹೆಚ್ಚು ಪ್ರಕಾರದ ಆಪ್ಟಿಕಲ್ ಗ್ಲಾಸ್ ಗಳನ್ನು ಪರಿಶೋಧಿಸಿದ ಜರ್ಮನಿಯ ಖ್ಯಾತ ವಿಜ್ಞಾನಿ ಮಾರ್ಗಾ ಫೌಲ್ ಸ್ಟಿಶ್ ಅವರ 103 ಜನ್ಮ ದಿನದ ಅಂಗವಾಗಿ ಗೂಗಲ್ ತನ್ನ ಡೂಡಲ್ ನಲ್ಲಿ ಗೌರವ ಸಲ್ಲಿಸಿದೆ.

ಮಾರ್ಗಾ ಅವರು ಜೂನ್ 16 1915 ರಲ್ಲಿ ಅವರ ಜನನ, ಜಗತ್ತಿಗೆ ಗಾಜನ್ನು ಸರಬರಾಜು ಮಾಡುವ ಸ್ಕಾಟ್‌ ಎಜಿಯಲ್ಲಿ 44 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ಆ ಅವಧಿಯಲ್ಲಿ 300ಕ್ಕೂ ಹೆಚ್ಚು ಆಪ್ಟಿಕಲ್ ಗ್ಲಾಸ್‌ಗಳನ್ನು ತಯಾರಿಸಿದ್ದರು, 40ಕ್ಕೂ ಹೆಚ್ಚು ಪೇಟೆಂಡ್‌ಗಳು ಅವರ ಹೆಸರಿನಲ್ಲಿ ದಾಖಲಾಗಿದೆ. ಅವರು ಎಷ್ಟೋ ಮಂದಿ ಕಣ್ಣಿನ ಸಮಸ್ಯೆಯನ್ನು ಬಗೆಹರಿಸಿದ್ದರು.

Google Doodle Celebrates Glass Chemist Marga Faulstichs 103rd Birthday

ಭಾರತದ ಮಹಾನ್ ನೃತ್ಯ ಕಲಾವಿದೆಗೆ ಗೂಗಲ್ ಡೂಡಲ್ ನಮನಭಾರತದ ಮಹಾನ್ ನೃತ್ಯ ಕಲಾವಿದೆಗೆ ಗೂಗಲ್ ಡೂಡಲ್ ನಮನ

1935ರಲ್ಲಿ ಪದವಿ ಅಧ್ಯಯನ ಮುಗಿಸಿದ ಮೇಲೆ ಸ್ಕಾಟ್‌ ಎಜಿಯಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿದರು. ಅವರು ತಯಾರಿಸಿರುವ ಸನ್‌ ಗ್ಲಾಸ್‌ಗಳು ಈಗಲೂ ಬಳಕೆಯಲ್ಲಿವೆ. ಲೈಟ್‌ ವೇಟ್‌ ಲೆನ್ಸ್‌ ಎಸ್‌ಎಫ್‌ 64 ತಯಾರಿಕೆಗಾಗಿ ಅವರಿಗೆ 1973ರಲ್ಲಿ ಅಂತಾರಾಷ್ಟ್ರೀಯ ಮನ್ನಣೆ ದೊರೆತಿತ್ತು. ಅವರು ತಮ್ಮ 82ನೇ ವಯಸ್ಸಿನಲ್ಲಿ 1998ರಲ್ಲಿ ನಿಧನರಾದರು.

English summary
Known among ground-breaking female inventors, Marga Faulstich features in today's Google doodle on her 103rd birthday. Born in 1915, the German glass chemist is known to have developed over 300 kinds of eyeglass lenses and holds about 40 patents till date. Marga Faulstich worked at Schott Glass Company for 44 years and was the first female executive to have worked there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X