• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಡುಕಾಟದ ಸಂಗಾತಿಗೆ ಇಂದು 22ನೇ ವರ್ಷದ ಹುಟ್ಟುಹಬ್ಬ, ನೀವು ವಿಶ್ ಮಾಡಿ!

|

ಇಡೀ ಬ್ರಹ್ಮಾಂಡವೇ ಗುರುತ್ವ ಬಲವನ್ನು ನಂಬಿ ನಡೆಯುತ್ತಿರುವಾಗ. ಇಲ್ಲಿ ಪರಸ್ಪರ ಅವಲಂಬನೆ ಅನಿವಾರ್ಯ ಸಂಗತಿ. ಮನುಷ್ಯನ ಜ್ಞಾನ ವಿಸ್ತಾರಗೊಳ್ಳುತ್ತಾ ಸಾಗಿದಂತೆ ಹೊಸ ಹೊಸ ಆವಿಷ್ಕಾರವೂ ಅನಿವಾರ್ಯವಾಗುತ್ತಾ ಸಾಗಿತು. ಆ ಪರಿಣಾಮವಾಗಿ ಇಂದು ಸಾವಿರಾರು ಮೈಲಿ ದೂರದಲ್ಲಿರುವ ಸ್ನೇಹಿತರೊಂದಿಗೆ ಬಂಧುಗಳೊಂದಿಗೆ ಸಂಪರ್ಕ ಹೊಂದುವ ಸಾಮರ್ಥ್ಯ ನಮಗೆ ದೊರೆತಿದೆ. ಮಾಹಿತಿ ತಂತ್ರಜ್ಞಾನ ಅದರ ಇನ್ನೊಂದು ಮುಖ ಎನ್ನಬಹುದು.

ಪರಿಚಯವಿಲ್ಲದೆ ಇರುವವರನ್ನು ಪರಿಚಯಿಸುವ, ದೂರವಿದ್ದವರನ್ನೂ ಆತ್ಮೀಯನನ್ನಾಗಿಸುವ, ಭಾಷೆ, ಗಡಿ, ಮೇಲೂ ಕೀಳು ಎಲ್ಲವನ್ನೂ ಮೀರಿಸಿ ನಮ್ಮನ್ನೆಲ್ಲ ಬೆಸೆಯುವ ಕೊಂಡಿಯಾಗಿ ಈ ಮಾಹಿತಿ ತಂತ್ರಜ್ಞಾನ ಕೆಲಸ ಮಾಡುತ್ತಿದೆ. ಆದರೆ ಮಾಹಿತಿ ತಂತ್ರಜ್ಞಾನದ ಮೂಲ ನಾನೇ, ಎಂಬಂತೆ ಬೆಳೆದು ನಿಂತಿರುವ ಗೂಗಲ್‌ಗೆ ಇಂದು 22ನೇ ವರುಷದ ಹುಟ್ಟುಹಬ್ಬ. ಹಾಗಾದರೆ ಬನ್ನಿ ತಿಳಿಯೋಣ ಜಗತ್ತಿನ ಅತಿದೊಡ್ಡ ಸರ್ಚ್ ಎಂಜಿನ್ ಕುರಿತು.

ಮಾಹಿತಿ ಹುಡುಕುವ ಸಂಗಾತಿ

ಮಾಹಿತಿ ಹುಡುಕುವ ಸಂಗಾತಿ

ಹೌದು! ಗೂಗಲ್ ಜಗತ್ತಿನ ಅತಿ ದೊಡ್ಡ ಮಾಹಿತಿ ಹುಡುಕುವ ಸಂಗಾತಿ. ಅಂಗೈಯಲ್ಲಿ ಅರಮನೆ ತೋರಿಸುವುದು ಎಂಬ ನುಡಿಗುಟ್ಟನ್ನು ಅಕ್ಷರಶಃ ನಿಜಗೊಳಿಸಿದ ಸಂಗಾತಿಯಿದು. ವಿಶೇಷ ಎಂದರೆ ಇನ್ನೂ ಜಗತ್ತನ್ನೆ ಸರಿಯಾಗಿ ಕಂಡಿರದ ಪುಟ್ಟ ಮಗುವಿನಿಂದ ಹಿಡಿದು ಮುದುಕರವರೆಗೂ ಗೂಗಲ್ ಅತ್ಯಂತ ಆಪ್ತ ಮತ್ತು ಗುಪ್ತ ಮಿತ್ರ ಎಂದರೆ ತಪ್ಪೇನಲ್ಲ. ಅಷ್ಟೊಂದು ಜನಮಿಳಿತವಾಗಿ ಹೋಗಿದೆ ಗೂಗಲ್. ಕೊರೊನಾ ಸಂಕಷ್ಟದ ಸಮಯದಲ್ಲಂತೂ ಗೂಗಲ್ ಇಲ್ಲದ ಜೀವನ ಊಹಿಸಿಕೊಳ್ಳುವುದು ಕಷ್ಟ.

2020ರ ಟೈಮ್ ಪ್ರಭಾವಿ ವ್ಯಕ್ತಿಗಳ ಪಟ್ಟಿ: ಮೋದಿ, ಖುರಾನಾ, ಸುಂದರ್ ಪಿಚೈಗೆ ಸ್ಥಾನ

ಗೂಗಲ್ ಮಾಹಿತಿ ಹುಡುಕು ಸಂಗಾತಿ. ತಕ್ಷಣಕ್ಕೆ ನಿಮಗೆ ಬೇಕಾದ ಮಾಹಿತಿ ಕೊಡುವ ಅತ್ಯಾಪ್ತ ಸ್ನೇಹಿತ, ಗುರು ಎಲ್ಲವೂ ಈ ಗೂಗಲ್.

ಮರೆತು ಹೋದ ದಾರಿ ನೆನಪಿಸುವ

ಮರೆತು ಹೋದ ದಾರಿ ನೆನಪಿಸುವ

ಮರೆತು ಹೋದ ದಾರಿಯನ್ನು ನೆನಪಿಸುವ, ಆಪ್ತರಿಗೆ ಪ್ರೀತಿಯ ಸಂದೇಶ ಕಳುಹಿಸಲು ಸಹಾಯ ಮಾಡುವ, ಕಳೆದವರನ್ನು ಹುಡುಕಿ ಕೊಡುವ, ನಿಮ್ಮ ಅಡುಗೆ ಕೊಣೆ, ಶೌಚಾಲಯ, ಬೆಡ್ ರೂಮಿಗೂ ದಾರಿ ಹುಡುಕಿಕೊಡು ಎಂದರೆ ಚಾಚು ತಪ್ಪದೆ ನಿಮ್ಮ ಸಹಾಯಕ್ಕೆ ನಿಲ್ಲುವ ಏಕೈಕ ಆಪ್ತ ಮಿತ್ರ ಈ ಗೂಗಲ್. ಇಂದಿನ ಅತಿ ವೇಗದ ಜೀವನ ಶೈಲಿಯಲ್ಲಿ ಕೇಳಿದ್ದೆಲ್ಲವನ್ನೂ, ಸಿಗಲಾರದ್ದೆಲ್ಲವನ್ನೂ, ಕ್ಷಣಾರ್ಧದಲ್ಲಿ ಸಿಗುವಂತೆ ಮಾಡುವಲ್ಲಿ ಈ ಸರ್ಚ್ ಎಂಜಿನ್ ಬಹಳ ಸಹಾಯಕಾರಿಯಾಗಿ ಬೆಳೆದಿದೆ.

ಕೃತಕ ಬುದ್ದಿಮತ್ತೆಯ ತಂತ್ರಜ್ಞಾನ ಬಂದ ನಂತರವಂತೂ ಈ ಗೂಗಲ್ ನಾವು ಕೇಳದೆ ಇರುವುದನ್ನು ಕೂಡ ನಮ್ಮ ಕಣ್ಣೆದುರಿಗೆ ತಂದಿಡುವ ಸಾಮರ್ಥ್ಯವನ್ನು ಹೊಂದಿದೆ.

ಗೂಗಲ್ ಇತಿಹಾಸ

ಗೂಗಲ್ ಇತಿಹಾಸ

ಇಂದಿಗೆ ಬರೋಬ್ಬರಿ 22 ವರ್ಷಗಳ ಹಿಂದೆ ಅಂದರೆ 27 ಸೆಪ್ಟೆಂಬರ್ 1998 ರಲ್ಲಿ ಕ್ಯಾಲಿಫೊರ್ನಿಯಾದ ಸ್ಟ್ಯಾನಫೋರ್ಡ್ ವಿವಿಯ ಪಿಹೆಚ್.ಡಿ ಸಂಶೋಧಕರಾಗಿದ್ದ ಲ್ಯಾರಿ ಪೇಜ್ ಮತ್ತು ಸರ್ಜಿ ಬಿನ್ ಎಂಬೆರಡು ಸಂಶೋಧನಾ ವಿದ್ಯಾರ್ಥಿಗಳಿಂದ ಸ್ಥಾಪನೆಯಾದ ಸಂಸ್ಥೆ.

ಇದೀಗ ಇದರ ಕೇಂದ್ರ ಕಛೇರಿ ಮೌಂಟೇನ್ ವ್ಹಿವ್ ಕ್ಯಾಲಿಫೋರ್ನಿಯಾದಲ್ಲಿದೆ. ಇದನ್ನು ರೂಡಿಯಲ್ಲಿ ಗೂಗಲ್ ಪ್ಲೇಕ್ಸ್ ಎಂದು ಕರೆಯಲಾಗುತ್ತದೆ. ಪ್ರಸ್ತುತ ಭಾರತೀಯ ಮೂಲದ ಅಮೆರಿಕಾ ಉದ್ಯಮಿಯಾಗಿರುವ ಸುಂದರ್ ಪಿಚೈ ಗೂಗಲ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.

ಗೂಗಲ್ ಅರ್ಥ ಏನು ಗೊತ್ತಾ?

ಗೂಗಲ್ ಅರ್ಥ ಏನು ಗೊತ್ತಾ?

ಅಂದಹಾಗೆ ಗೂಗಲ್ ಎಂದರೆ ಇಂಗ್ಲೀಷ್ ಪದದ google ನ ಅನ್ವರ್ಥ ನಾಮ ಆಂಗ್ಲ ಭಾಷೆಯ google ಎಂದರೆ ಹತ್ತರ ಮುಂದೆ ನೂರು ಸೊನ್ನೆಗಳನ್ನು ಬರೆದಾಗ ಸಿಗುವ ಸಂಖ್ಯೆ. ಇನ್ನೂ ಈ ಗೂಗಲ್ ಸಂಸ್ಥೆ ಇರುವ ಸ್ಥಳದ ಹೆಸರು ಗೂಗಲ್ ಪ್ಲೆಕ್ಸ್. ಇಲ್ಲಿ ಗೂಗಲ್ ಪ್ಲೆಕ್ಸ್ ಎಂದರೆ ಹತ್ತರ ಮುಂದೆ ಹತ್ತು ಸೊನ್ನೆ ಬರೆದು ಆ ಸಂಖ್ಯೆಯ ಎದುರು ನೂರು ಸೊನ್ನೆಗಳನ್ನು ಬರೆದಾಗ ಸಿಗುವ ಸಂಖ್ಯೆ ಎಂದರ್ಥ.

ಇಷ್ಟೊಂದು ಮಾಹಿತಿಯನ್ನು ಯಾವ ತೊಂದರೆ ಇಲ್ಲದೆ, ತನ್ನ ಚಿಕ್ಕ ಚಿಪ್ ಒಂದರಲ್ಲಿ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರುವ ತಂತ್ರಜ್ಞಾನ ಇದಕ್ಕೆ ಇದೆ ಎಂಬುದನ್ನು ಗೂಗಲ್ ಪ್ರತಿನಿಧಿಸುತ್ತದೆ. ಒಟ್ಟಿನಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಗೆಳೆಯ ಗೂಗಲ್‌ಗೆ ನೀವೂ ವಿಶ್ ಮಾಡಿ.

#ಹ್ಯಾಪಿ ಬರ್ತಡೆ ಗೂಗಲ್.

English summary
The World's Favorite Search Site for Information Technology is Google Today. 22 years ago, on September 27, 1998 google was founded by two research students at Stanford University Larry Page and Sergey Bin in California.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X