ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ನಾಲಗೆಯಿದ್ದ ಮಮ್ಮಿ ಪತ್ತೆ; ಇದರ ಹಿಂದಿದೆ ಸತ್ತ ಮೇಲೂ ಮಾತಾಡುವ ಕಥೆ

|
Google Oneindia Kannada News

ಸೈರೋ, ಫೆಬ್ರುವರಿ 02: ಚಿನ್ನದ ನಾಲಗೆ ಹೊಂದಿದ್ದ, ಸುಮಾರು 2000 ವರ್ಷಗಳಷ್ಟು ಹಿಂದಿನ ಮಮ್ಮಿಯೊಂದು ಈಜಿಪ್ಟ್‌ನ ಟ್ಯಾಪೋಸಿರಿಸ್ ಮಗ್ನಾ ಸಮಾಧಿ ಸ್ಥಳದಲ್ಲಿ ಪುರಾತತ್ವಜ್ಞರಿಗೆ ದೊರೆತಿದೆ.

ವ್ಯಕ್ತಿಯು ಸತ್ತ ನಂತರವೂ ಆತ ಮಾತನಾಡಲಿ ಎಂಬ ಕಾರಣಕ್ಕೆ ಮೃತದೇಹದೊಂದಿಗೆ ಚಿನ್ನದ ನಾಲಗೆ ಇಡುವ ರೂಢಿ ಇತ್ತು. ಚಿನ್ನದ ನಾಲಗೆ ಇಟ್ಟರೆ ಸತ್ತ ನಂತರವೂ ಆ ವ್ಯಕ್ತಿ ಮಾತನಾಡಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ಈಜಿಪ್ಷಿಯನ್ನರಲ್ಲಿತ್ತು. ಹೀಗಾಗೇ ಮೃತದೇಹದೊಂದಿಗೆ ಚಿನ್ನದ ನಾಲಗೆ ದೊರೆತಿದೆ ಎಂದು ಈಜಿಪ್ಟ್ ಪ್ರವಾಸೋದ್ಯಮ ಹಾಗೂ ಪುರಾತತ್ವ ಸಚಿವಾಲಯ ತಿಳಿಸಿದೆ.

ಜೈಪುರದಲ್ಲಿ ಪ್ರವಾಹದಂತಹ ಮಳೆ: ಹೊರಬಂತು 2400 ವರ್ಷಗಳ ಹಳೆಯ ಮಮ್ಮಿಜೈಪುರದಲ್ಲಿ ಪ್ರವಾಹದಂತಹ ಮಳೆ: ಹೊರಬಂತು 2400 ವರ್ಷಗಳ ಹಳೆಯ ಮಮ್ಮಿ

ಚಿನ್ನದ ನಾಲಗೆಯೊಂದಿಗೆ ಇದ್ದ ಈ ಅಸ್ಥಿಪಂಜರವನ್ನು ಸಂರಕ್ಷಿಸಿಡಲಾಗಿದೆ. ಅದರ ತಲೆ ಬುರುಡೆ ಹಾಗೂ ದೇಹದ ರಚನೆ ಹಾಗೆಯೇ ಇದ್ದು, ಈ ಮಮ್ಮಿ ಸುಮಾರು 2000 ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಸುಮಾರು ಹತ್ತು ವರ್ಷಗಳಿಂದಲೂ ಈ ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟೊ ಡೋಮಿಂಗೋ ವಿಶ್ವವಿದ್ಯಾಲಯ ಇಲ್ಲಿ ಉತ್ಖನನ ಕೆಲಸ ಕೈಗೊಂಡಿದ್ದು, ಈ ಸಂದರ್ಭ ವಿಶೇಷ ಮಮ್ಮಿ ದೊರೆತಿದೆ.

Gold Tongued Mummy Found At Egypt

ಇದೇ ಸ್ಥಳದಲ್ಲಿ ಹಲವು ಗೋರಿಗಳಲ್ಲಿ ಮಮ್ಮಿಗಳು ದೊರೆತಿವೆ. ದೇಹದ ಇನ್ನಿತರ ಅಂಗಗಳು ನಾಶವಾಗಿದ್ದರೂ, ಮುಖಗಳನ್ನು ಸಂರಕ್ಷಣೆ ಮಾಡಲಾಗಿದೆ. ವ್ಯಕ್ತಿ ಹೇಗಿದ್ದ ಎಂಬುದರ ಗುರುತು ಪತ್ತೆಗೆ ಇದು ಅನುಕೂಲ ಮಾಡಿಕೊಟ್ಟಿದೆ. ಈ ಹಿಂದೆ ಇದೇ ತಂಡವು ಟ್ಯಾಪೋಸಿರಿಸ್ ಮ್ಯಾಗ್ನಾ ದೇವಾಲಯದ ಒಳಗೆ ಹಲವು ನಾಣ್ಯಗಳನ್ನು ಪತ್ತೆಹಚ್ಚಿತ್ತು. ರಾಣಿ ಕ್ಲಿಯೋಪಾತ್ರ VIIರ ಕೆತ್ತನೆ ಹೊಂದಿದ್ದ ನಾಣ್ಯಗಳು ಇವಾಗಿದ್ದವು.

English summary
A 2,000-year-old mummy bearing a tongue made of gold has been found by Archaeologists at the ancient Egyptian site Taposiris Magna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X