ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ದಾಖಲೆ ಸೇರಿದ ಚೀನಾದ ಚಿನ್ನ ಲೇಪಿತ ಶೌಚಾಲಯ

|
Google Oneindia Kannada News

ಹಾಂಗ್ ಕಾಂಗ್, ನವೆಂಬರ್ 07: ಚೀನಾ ಅಂತಾರಾಷ್ಟ್ರೀಯ ಆಮದು ಎಕ್ಸ್‌ಪೋ (CIIE)ದಲ್ಲಿ ಪ್ರದರ್ಶನಕ್ಕಿಟ್ಟಿರುವ ಚಿನ್ನ ಲೇಪಿತ ವಜ್ರ ಖಚಿತ ಟಾಯ್ಲೆಟ್ ಎಲ್ಲರ ಹುಬ್ಬೇರಿಸಿದೆ. ಈ ಗೋಲ್ಡನ್ ಟಾಯ್ಲೆಟ್ ಈಗ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಶಾಂಘೈನಲ್ಲಿ ಪ್ರದರ್ಶನವಾಗಿರುವ ಈ ಟಾಯ್ಲೆಟ್ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಕೆಲ ದಿನಗಳಿಂದ ಭಾರಿ ಚರ್ಚೆ ನಡೆದಿದೆ.

ಚಿನ್ನ ಲೇಪಿತ ಈ ಟಾಯ್ಲೆಟ್ ಗೆ 40,000 ಕ್ಕೂ ಹೆಚ್ಚು ವಜ್ರಗಳನ್ನು ಹುದುಗಿಸಿ ನಿರ್ಮಾಣ ಮಾಡಲಾಗಿದೆ. ಈ ಐಷಾರಾಮಿ ಶೌಚಾಲಯದ ಮೌಲ್ಯ 12 ಮಿಲಿಯನ್ ಯೂವನ್ ಅಥವಾ 1.3 ಮಿಲಿಯನ್ ಡಾಲರ್ ಅಥವಾ ಸುಮಾರು 9 ಕೋಟಿ ರೂಪಾಯಿ.

ಮಧ್ಯಪ್ರದೇಶದಲ್ಲಿ ವರನಿಗೆ ಶೌಚಾಲಯದೊಂದಿಗೆ ಸೆಲ್ಫಿ ಕಡ್ಡಾಯಮಧ್ಯಪ್ರದೇಶದಲ್ಲಿ ವರನಿಗೆ ಶೌಚಾಲಯದೊಂದಿಗೆ ಸೆಲ್ಫಿ ಕಡ್ಡಾಯ

ಚೀನಾದ ಬಂಗಾರದ ವ್ಯಾಪಾರಿಯೊಬ್ಬ ದಾಖಲೆ ನಿರ್ಮಿಸುವುದಕ್ಕಾಗಿ ಈ ಟಾಯ್ಲೆಟ್ ವಿನ್ಯಾಸಗೊಳಿಸಿದ್ದಾನೆ. 18ಕೆ ಬಿಳಿ ಚಿನ್ನ ಲೇಪಿತ ಟಾಯ್ಲೆಟ್ ನ್ನು ಹಾಂಕಾಂಗ್ ಆಭರಣ ಸಂಸ್ಥೆ ಆರನ್ ಶುಮ್ ಒಡೆತನದ ಕೊರೊನೆಟ್ ಎಂಬ ಬ್ರಾಂಡ್ ಗೆ ಸೇರಿದೆ. ಐಷಾರಾಮಿ ಟಾಯ್ಲೆಟ್ ಗೆ ಬುಲೆಟ್ ಪ್ರೂಫ್ ರಕ್ಷಣೆ ಒದಗಿಸಲಾಗಿದೆ ಮತ್ತು 334.68 ಕ್ಯಾರೆಟ್ ಗಳ 40,815 ವಜ್ರಗಳನ್ನು ಅಳವಡಿಸಲಾಗಿದೆ.

Gold Toilet With 40,000 Diamonds Studded Creates Social Media Storm

ಈ ಸಂಸ್ಥೆಯ ಸಂಸ್ಥಾಪಕ ಆರನ್ ಶುಮ್, ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದು, ಇದು ಶುಮ್ ನ 10 ನೇ ಗಿನ್ನಿಸ್ ವಿಶ್ವ ದಾಖಲೆಯಾಗಿದೆ. ಈ ವ್ಯಾಪಾರ ಮೇಳದಲ್ಲಿ 400 ಕ್ಯಾರೆಟ್ ವಜ್ರಗಳು ಒಳಗೊಂಡಿರುವ ಗಿಟಾರ್ ಕೂಡ ಇದೆ. ಡೈಮಂಡ್ ಆರ್ಟ್ ಮ್ಯೂಸಿಯಂ ನಿರ್ಮಿಸುವ ಇರಾದೆ ಇದೆ ಎನ್ನುತ್ತಾರೆ ಶುಮ್.

ಡೈಲಿಮೇಲ್ ವರದಿಯಂತೆ ಇದು ಸದ್ಯಕ್ಕೆ ಈ ಸಂಸ್ಥೆಯ ಸಂಸ್ಥಾಪಕ ಆರನ್ ಶುಮ್ ಅವರ ಉದ್ದೇಶ ಗಿನ್ನಿಸ್ ದಾಖಲೆ ಗಳಿಸುವುದೇ ಆಗಿತ್ತು. 10ನೇ ಬಾರಿಗೆ ಗಿನ್ನಿಸ್ ದಾಖಲೆ ಪುಸ್ತಕ ಸೇರಿದ್ದಾರೆ. ಈ 2ನೇ ಸಿಐಐಇ ಮೇಳದಲ್ಲಿ 400 ಕ್ಯಾರೆಟ್ ವಜ್ರಗಳು ಒಳಗೊಂಡಿರುವ ಗಿಟಾರ್ ಕೂಡ ಇದೆ. ಡೈಮಂಡ್ ಆರ್ಟ್ ಮ್ಯೂಸಿಯಂ ನಿರ್ಮಿಸುವ ಇರಾದೆ ಇದೆ ಎಂದು ಶುಮ್ ಹೇಳಿದ್ದಾರೆ.

ಈ ಐಷಾರಾಮಿ ಟಾಯ್ಲೆಟ್ ಖರೀದಿಸಲು ಯಾರಾದರೂ ಮುಂದೆ ಬಂದಿದ್ದಾರೆಯೇ? ಎಂಬ ಪ್ರಶ್ನೆಗೆ ಶುಮ್ ಪ್ರತಿಕ್ರಿಯಿಸಿಲ್ಲ. ಬದಲಿಗೆ ಈ ಟಾಯ್ಲೆಟ್ ಮಾರುವ ಇಚ್ಛೆ ಇಲ್ಲ ಎಂದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದ ಬಳ್ಳಾರಿಯ ಗಣಿ ಉದ್ಯಮಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಚಿನ್ನದ ಟಾಯ್ಲೆಟ್ ಹೊಂದಿದ್ದು ಭಾರಿ ಸುದ್ದಿಯಾಗಿತ್ತು.

English summary
A diamond-encrusted toilet, solid gold toilet created by a Hong Kong jeweller has taken social media by storm. The swanky toilet was unveiled at the second China International Import Expo (CIIE).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X