ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾವ್.. ನೋಡಲೇಬೇಕು, ಉಪಗ್ರಹ ತೆಗೆದ ಭೂಮಿಯ ಅದ್ಭುತ ಚಿತ್ರ!

By ಪ್ರಥಮೇಶ್ ಕೇರ್
|
Google Oneindia Kannada News

ಬೆಂಗಳೂರು, ಜನವರಿ 24: ನೀವು ಹಿಂದೆಂದೂ ಕಂಡಿರದ ಭೂಮಿಯ ಅತಿ ಅಪರೂಪದ ಚಿತ್ರಗಳನ್ನು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ. ಕಳೆದ ನವೆಂಬರಿನಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾದ GOES-R ಉಪಗ್ರಹ ಈ ಚಿತ್ರಗಳನ್ನು ತೆಗೆದಿದ್ದು ಎಲ್ಲವೂ ಹೈಡೆಫಿನೇಷನ್ ಗುಣಮಟ್ಟದಲ್ಲಿವೆ.

GOES-Rನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ತಂತ್ರಜ್ಞಾನದಿಂದ ತೆಗೆದ ಚಿತ್ರಗಳು ಹೇಗಿವೆ ಎಂಬುದನ್ನು ಜನರಿಗೆ ತೋರಿಸಲು ಈ ಫೊಟೋಗಳನ್ನು ಬಿಡುಗಡೆ ಮಾಡಿದೆ. ಈ ಅತ್ಯಾಧುನಿಕ ಚಿತ್ರಗಳ ಸಹಾಯದಿಂದ ಕೇವಲ ಐದೇ ನಿಮಿಷಗಳಲ್ಲಿ ಹವಾಮಾನದಲ್ಲಾಗುವ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಈ ಹಿಂದಿನ ತಂತ್ರಜ್ಞಾನದ ಚಿತ್ರಗಳಲ್ಲಿ ಇದಕ್ಕೆ ಹೆಚ್ಚಿನ ಸಮಯ ತಗುಲುತ್ತಿತ್ತು.

ಈ ಉಪಗ್ರಹ 35,888 ಕಿಲೋ ಮೀಟರ್ ಎತ್ತರದ ಭೂಸ್ಥಿರ ಕ್ಷಕ್ಷೆಯಲ್ಲಿದ್ದು ಚಿತ್ರಗಳನ್ನು ಕಳುಹಿಸುತ್ತಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಾದ ಮಧ್ಯದಲ್ಲಿ ಈ ಉಪಗ್ರಹವನ್ನು ಇಡಲಾಗಿದೆ. ಉಪಗ್ರಹ ಇರುವ ಎತ್ತರದಿಂದ ಪೂರ್ತಿ ಭೂಮಿಯನ್ನು ಕವರ್ ಮಾಡಿ ಚಿತ್ರಗಳನ್ನು ತೆಗೆಯಬಹುದಾಗಿದೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಶೋಧನಾ ಸಂಸ್ಥೆ ಚಿತ್ರಗಳಿಗೆ "ಸ್ವರ್ಗದ ಹೈ ಡೆಫಿನೇಷನ್," ಎಂದು ಉದ್ಘರಿಸಿದೆ.

ನಾಸಾ ಚಿತ್ರ 1

ನಾಸಾ ಚಿತ್ರ 1

ಚಿತ್ರದಲ್ಲಿ ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ ಮತ್ತು ಸುತ್ತ ಮುತ್ತಲಿನ ಪ್ರದೇಶಗಳನ್ನು ಕಾಣಬಹುದು. ಅಲ್ಲಲ್ಲಿ ಮೋಡ ಮುಸುಕಿದ್ದನ್ನೂ ಚಿತ್ರ ಸೆರೆ ಹಿಡಿದಿದೆ. ಉಪಗ್ರಹದಲ್ಲಿನ ಅತ್ಯಾಧುನಿಕ ಕ್ಯಾಮೆರಾಗಳು ಈ ಚಿತ್ರ ತೆಗೆದಿವೆ.

ನಾಸಾ ಚಿತ್ರ 2

ನಾಸಾ ಚಿತ್ರ 2

ದಕ್ಷಿಣ ಅಮೆರಿಕಾ ಖಂಡದ ಮೇಲೆ ನಿಂತಿರುವ ಮೋಡಗಳನ್ನು ಕಾಣಬಹುದು. ಉತ್ತರ ಅಮೆರಿಕಾ ಖಂಡ ದಾಟಿ ಮುಂದುವರಿದ ಈ ಮೋಡಗಳು ಅಮೆರಿಕಾವನ್ನು ಮಂಜಿನಲ್ಲಿ ಮುಳುಗಿಸಿ ಹಾಕಿತ್ತು. ತೀವ್ರ ಚಳಿಗೆ ಹಲವಾರು ಜನ ಅಮೆರಿಕಾದಲ್ಲಿ ಸಾವಿಗೀಡಾಗಿದ್ದರು.

ನಾಸಾ ಚಿತ್ರ 3

ನಾಸಾ ಚಿತ್ರ 3

ಚಿತ್ರದ ಮೇಲ್ಭಾಗದ ಬಲ ಬದಿಯಲ್ಲಿ ಕಾಣಿಸುತ್ತಿರುವುದು ಸಹರಾ ಮರುಭೂಮಿ. ಇಲ್ಲಿನ ಒಣ ಹವೆ ಸೈಕ್ಲೋನಿನ ರಚನೆ ಮತ್ತು ಸೈಕ್ಲೋನಿನ ದಿಕ್ಕು ನಿರ್ಧರಿಸುತ್ತದೆ. ಹಾಗಾಗಿ ಈ ಚಿತ್ರ ಪ್ರಮುಖವಾಗಿದೆ.

ನಾಸಾ ಚಿತ್ರ 4

ನಾಸಾ ಚಿತ್ರ 4

ಚಿತ್ರದಲ್ಲಿ ಭೂಮಿ ಮತ್ತು ಚಂದ್ರ ಎರಡೂ ಒಂದೇ ಫ್ರೇಮಿನಲ್ಲಿ ಸೆರೆಯಾಗಿವೆ. ಚಂದ್ರನ ಮೇಲೆ ಇರುವ ಕಪ್ಪು ಕುಳಿಗಳನ್ನು ಚಿತ್ರದಲ್ಲಿ ಕಾಣಬಹುದು. ಅದೇ ರೀತಿಯಲ್ಲಿ ಭೂಮಿ ಮೇಲಿನ ಮೋಡಗಳ ರಚನೆಯೂ ಚಿತ್ರದಲ್ಲಿದೆ.ಚಿತ್ರ ಕೃಪೆ: ನಾಸಾ

English summary
The GOES-16, locked in geostationary orbit, took some stunning images with its primary camera
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X