ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗಿಯಾದ ಪ್ಯಾಂಟ್ ಧರಿಸಿ ಬಂದಿದ್ದ ಸಂಸದೆ ಸಂಸತ್ತಿನಿಂದ ಹೊರಕ್ಕೆ

|
Google Oneindia Kannada News

ಟೈಟ್‌ ಪ್ಯಾಂಟ್ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಸಂಸದೆಯನ್ನು ಸಂಸತ್ತಿನಿಂದ ಹೊರಹಾಕಿರುವ ಘಟನೆ ತಾಂಜೇನಿಯಾದಲ್ಲಿ ನಡೆದಿದೆ.

ಶಾಸಕರಾದ ಹುಸೇನ್ ಅಮರ್ ಅವರು ಉಡುಪಿನ ಬಗ್ಗೆ ಪ್ರತಿಭಟನೆ ಮಾಡಿದ ಬಳಿಕ ಅವರನ್ನು ಸ್ಪೀಕರ್ ಜಾಬ್ ನ್ಡುಗೈ ಅವರು ಹೊರಹಾಕಿದರು. ಚೆನ್ನಾಗಿ ಭಟ್ಟ ಧರಿಸಿ, ನಂತರ ನಮ್ಮೊಂದಿಗೆ ಮತ್ತೆ ಸೇರಿಕೊಳ್ಳಿ ಎಂದು ಹೇಳಿದ್ದಾರೆ.

ಅವರ ಪ್ಯಾಂಟ್ ಬಿಗಿಯಾಗಿರುವುದರಿಂದ ರಾಷ್ಟ್ರೀಯ ಅಸ್ಸೆಂಬ್ಲಿಯಿಂದ ಹೊರಹೋಗುವಂತೆ ಅವರಿಗೆ ಸೂಚಿಸಲಾಗಿತ್ತು. ತಾಂಜೇನಿಯಾದ ಮಹಿಳಾ ಸಂಸದೆ ಕಂಡೆಸ್ಟರ್ ಸಿಚ್ವಾಲೆ ಅವರನ್ನು ವಿಚಿತ್ರ ಉಡುಪು ಧರಿಸಿದ್ದಕ್ಕಾಗಿ ಸಂಸತ್ತಿನಿಂದ ಹೊರಹಾಕಲಾಯಿತು.

 Go Dress Up Well Female MP Removed From Tanzania Parliament For Wearing Tight Pants

ಸ್ಪೀಕರ್ ಜಾಬ್ ಅವರು ಸಂಸತ್ತಿನ ಮಹಿಳಾ ಸದಸ್ಯರ ಉಡುಪುಗಳ ಬಗ್ಗೆ ಸೂರು ಸ್ವೀಕರಿಸಿದ್ದು ಇದೇ ಮೊದಲಲ್ಲ ಎಂದು ಹೇಳಿದರು.ಅನುಚಿತವಾಗಿ ಬಟ್ಟೆ ಧರಿಸಿರುವ ಯಾರಿಗಾದರೂ ಪ್ರವೇಶವನ್ನು ನಿರಾಕರಿಸುವಂತೆ ಚೇಂಬರ್ ಆದೇಶಗಳಿಗೆ ಸೂಚನೆ ನೀಡಿದರು.

ಮಹಿಳಾ ಶಾಸಕರು ಬಿಗಿಯಾದ ಜೀನ್ಸ್ ಧರಿಸುವುದನ್ನು ನಿಷೇಧಿಸುವ ಸಂಸತ್ತಿನ ನಿಯಮಗಳ ಒಂದು ಭಾಗವನ್ನು ಉಲ್ಲೇಖಿಸಿ ಸಂಸತ್ತು ಸಮಾಜದ ಪ್ರತಿಬಿಂಬವಾಗಿದೆ ಎಂದು ಹುಸೇನ್ ಹೇಳಿದರು.

ನಮ್ಮ ಕೆಲವು ಸಹೋದರಿಯರು ವಿಚಿತ್ರವಾದ ಬಟ್ಟೆಗಳನ್ನು ಧರಿಸುತ್ತಿದ್ದಾರೆ ಅವರು ಸಮಾಜಕ್ಕೆ ಏನು ಸಂದೇಶ ರವಾನಿಸುತ್ತಿದ್ದಾರೆ ಎಂದು ಪುರುಷ ಸಂಸದರೊಬ್ಬರು ಹೇಳಿದ್ದಾರೆ.

English summary
Women lawmakers in Tanzania have called for an apology to a Member of Parliament who was told to leave the National Assembly because of her tight-fitting trousers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X