• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಗತಿಕ ಭಯೋತ್ಪಾದನೆ ಸೂಚ್ಯಂಕ 2020 : 8ನೇ ಸ್ಥಾನದಲ್ಲಿ ಭಾರತ

|

2020ನೇ ಸಾಲಿನ ಜಾಗತಿಕ ಭಯೋತ್ಪಾದನೆ ಸೂಚ್ಯಂಕ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಅತೀ ಹೆಚ್ಚು ಭಯೋತ್ಪಾದನೆ ಪೀಡಿತ ರಾಷ್ಟ್ರಗಳ ಪೈಕಿ ಭಾರತ 8ನೇ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನ, ಪಾಕಿಸ್ತಾನ, ಭಾರತದಲ್ಲಿ ಸುಧಾರಣೆ ಹೊರತಾಗಿಯೂ ಸತತ ಎರಡನೇ ವರ್ಷ, ದಕ್ಷಿಣ ಏಷ್ಯಾವು ಭಯೋತ್ಪಾದನೆಯಿಂದ ಹೆಚ್ಚು ಪ್ರಭಾವಿತವಾಗಿದ್ದು, ಇತರೆ ಪ್ರದೇಶಗಳಿಗಿಂತ ಹೆಚ್ಚು ಸಾವುಗಳನ್ನು ದಾಖಲಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಲಷ್ಕರ್ ಪರ ಬರಹ; ಆರೋಪಿಗಳ ಬಂಧನಕ್ಕೆ ತಂಡ ರಚನೆ

ಭಾರತವೂ ಎಂಟನೇ ಸ್ಥಾನದಲ್ಲಿದ್ದು, 7.353ರಷ್ಟು ಅಂಕವನ್ನು ಗಳಿಸಿದೆ.163 ದೇಶಗಳಲ್ಲಿ ಅಫ್ಘಾನಿಸ್ತಾ 9.592, ಇರಾಕ್ 8.682, ನೈಜೀರಿಯಾ 8.314ರಷ್ಟು ಅಂಕ ಗಳಿಸಿದೆ.

ಜಾಗತಿಕವಾಗಿ ಭಯೋತ್ಪಾದನೆಯಿಂದ ಸಾವನ್ನಪ್ಪಿರುವ ಸಂಖ್ಯೆಯಲ್ಲಿ 2018ಕ್ಕೆ ಹೋಲಿಸಿದರೆ 2019ಕ್ಕೆ ಶೇ.15ರಷ್ಟು ಕಡಿಮೆಯಾಗಿ , 2014ರಲ್ಲಿ ಉತ್ತುಂಗದಲ್ಲಿತ್ತು, ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದಿದೆ.

ಅಫ್ಘಾನಿಸ್ತಾನದಲ್ಲಿ ಸಾವಿನ ಸಂಖ್ಯೆ ಶೇ.22ರಷ್ಟು ಕುಸಿದಿದೆ. 2019ರಲ್ಲಿ 63 ದೇಶಗಳಲ್ಲಿ ಭಯೋತ್ಪಾದನೆಯಿಂದ ಒಂದೇ ಒಂದು ಸಾವು ಸಂಭವಿಸಿದೆ. 17 ದೇಶಗಳಲ್ಲಿ 100ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಅಫ್ಘಾನಿಸ್ತಾನ, ನೈಜೀರಿಯಾದಲ್ಲಿ 1 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

2019ರಲ್ಲಿ ಭಾರತದಲ್ಲಿ 558 ಭಯೋತ್ಪಾದನಾ ದಾಳಿಗಳು ನಡೆದಿವೆ. 277 ಮಂದಿ ಮೃತಪಟ್ಟಿದ್ದಾರೆ. 2019ರಲ್ಲಿ ಶೇ.20ರಷ್ಟು ಸಾವುಗಳು ಕಡಿಮೆಯಾಗಿವೆ.

English summary
For the second year in a row, South Asia was the most impacted region by terrorism in 2019, recording more deaths than any other region, despite improvements in Afghanistan, Pakistan, and India, said Global Terrorism Index 2020 report by The Institute for Economic & Peace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X