ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ, ಸೌದಿ ಅರೇಬಿಯಾ, ಯುಎಇ ಒತ್ತಡಕ್ಕೆ ಮಣಿದು ಅಭಿನಂದನ್ ಬಿಡುಗಡೆ

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Surgical Strike 2: ಜಾಗತಿಕ ಒತ್ತಡ, ಭಾರತದ ರಾಜತಾಂತ್ರಿಕ ನಡೆ ಪೈಲಟ್ ಬಿಡುಗಡೆಗೆ ಕಾರಣ | Oneindia Kannada

ಇಸ್ಲಾಮಾಬಾದ್, ಮಾರ್ಚ್ 01: ಭಾರತೀಯ ವಾಯು ಸೇನೆ ವಿಂಗ್ ಕಮಾಂಡರ್ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಶುಕ್ರವಾರದಂದು ಬಿಡುಗಡೆ ಮಾಡಲಾಗುತ್ತದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಗುರುವಾರದಂದು ಘೋಷಿಸಿದರು. ಇಮ್ರಾನ್ ಅವರು ಈ ರೀತಿ ತಕ್ಷಣದ ಕ್ರಮ ಕೈಗೊಳ್ಳಲು ಏನು ಕಾರಣ ಎಂಬುದರ ಬಗ್ಗೆ ವಿವರ ಇಲ್ಲಿದೆ

ಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಶುಕ್ರವಾರ ಬಿಡುಗಡೆಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಶುಕ್ರವಾರ ಬಿಡುಗಡೆ

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಹಾಗೂ ಪಾಕಿಸ್ತಾನದಿಂದ 'ಸಭ್ಯವಾದ ಸುದ್ದಿ' ಕೇಳ ಬಯಸುತ್ತೇನೆ ಎಂದು ಹೇಳಿಕೆ ನೀಡಿ ನಾಲ್ಕು ಗಂಟೆಗಳ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಐಎಎಫ್ ಪೈಲಟ್ ಅಭಿನಂದನ್ ಅವರ ಬಿಡುಗಡೆ ಬಗ್ಗೆ ಘೋಷಣೆ ಮಾಡಿದ್ದನ್ನು ಗಮನಿಸಬಹುದು.

ಪಾಕ್ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?

Imran Khan

ಯುಎಸ್ ಅಲ್ಲದೆ, ಸೌದಿ ಅರೇಬಿಯಾ ಕೂಡಾ ಇಲ್ಲಿ ಮಹತ್ವದ ಪಾತ್ರವಹಿಸಿದೆ. ಸೌದಿ ದೊರೆ ಮೊಹಮ್ಮದ್ ಬಿನ್ ಜಾಯೆದ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಬ್ಬರಿಗೂ ಫೋನ್ ಕರೆ ಮಾಡಿ ಈ ಕುರಿತಂತೆ ಮಾತುಕತೆ ನಡೆಸಿದ್ದರು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿ, ಮಾತುಕತೆ ಹಾಗೂ ಸಂವಹನಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಸೌದಿ ದೊರೆ ಸಲಹೆ ನೀಡಿದ್ದರು.

ಇದಲ್ಲದೆ, ಜೀನಿವಾ ಒಪ್ಪಂದದ ಪ್ರಕಾರ ಅಭಿನಂದನ್ ಅವರನ್ನು ವಾಪಸ್ ಕಳಿಸದಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸಬೇಕಾಗುತ್ತದೆ. ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಕಾರಣದಿಂದ ಜಾಗತಿಕವಾಗಿ ಮೂಲೆಗುಂಪಾಗುವ ಭೀತಿ ಎದುರಾಗುತ್ತದೆ ಎಂಬ ಕಾರಣವೂ ಪ್ರಮುಖವಾಗಿದೆ.

ದಾಳಿ ಕುರಿತಂತೆ ಭಾರತ ಎಚ್ಚರಿಕೆ ಸಂದೇಶ ನೀಡಿರುವುದು, ಶಾಂತಿ ಮಾತುಕತೆ ಗೆ ಪಾಕಿಸ್ತಾನ ಸಿದ್ಧ ಎಂದು ತೋರಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

English summary
Pakistan Prime Minister, Imran Khan announced on Thursday that IAF Pilot, Wing Commander Abhinandan Varthaman would be released. He made this statement at a joint session of Parliament just four hours after US President Donald Trump said that there would reasonably decent news on India and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X