ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾದ್ಯಂತ 40 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿತರ ಸಾವು

|
Google Oneindia Kannada News

ಕೊರೊನಾ ಸೋಂಕು ಜಗತ್ತಿನಾದ್ಯಂತ ಹಬ್ಬಿದಂತೆಯೇ ಇದುವರೆಗೆ 40 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜಗತ್ತಿನ ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.50ರಷ್ಟು ಸಾವುಗಳು ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ ಮತ್ತು ಮೆಕ್ಸಿಕೋ ದೇಶದಲ್ಲಿ ಸಂಭವಿಸಿದೆ.

ಅಮೆರಿಕ ಮತ್ತು ಬ್ರಿಟನ್ ದೇಶಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆದರೆ ಡೆಲ್ಟಾ ರೂಪಾಂತರವು ಪ್ರಪಂಚಾದ್ಯಂತ ಪ್ರಬಲವಾಗಿರುವುದರಿಂದ ಹಲವಾರು ರಾಷ್ಟ್ರಗಳು ಲಸಿಕೆ ಕೊರತೆಯನ್ನು ಅನುಭವಿಸುತ್ತಿವೆ.

ಕೋವಿಡ್19: ಜೂನ್ 17ರಂದು ಜಾಗತಿಕ ಗುಣಮುಖ ಸಂಖ್ಯೆ ಹೆಚ್ಚಳಕೋವಿಡ್19: ಜೂನ್ 17ರಂದು ಜಾಗತಿಕ ಗುಣಮುಖ ಸಂಖ್ಯೆ ಹೆಚ್ಚಳ

ರಾಯ್ಟರ್ಸ್ ವಿಶ್ಲೇಷಣೆಯ ಪ್ರಕಾರ ಪ್ರತಿದಿನ ವಿಶ್ವಾದ್ಯಂತ ವರದಿಯಾಗುವ ಪ್ರತಿ ಮೂರು ಸಾವುಗಳಲ್ಲಿ ಒಂದು ಸಾವು ಭಾರತದಲ್ಲಿ ಸಂಭವಿಸುತ್ತಿದೆ. ಕೋವಿಡ್ ಸಂಬಂಧಿತ ಸಾವಿನ ಸಂಖ್ಯೆ 20 ಲಕ್ಷ ತಲುಪಲು ಒಂದು ವರ್ಷ ತೆಗೆದುಕೊಂಡಿತು. ಆದರೆ ಮುಂದಿನ 20 ಲಕ್ಷ ಸಾವುಗಳು 166 ದಿನಗಳಲ್ಲಿ ದಾಖಲಾಗಿವೆ.

Global Covid Toll Exceeds 4 Million, Last 2 Million Deaths In 166 Days

ಭಾರತದಲ್ಲಿ ಒಟ್ಟು ಮೃತರ ಸಂಖ್ಯೆ 3,81,903ಕ್ಕೆ ಏರಿಕೆಯಾಗಿದೆ. ಬಡ ರಾಷ್ಟ್ರಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿವೆ, ಸಾಂಕ್ರಾಮಿಕವನ್ನು ನಿಯಂತ್ರಿಸಲು ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳಿಗೆ ಹೆಚ್ಚಿನ ದೇಣಿಗೆ ನೀಡಬೇಕೆಂದು ಒತ್ತಾಯಿಸಲಾಗಿದೆ.

ಜೂನ್17ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 177,884,539 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 3,850,515ಕ್ಕೇರಿದೆ. ಒಟ್ಟಾರೆ, 162,394,090 ಮಂದಿ ಗುಣಮುಖರಾಗಿದ್ದಾರೆ.

ಒಟ್ಟು 11,639,934 ಸಕ್ರಿಯ ಪಾಸಿಟಿವ್ 82,812 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 166,244,605 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

English summary
Coronavirus-related deaths worldwide passed a grim milestone of 4 million on Thursday, according to a Reuters tally, as many countries struggle to procure enough vaccines to inoculate their populations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X