• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾಗತಿಕವಾಗಿ ಕೊರೊನಾಗೆ ಬಲಿಯಾದವರ ಸಂಖ್ಯೆ 10 ಲಕ್ಷ ದಾಟಿದೆ!

|

ನವದೆಹಲಿ, ಸೆಪ್ಟೆಂಬರ್ 29: ಜಾಗತಿಕವಾಗಿ ಮಹಾಮಾರಿ ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆಯು ವಿಶ್ವದಾದ್ಯಂತ 1 ಮಿಲಿಯನ್‌ಗಿಂತಲೂ (10 ಲಕ್ಷ) ಹೆಚ್ಚಾಗಿದೆ.

ರಾಯಿಟರ್ಸ್ ಲೆಕ್ಕಾಚಾರದ ಪ್ರಕಾರ ಜಾಗತಿಕವಾಗಿ ಕೋವಿಡ್ ಸಾಂಕ್ರಾಮಿಕಕ್ಕೆ 10 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದು, ಹಲವಾರು ದೇಶಗಳಲ್ಲಿ ಸೋಂಕುಗಳು ಮತ್ತೆ ಹೆಚ್ಚಾಗುವುದರಿಂದ ಸಾವು-ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ.

ಭಾರತದಲ್ಲಿ ಒಂದೇ ದಿನ 70589 ಮಂದಿಗೆ ಕೊವಿಡ್-19 ಪಾಸಿಟಿವ್

ಕೊರೊನವೈರಸ್-ಸಂಬಂಧಿತ ಕಾಯಿಲೆಗಳ ಸಾವು ಕೇವಲ ಮೂರು ತಿಂಗಳಲ್ಲಿ ಅರ್ಧ ಮಿಲಿಯನ್‌ನಿಂದ ದ್ವಿಗುಣಗೊಂಡಿದೆ. ಇದು ಅಮೆರಿಕಾ, ಬ್ರೆಜಿಲ್ ಮತ್ತು ಭಾರತದಲ್ಲಿ ಸಂಭವಿಸಿದ ಸಾವುಗಳು ಹೆಚ್ಚಾದ ಪರಿಣಾಮ ಒಟ್ಟು ಪ್ರಮಾಣದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಅಮೆರಿಕಾ, ಬ್ರೆಜಿಲ್ ಮತ್ತು ಭಾರತವು ಜಾಗತಿಕವಾಗಿ ಎಲ್ಲಾ ಕೋವಿಡ್-19 ಸಾವುಗಳಲ್ಲಿ ಸುಮಾರು ಶೇ. 45ರಷ್ಟಿದೆ, ಲ್ಯಾಟಿನ್ ಅಮೆರಿಕನ್ ಪ್ರದೇಶ ಮಾತ್ರ ಅವುಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಕಾರಣವಾಗಿದೆ.

ಅಮೆರಿಕಾವು ಕೊರೊನಾ ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದು ಎರಡು ಲಕ್ಷಕ್ಕೂ ಅಧಿಕ ಜನರು ಪ್ರಾಣಕಳೆದುಕೊಂಡಿದ್ದಾರೆ. ಭಾರತದಲ್ಲಿ 96 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

   ಉಪಚುನಾವಣೆಯ ಟಿಕೆಟ್ ಅಂಗಡಿ ಕುಟಂಬಕ್ಕೆ ಕೊಡಿ! | Oneindia Kannada

   English summary
   More than 1 million people have died of COVID-19 around the world as of Tuesday, according to a Reuters tally. Know more .
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X