ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿಗೆ ವಿಶ್ವದಾದ್ಯಂತ 4.8 ಲಕ್ಷ ಮಂದಿ ಬಲಿ: ಸೋಂಕಿತರೆಷ್ಟು?

|
Google Oneindia Kannada News

ವಾಷಿಂಗ್ಟನ್, ಜೂನ್ 25: ಕೊರೊನಾವೈರಸ್ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮರಣಮೃದಂಗ ಬಾರಿಸುತ್ತಿದೆ.ಕೊರೊನಾವೈರಸ್ ಗೆ ಬಲಿಯಾದವರ ಸಂಖ್ಯೆ ಇದೀಗ 4.8 ಲಕ್ಷಕ್ಕೇರಿದೆ.

Recommended Video

ಸುಶಾಂತ್ ಸಿಂಗ್ ಲವ್ವರ್ ವಿರುದ್ಧ ದಾಖಲಾಯಿತು ಕೇಸ್ | Complaint against Sushant singh Ex girlfriend Rhea

ಸೋಂಕಿತರ ಸಂಖ್ಯೆ ಇದೇ ವೇಗದಲ್ಲಿ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 1 ಕೋಟಿ ದಾಟಲಿದೆ. ಇನ್ನು ಒಟ್ಟಾರೆ ಸೋಂಕಿತರಲ್ಲಿ 484,972 ಮಂದಿ ಮೃತಪಟ್ಟಿದ್ದು, ಇದುವರೆಗೆ ಒಟ್ಟು 5,175,404 ಸೋಂಕು ಪೀಡಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದ ಚೀನಾಬೀಜಿಂಗ್‌ನಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದ ಚೀನಾ

ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಕೊವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದುವರೆಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 4.8 ಲಕ್ಷಕ್ಕೇರಿದೆ. ಅಮೆರಿಕದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ಸಂಶೋಧನಾ ಕೇಂದ್ರ ವರದಿ ಮಾಡಿರುವಂತೆ ಈ ವರೆಗೂ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 95, 27,123ಕ್ಕೆ ಏರಿಕೆಯಾಗಿದೆ.

Global COVID-19 Cases Top 9.4 Million

ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 606,881ಕ್ಕೆ ಏರಿದ್ದು, ಸಾವಿನ ಸಂಖ್ಯೆ 8,513 ಆಗಿದೆ. ಇಂಗ್ಲೆಂಡ್‌ನಲ್ಲಿ 43,081, ಇಟಲಿಯಲ್ಲಿ 34,644 ಮತ್ತು ಫ್ರಾನ್ಸ್‌ನಲ್ಲಿ 29,731ಜನರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಅತಿಹೆಚ್ಚು (2,462,554) ಜನರಲ್ಲಿ ಸೋಂಕು ಕಾಣಿಸಿಕೊಂಡಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 124,281 ಮಂದಿ ಮೃತಪಟ್ಟಿದ್ದಾರೆ.1,040,605 ಮಂದಿ ಗುಣಮುಖರಾಗಿದ್ದಾರೆ.

ಬ್ರೆಜಿಲ್‌ನಲ್ಲಿ 1,192,474ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 53,874 ಸೋಂಕಿತರು ಮೃತಪಟ್ಟು, 649,908 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿ 14,894 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. 1,86,514 ಮಂದಿ ಸೋಂಕಿತರಿದ್ದಾರೆ.

English summary
The overall number of global COVID-19 cases has topped 9.4 million, while the deaths have surged to more than 482,000, according to the Johns Hopkins University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X