ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣ

|
Google Oneindia Kannada News

ಮಾರ್ಚ್ 20: ಜಾಗತಿಕ ಮಟ್ಟದಲ್ಲಿ ಕೊರೊನಾ ಸೋಂಕು ದಿನೇ ದಿನೇ ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ. ಮಹಾಮಾರಿ ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ 245,629 ಮಂದಿಗೆ ತಗುಲಿದ್ದು, ಇಲ್ಲಿಯವರೆಗೂ 10,048 ಮಂದಿ ಬಲಿಯಾಗಿದ್ದಾರೆ.

ಕೊರೊನಾ ವೈರಸ್ ತವರು ಚೀನಾ ಒಂದರಲ್ಲೇ 3,248 ಜನ ಮೃತಪಟ್ಟಿದ್ದಾರೆ. ಕೋವಿಡ್-19 ನ ಕೇಂದ್ರಬಿಂದು ಇದೀಗ ಯೂರೋಪ್ ಆಗಿದ್ದು, ಚೀನಾಗಿಂತ ಇಟಲಿಯಲ್ಲೇ ಸಾವಿನ ಸಂಖ್ಯೆ ಹೆಚ್ಚಾಗಿದೆ. ಇಟಲಿಯಲ್ಲಿ ಇಲ್ಲಿಯವರೆಗೆ 3,405 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!

ಕೋವಿಡ್-19 ಎಂಬ ಮಹಾಮಾರಿ ವಿಶ್ವದ 179 ದೇಶಗಳಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಸ್ಪೇನ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಯೂರೋಪ್ ರಾಷ್ಟ್ರಗಳಲ್ಲಿ ಕೊರೊನಾ ರುದ್ರನರ್ತನ ಹೆಚ್ಚಾಗಿದೆ. ಕೊರೊನಾ ಕ್ರೂರತೆಯಿಂದ ಅಮೇರಿಕಾದಲ್ಲೂ ತಲ್ಲಣ ಸೃಷ್ಟಿಯಾಗಿದೆ.

ವಿಶ್ವದ ಅಂಕಿ ಅಂಶ

ವಿಶ್ವದ ಅಂಕಿ ಅಂಶ

ವಿಶ್ವದಾದ್ಯಂತ ಕೊರೊನಾ ಸೋಂಕಿತ ಪ್ರಕರಣಗಳು - 245,629

ವಿಶ್ವದಾದ್ಯಂತ ಕೋವಿಡ್-19 ನಿಂದಾಗಿ ಮೃತಪಟ್ಟವರು - 10,048

ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವವರು - 88,437

ಚಿಂತಾಜನಕ ಸ್ಥಿತಿಯಲ್ಲಿ ಇರುವವರು - 7,378

ಚೇತರಿಸಿಕೊಳ್ಳುತ್ತಿರುವ ಚೀನಾ

ಚೇತರಿಸಿಕೊಳ್ಳುತ್ತಿರುವ ಚೀನಾ

ಕೊರೊನಾ ವೈರಸ್ ಸೋಂಕಿನಿಂದ ಕಂಗೆಟ್ಟಿದ್ದ ಚೀನಾ ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಚೀನಾದಲ್ಲೀಗ ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದೆ. ಕೊರೊನಾ ಮೊದಲು ಕಾಣಿಸಿಕೊಂಡಿದ್ದ ವುಹಾನ್ ನಲ್ಲೂ ಮಾರ್ಚ್ 18 ರಂದು ಯಾವುದೇ ಹೊಸ ಕೊರೊನಾ ಸೋಂಕಿತ ಪ್ರಕರಣ ದಾಖಲಾಗದಿರುವುದು ನಿಟ್ಟುಸಿರು ಬಿಡುವ ಸಂಗತಿ.

ತತ್ತರಿಸಿರುವ ಯೂರೋಪ್

ತತ್ತರಿಸಿರುವ ಯೂರೋಪ್

ಕೋವಿಡ್-19 ಹೊಡೆತದಿಂದಾಗಿ ಯೂರೋಪ್ ತತ್ತರಿಸಿದೆ. ಅದರಲ್ಲೂ ಇಟಲಿಯಲ್ಲಿ ಕೊರೊನಾ ವೈರಸ್ ನಿಂದಾಗಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕೈಮೀರುತ್ತಿರುವ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಇಟಲಿ, ಫ್ರಾನ್ಸ್ ಲಾಕ್ ಡೌನ್ ಮಂತ್ರ ಪಠಿಸುತ್ತಿದೆ.

ಅಮೇರಿಕಾದಲ್ಲಿನ ಪರಿಸ್ಥಿತಿ

ಅಮೇರಿಕಾದಲ್ಲಿನ ಪರಿಸ್ಥಿತಿ

ಡೆಡ್ಲಿ ಕೊರೊನಾ ವೈರಸ್ ಸೋಂಕು ಯು.ಎಸ್.ಎ ನಲ್ಲೂ ಹೆಚ್ಚಾಗುತ್ತಿದೆ. ಸದ್ಯ ಅಲ್ಲಿ 14,315 ಪ್ರಕರಣಗಳು ದಾಖಲಾಗಿದ್ದು, 218 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಕ್ಯಾಲಿಫೋರ್ನಿಯಾದಲ್ಲಿ ''ಎಲ್ಲರೂ ಮನೆಯಲ್ಲೇ ಇರಬೇಕು. ಅನಿವಾರ್ಯತೆ ಇದ್ದಾಗ ಮಾತ್ರ ಹೊರಗೆ ಬನ್ನಿ'' ಎಂದು ಗವರ್ನರ್ ಆದೇಶಿಸಿದ್ದಾರೆ.

ಎಲ್ಲೆಲ್ಲೂ ಆತಂಕ

ಎಲ್ಲೆಲ್ಲೂ ಆತಂಕ

ಕೊರೊನಾ ವೈರಸ್ ನಿಂದಾಗಿ ಇರಾನ್ ಕೂಡ ಹೆಣಗಾಡುತ್ತಿದೆ. ಕೆನಡಾ, ಮಲೇಶಿಯಾ, ಆಸ್ಟ್ರೇಲಿಯಾ, ಇಸ್ರೇಲ್, ಭಾರತದಲ್ಲೂ ಆತಂಕ ಹೆಚ್ಚಾಗಿದೆ. ರೋಗ ಲಕ್ಷಣ ಕಾಣಿಸಿಕೊಂಡವರು 14 ದಿನಗಳ ಕಾಲ ಪ್ರತ್ಯೇಕಗೊಳ್ಳುವಂತೆ ಎಲ್ಲರಿಗೂ ಸೂಚಿಸಲಾಗುತ್ತಿದೆ. ಇಡೀ ವಿಶ್ವಕ್ಕೆ ಪೆಡಂಭೂತವಾಗಿ ಕಾಣುತ್ತಿರುವ ಕೊರೊನಾದಿಂದ ಅದ್ಯಾವಾಗ ಮುಕ್ತಿ ಸಿಗುತ್ತೋ.?!

English summary
Coronavirus: Global Coronavirus death toll surpasses 10,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X