• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಕೆ-ಇಂಡಿಯಾ ವೀಕ್‌ನಲ್ಲಿ ಭಾಗವಹಿಸಲಿದೆ ಗಣ್ಯರ ದಂಡು

By Prasad
|

ಲಂಡನ್ : ಜೂನ್ 18ರಿಂದ 22ರವರೆಗೆ ಇಲ್ಲಿ ನಡೆಯಲಿರುವ ಯುಕೆ-ಇಂಡಿಯಾ ವೀಕ್ ಶೃಂಗ ಸಮ್ಮೇಳನದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಹಲವಾರು ಚರ್ಚಾಗೋಷ್ಠಿಗಳು ನಡೆಯಲಿವೆ. ಜೊತೆಗೆ ಯುಕೆ, ಇಂಡಿಯಾಗಳ ಸಂಬಂಧದ ಸಂಭ್ರಮಾಚರಣೆಗಳನ್ನು ಆಯೋಜಿಸಲಾಗಿದ್ದು, ಎರಡೂ ದೇಶಗಳ ಗಣ್ಯಾತಿಗಣ್ಯರು ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಜೂನ್ 18ರಂದು ಲಂಡನ್‌ನ ತಾಜ್ ಬಕಿಂಗ್‌ಹ್ಯಾಂ ಗೇಟ್ ಹೋಟೆಲ್‌ನಲ್ಲಿ ಯುಕೆ-ಇಂಡಿಯಾ ವೀಕ್ ಉದ್ಘಾಟನೆಗೊಳ್ಳಲಿದೆ. ಎಂಪಿ ಹಾಗೂ ಇಂಟರ್‌ನ್ಯಾಷನಲ್ ಟ್ರೇಡ್ ಸೆಕ್ರೆಟರಿ ಲಿಯಾಮ್ ಫಾಕ್ಸ್, ಎಂಪಿ ಎಮಿಲಿ ಥಾರ್ನಬೆರ್ರಿ, ಎಂಪಿ ಹಾಗೂ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಡಿಜಿಟಲ್, ಕಲ್ಚರ್, ಮೀಡಿಯಾ ಆಂಡ್ ಸ್ಪೋರ್ಟ್‌ನ ಮ್ಯಾಟ್ ಹ್ಯಾನಕಾಕ್ ಜಂಟಿಯಾಗಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಇಂಡಿಯಾ ಇಂಕ್‌ನಿಂದ 'ಯುಕೆ-ಇಂಡಿಯಾ ವೀಕ್ 2018'

ಶುಕ್ರವಾರ ಜೂನ್ 22ರಂದು ಸಮಾರೋಪ ಜರುಗಲಿದ್ದು, ಗೌರವ ಅತಿಥಿಗಳಾಗಿ ಲಂಡನ್ ಮೇಯರ್ ಸಾದಿಕ್ ಖಾನ್, ವಿದೇಶಾಂಗ ಸಚಿವ ಮಾರ್ಕ್ ಫೀಲ್ಡ್ ಪಾಲ್ಗೊಳ್ಳಲಿದ್ದಾರೆ. ಯುಕೆ-ಇಂಡಿಯಾ ವೀಕ್ ಅಂಗವಾಗಿ ಜೂನ್ 20, 21ರಂದು ನಡೆಯಲಿರುವ 5ನೇ ವರ್ಷದ ಯುಕೆ-ಇಂಡಿಯಾ ಲೀಡರ್‌ಶಿಪ್ ಕಾನ್‌ಕ್ಲೇವ್‌ನಲ್ಲಿ ಹಲವಾರು ಉನ್ನತ ಮಟ್ಟದ ಸಭೆಗಳು ನಡೆಯಲಿವೆ. ಲಿಬರಲ್ ಡೆಮೊಕ್ರಾಟ್ ಪಾರ್ಟಿ ಮುಖಂಡ ಎಂಪಿ ವಿನ್ಸ್ ಕೇಬಲ್, ಮಾಜಿ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್‌ನ ಪ್ರೀತಿ ಪಟೇಲ್, ಶಾಡೊ ಸೆಕ್ರೆಟರಿ ಹಾಗೂ ಎಂಪಿ ಬ್ಯಾರಿ ಗಾರ್ಡಿನರ್ ಸೇರಿದಂತೆ ಇನ್ನೂ ಹಲವಾರು ಯುಕೆಯ ಗಣ್ಯರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

ಪ್ರತಿಷ್ಠಿತ ಕಾರ್ಯಕ್ರಮವಾಗಿರುವ ಯುಕೆ-ಇಂಡಿಯಾ ಲೀಡರ್‌ಶಿಪ್ ಕಾನ್‌ಕ್ಲೇವ್‌ನಲ್ಲಿ ಭಾರತದ ಹಲವಾರು ರಾಜಕೀಯ ಹಾಗೂ ಉದ್ಯಮ ಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ. ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಹಾಗೂ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್‌ಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದು, ಬ್ರೆಕ್ಸಿಟ್ ನಂತರದ ಬ್ರಿಟನ್ ಹಾಗೂ ಬ್ರಿಟನ್‌ನಲ್ಲಿ ಭಾರತದ ಹೂಡಿಕೆಗಳ ಅವಕಾಶಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಒಟ್ಟಾರೆಯಾಗಿ ಎರಡೂ ದೇಶಗಳ ಸುಮಾರು 200ಕ್ಕೂ ಅಧಿಕ ಗಣ್ಯರು ಪ್ರತಿನಿಧಿಗಳಾಗಿ ಆಗಮಿಸಲಿದ್ದಾರೆ.

ಯುಕೆಯಲ್ಲಿನ ಭಾರತದ ಹೈ ಕಮೀಶನರ್ ಯಶವರ್ಧನ್ ಸಿನ್ಹಾ ಪ್ರಥಮ ದಿನದ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ಅರ್ಥ ಶಾಸ್ತ್ರಜ್ಞ ಹಾಗೂ ಭಾರತದ ನೀತಿ ಆಯೋಗ ಚೇರಮನ್ ಡಾ. ರಾಜೀವ್ ಕುಮಾರ್ ಅವರು ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ವಿಚಾರ ಮಂಡಿಸಲಿದ್ದಾರೆ.

ಭಾರತೀಯ ಜನತಾ ಪಕ್ಷದ ವಿದೇಶಾಂಗ ನೀತಿ ವೇದಿಕೆ ಮುಖ್ಯಸ್ಥ ವಿಜಯ ಚೌಥಾಯಿವಾಲೆ, ಲೋಕಸಭಾ ಸದಸ್ಯ ಡಾ. ಸ್ವಪನ್ ದಾಸಗುಪ್ತಾ ಭಾಗವಹಿಸಲಿದ್ದು, ಭಾರತದ ಹಣಕಾಸು, ರೈಲ್ವೆ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪಿಯೂಶ್ ಗೋಯೆಲ್ ವಿಡಿಯೋ ಲಿಂಕ್ ಮೂಲಕ ಮಾತನಾಡಲಿದ್ದಾರೆ.

ಬಕಿಂಗ್‌ಹ್ಯಾಂಶೈರ್‌ನ ಡೆ ವೆರೆ ಲ್ಯಾಟಿಮೆರ್ ಎಸ್ಟೇಟ್‌ನಲ್ಲಿ ನಡೆಯಲಿರುವ ಯುಕೆ-ಇಂಡಿಯಾ ಲೀಡರ್‌ಶಿಪ್ ಕಾನ್‌ಕ್ಲೇವ್, 'ಬ್ರೆಕ್ಸಿಟ್ ಬ್ರಿಟನ್ ಹಾಗೂ ಹಾಗೂ ಜಾಗತಿಕ ಭಾರತದ' ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆ ಹಾಗೂ ಲಭ್ಯವಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಲಿದೆ.

ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಹಾಗೂ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್(ಎಫ್‌ಐಸಿಸಿಐ) ಗಳ ಪ್ರತಿನಿಧಿಗಳೊಂದಿಗೆ ಕಾನ್ಫೆಡರೇಶನ್ ಆಫ್ ಬ್ರಿಟಿಷ್ ಇಂಡಸ್ಟ್ರಿಯ ಡೆಪ್ಯೂಟಿ ಡೈರೆಕ್ಟರ್ ಜನರಲ್ ಜೋಶ್ ಹಾರ್ಡಿ ಸಹ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಗ್ಲೋಬಲ್ ಇನ್ವೆಸ್ಟರ್ ಫೋರಂ ಅಲ್ಲದೆ ಇನ್ನೂ ಅನೇಕ ದೂರದೃಷ್ಟಿಯ ಚರ್ಚಾಕೂಟಗಳು ಸಹ ಗಮನ ಸೆಳೆಯಲಿವೆ. ಅಂದು ನಡೆಯಲಿರುವ ಸಭೆಗಳ ಪಟ್ಟಿ ಹೀಗಿದೆ:

* 'ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಬಾಂಧವ್ಯದ ಅವಕಾಶಗಳು' ಹಾಗೂ 'ಸ್ಮಾರ್ಟ್ ಹಾಗೂ ಸುರಕ್ಷಿತ ನಗರಗಳ ನಿರ್ಮಾಣ' ಕುರಿತು ಎಫ್‌ಐಸಿಸಿಐ ನಿಂದ ಚರ್ಚಾಕೂಟ.

* ದಿ ಅನ್‌ಟ್ಯಾಪ್ಡ್ ಪೊಟೆನ್ಶಿಯಲ್ ಆಫ್ ದಿ ಯುಕೆ ಆಂಡ್ ಇಂಡಿಯಾಸ್ ಸಾಫ್ಟ್ ಪವರ್ ಕುರಿತು ಭಾರತದ ಖ್ಯಾತ ಚಲನಚಿತ್ರ ನಟ, ಉದ್ಯಮಿ ವಿವೇಕ್ ಒಬೇರಾಯ್ ಸಭೆಯನ್ನು ನಡೆಸಿಕೊಡಲಿದ್ದಾರೆ.

* ಎಂಪಿ ಬ್ಯಾರಿ ಗಾರ್ಡಿನರ್, ದಿ ಫ್ಯೂಚರ್ ಆಫ್ ಎನರ್ಜಿ ಆಂಡ್ ಕ್ಲೈಮೇಟ್ ಚೇಂಜ್ ಕೋ ಆಪರೇಶನ್ ವಿಷಯ ಕುರಿತ ಚರ್ಚಾಕೂಟದ ನೇತೃತ್ವ ವಹಿಸಲಿದ್ದು, ಹೀರೊ ಫ್ಯೂಚರ್ ಎನರ್ಜೀಸ್ ಸಂಸ್ಥೆ ಸಹಭಾಗಿತ್ವ ವಹಿಸಲಿದೆ.

* ಮೌಲ್ಯಗಳ ಪ್ರತಿಪಾದನೆ, ಪ್ರಜಾಪ್ರಭುತ್ವ ಹಾಗೂ ಭ್ರಷ್ಟಾಚಾರ ಕುರಿತು ಕಾಮನ್‌ವೆಲ್ತ್ ಎಂಟರ್‌ಪ್ರೈಸ್ ಆಂಡ್ ಇನ್ವೆಸ್ಟ್‌ಮೆಂಟ್ ಕೌನ್ಸಿಲ್ ಚೇರಮನ್ ಹಾಗೂ ಮಾಜಿ ಯುಕೆ ಟ್ರೇಡ್ ಎನ್ವಾಯ್ ಲಾರ್ಡ್ ಜೋನಾಥನ್ ಮಾರ್ಲ್ಯಾಂಡ್ ಮಾತನಾಡಲಿದ್ದಾರೆ.

* ಓಲಾ ಕ್ಯಾಬ್ಸ್ ಸಂಸ್ಥೆ ವತಿಯಿಂದ 'ದ ಫ್ಯೂಚರ್ ಆಫ್ ಮೊಬಿಲಿಟಿ ಆಂಡ್ ಇಂಡಿಯಾಸ್ ಅಸ್ಪಿರೇಶನ್ಸ್ ಟು ಬಿ ಎ ಗ್ಲೋಬಲ್ ಹಬ್ ಫಾರ್ ಎಲೆಕ್ಟ್ರಿಕ್ ವೆಹಿಕಲ್ಸ್' ಕುರಿತು ಸಭೆ ನಡೆಯಲಿದೆ.

* ಇನ್ಫೊಸಿಸ್ ನಿಂದ ಯಂಗ್ ಲೀಡರ್ಸ್ ಫೋರಂ ಆಯೋಜಿಸಲಾಗಿದೆ.

* ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯುಕೆ ಕಂಪನಿಗಳು, ಕುಟುಂಬ ಕಚೇರಿಗಳು ಹಾಗೂ ಭಾರತದ ಬೃಹತ್ ಚಾರಿಟೆಬಲ್ ಟ್ರಸ್ಟ್‌ಗಳ ದುಂಡು ಮೇಜಿನ ಪರಿಷತ್ತು ಜರುಗಲಿದ್ದು, ಇದನ್ನು ಬ್ರಿಟಿಷ್ ಏಶಿಯನ್ ಟ್ರಸ್ಟ್ ನಡೆಸಿಕೊಡಲಿದೆ.

ಯುಕೆ ಇಂಡಿಯಾ ವೀಕ್ ಹಾಗೂ ಇಂಡಿಯಾ ಇಂಕ್‌ನ ಸಂಸ್ಥಾಪಕ ಮನೋಜ ಲದ್ವಾ ಹೇಳುವುದು ಹೀಗೆ:

"ಬ್ರೆಕ್ಸಿಟ್ ಎಂಬುದು ಬ್ರಿಟನ್ ಪಾಲಿಗೆ ಜಾಗತಿಕವಾಗಿ ಹೊಸ ಸಂಬಂಧಗಳನ್ನು ಬೆಸೆಯುವ ಹಾಗೂ ಗುರುತಿಸಿಕೊಳ್ಳುವ ಅವಕಾಶವಾಗಿದೆ. ಅದೇ ರೀತಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯ ಭಾರತ, ಜಾಗತಿಕ ಆರ್ಥಿಕ ಸುಪರ್ ಪವರ್ ಆಗಲು ಯತ್ನಿಸುತ್ತಿದೆ. ಇದು ಗ್ಲೋಬಲ್ ಬ್ರಿಟನ್ ಗ್ಲೋಬಲ್ ಭಾರತದ ಸಮ್ಮಿಲನದ ಕ್ಷಣವಾಗಿದೆ.

ಯುಕೆ-ಇಂಡಿಯಾ ವೀಕ್ ಇದು ಬ್ರಿಟನ್ ಹಾಗೂ ಭಾರತದ ಗಟ್ಟಿ ಬಾಂಧವ್ಯವನ್ನು ಸಂಭ್ರಮಿಸುವ ಕಾಲವಾಗಿದೆ. ಎರಡೂ ದೇಶಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಬುನಾದಿ ಹಾಕಲಿದೆ. ಎರಡೂ ದೇಶಗಳಿಗೆ ಪರಸ್ಪರರಿಂದ ಅಪರಿಮಿತ ಅವಕಾಶಗಳಿವೆ. ಏಕರೂಪದ ಮೌಲ್ಯಗಳು, ವ್ಯಾಪಾರ-ವ್ಯವಹಾರ, ತಂತ್ರಜ್ಞಾನ ಹಾಗೂ ಸಮೃದ್ಧಿಯನ್ನು ದೇಶಗಳಲ್ಲಿ ಮಾತ್ರವಲ್ಲದೆ ಜಗತ್ತಿನಲ್ಲಿಯೇ ವಿಸ್ತರಿಸುವ ಅವಕಾಶ ಇದಾಗಿದೆ."

ರಾಜಕೀಯ ಹಾಗೂ ಆರ್ಥಿಕ ವಲಯದ ಚರ್ಚೆ ಮಾತ್ರವಲ್ಲದೆ, ಬ್ರಿಟನ್ ಹಾಗೂ ಭಾರತದ ಮಧ್ಯದ ಸಾಂಸ್ಕೃತಿಕ ಸಂಬಂಧವನ್ನೂ ಬೆಸೆಯುವ ಕ್ಷಣ ಇದಾಗಿದ್ದು, ಅಂತಾರಾಷ್ಟ್ರೀಯ ಯೋಗ ದಿನದಂದು ಬೆಳಗಿನ ಜಾವ ಯೋಗ ಶಿಬಿರವನ್ನು ಸಹ ಆಯೋಜಿಸಲಾಗಿದೆ. ಫ್ಯೂಜನ್ ಜಾಝ್ ಸಂಗೀತ ಹಾಗೂ ಸ್ವಾದಿಷ್ಟ ಭೋಜನದ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ.

English summary
UK India Week- a five-day international event where 'Global Britain Meets Global India' will be held in London and Buckinghamshire. The event will witness participation of global business leaders and senior politicians from the UK and India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more