ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರಿಕರಿಗೆ ಭಾರತ ಸೂಕ್ತ ನೆಲೆಯಲ್ಲ

By Mahesh
|
Google Oneindia Kannada News

ಬೆಂಗಳೂರು, ಅ.3: ಹಿರಿಯ ನಾಗರಿಕರ ಪಾಲಿಗೆ ಭಾರತ ಸೂಕ್ತ ನೆಲೆ ಒದಗಿಸುವ ದೇಶವಲ್ಲ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. Global Age Watch Index (GAWI) ಸಮೀಕ್ಷೆ ವರದಿಯಂತೆ ಭಾರತ ನಾಲ್ಕು ವಿಭಾಗಗಳಲ್ಲೂ ಕಡಿಮೆ ಅಂಕ ಗಳಿಸಿದೆ.

ಹಿರಿಯ ನಾಗರಿಕರ ಆರೋಗ್ಯ ಸಂರಕ್ಷಣೆ(85), ಉದ್ಯೋಗ ಹಾಗೂ ಶಿಕ್ಷಣ (73), ವಾಸಿಸಲು ಸೂಕ್ತ ಪರಿಸರ (72) ಹಾಗೂ ಆದಾಯ ಭದ್ರತೆ ಹೀಗೆ ವಿವಿಧ ವಿಭಾಗಗಳಲ್ಲಿ ಭಾರತ ಕಡಿಮೆ ಶ್ರೇಯಾಂಕ ಗಳಿಸಿ ಹಿರಿಯ ನಾಗರಿಕರಿಗೆ ಸೂಕ್ತವಲ್ಲದ ತಾಣ ಎನಿಸಿದೆ ಎಂದು ವರದಿ ಹೇಳಿದೆ. Global Age Watch Index (GAWI) ಸಮೀಕ್ಷೆ ಹಿರಿಯ ನಾಗರಿಕರ ಸ್ಥಿತಿ ಗತಿ ಕುರಿತು ವಿಶ್ವಸಂಸ್ಥೆ ಬೆಂಬಲಿತ ಅಧ್ಯಯವಾಗಿದೆ.

ಗ್ಲೋಬಲ್ ಏಜ್ ವಾಚ್ ಇಂಡೆಕ್ಸ್- 2013 ಪ್ರಕಾರ ಹಿರಿಯ ನಾಗರಿಕರಿಗೆ ಅತ್ಯುತ್ತಮ ಎನಿಸುವ 91 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 73ನೇ ಸ್ಥಾನ ಸಿಕ್ಕಿದೆ. ಹಿರಿಯ ನಾಗರಿಕರ ಆದಾಯ, ಶಿಕ್ಷಣ, ಆರೋಗ್ಯ, ವೃತ್ತಿ ಮತ್ತು ಪರಿಸರಕ್ಕೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರೆ ಏಜೆನ್ಸಿಗಳ ವರದಿಯನ್ನು ಆಧರಿಸಿ ಶ್ರೇಯಾಂಕ ಪಟ್ಟಿ ಘೋಷಿಸಲಾಗಿದೆ.

Global Age Watch Index (GAWI)

ಹಿರಿಯ ನಾಗರಿಕರ ಪಾಲಿಗೆ ಸ್ವೀಡನ್ ಉತ್ತಮ ದೇಶವಾಗಿದ್ದು, ನಿವೃತ್ತಿ ಬದಕನ್ನು ಆರಾಮವಾಗಿ ಕಳೆಯಬಹುದು ಎಂದು ವರದಿ ಹೇಳಿದೆ, ನಾರ್ವೆ, ಬ್ರಿಟನ್ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿದ್ದರೆ. ಹಿರಿಯ ನಾಗರಿಕರಿಗೆ ಅಘ್ಘಾನಿಸ್ತಾನ ಅತಿ ಕೆಟ್ಟ ದೇಶವಾಗಿದೆ. ಈ ವರದಿ ಪ್ರಕಾರ ಅನೇಕ ದೇಶಗಳು ವೃದ್ಧರ ಸಮಸ್ಯೆ ಎದುರಿಸಲು ಸರಿಯಾದ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ.

ಯುನೈಟೆಡ್ ಕಿಂಗ್ಡಮ್ ಶ್ರೇಯಾಂಕದಲ್ಲಿ ಹಿಂದೆ ಬೀಳಲು ಅಲ್ಲಿನ ಬಸ್ ಹಾಗೂ ರೈಲುಗಳ ಅವ್ಯವಸ್ಥೆ ಕಾರಣ ಎನ್ನಲಾಗಿದೆ. ಅದರಲ್ಲೂ ಬ್ರಿಟನ್ನಿನ ಗ್ರಾಮೀಣ ಭಾಗದಲ್ಲಿ ಸಾರಿಗೆ ಸಂಪರ್ಕ ಸರಿಯಾಗಿಲ್ಲ ಇದರಿಂದಾಗಿ ಉದ್ಯೋಗ ಹಾಗೂ ಶಿಕ್ಷಣ ಸೌಲಭ್ಯ ಪಡೆಯಲು ಹಿರಿಯ ನಾಗರಿಕರಿಗೆ ಕಷ್ಟವಾಗುತ್ತಿದೆ. ಈ ವಿಭಾಗದಲ್ಲಿ ಬ್ರಿಟನ್ 24ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ ಎಂದು ವರದಿ ಹೇಳಿದೆ.

English summary
As per report of the Global Age Watch Index (GAWI). India fares poorly in almost all four domains: Health status (85), Employment and Education (73) Enabling environment(72)and Income security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X