ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯಾರ್ಜಿಯಾ ಮೆಲೋನಿ: ಇಟಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಪ್ರಧಾನಿ

|
Google Oneindia Kannada News

ರೋಮ್, ಸೆ. 26: ಇಟಲಿ ದೇಶದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಟ್ಟರ್ ಬಲಪಂಥೀಯ ಪಕ್ಷಗಳ ಮೈತ್ರಿಕೂಟ ಬಹುಮತ ಪಡೆದಿದೆ. ಜಿಯಾರ್ಜಿಯಾ ಮೆಲೋನಿ ಪ್ರಧಾನಿಯಾಗಲಿದ್ದಾರೆ. ಇಟಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ.

ಮೆಲೋನಿ ನೇತೃತ್ವದ ಮೈತ್ರಿಕೂಟ ಶೇ. 43ರಷ್ಟು ಮತ ಪಡೆದಿದ್ದು, ಸೆನೇಟ್‌ನಲ್ಲಿ (ನಮ್ಮ ಲೋಕಸಭೆಯ ರೀತಿ) 114ಕ್ಕೂ ಹೆಚ್ಚು ಸ್ಥಾನಗಳು ಸಿಗುವುದು ಖಚಿತವಾಗಿದೆ. ಬಹುಮತಕ್ಕೆ ಬೇಕಿರುವ 104 ಸ್ಥಾನಗಳು ಸಿಗುವುದು ಬಹಳ ಸುಲಭ. ಇನ್ನು ಎದುರಾಳಿ ಎನ್ರಿಕೋ ಲೇಟ್ಟಾ ಅವರ ಡೆಮಾಕ್ರಟಿಕ್ ಪಕ್ಷಕ್ಕೆ ಶೇ. 19ರಷ್ಟು ಮತ ಸಿಕ್ಕಿದೆ. ಮತ್ತೊಂದು ವಿಪಕ್ಷವಾದ ಗಿಯುಸೆಪ್ಪೆ ಕಾಂಟೆ ನಾಯಕತ್ವದ ಫೈವ್ ಸ್ಟಾರ್ ಮೂವ್ಮೆಂಟ್ ಪಕ್ಷ ಶೇ. 16ರಷ್ಟು ಮತ ಗಳಿಸಿ ಅಚ್ಚರಿ ಮೂಡಿಸಿದೆ.

ಚೀನಾದ ಅಧ್ಯಕ್ಷಗಿರಿ ಕುರ್ಚಿ ಗಟ್ಟಿಯಾಗಿಸಿಕೊಳ್ಳಲು ಕ್ಸಿ ಜಿನ್‌ಪಿಂಗ್ ಸೀಕ್ರೆಟ್ ಆಪರೇಷನ್!ಚೀನಾದ ಅಧ್ಯಕ್ಷಗಿರಿ ಕುರ್ಚಿ ಗಟ್ಟಿಯಾಗಿಸಿಕೊಳ್ಳಲು ಕ್ಸಿ ಜಿನ್‌ಪಿಂಗ್ ಸೀಕ್ರೆಟ್ ಆಪರೇಷನ್!

45 ವರ್ಷದ ಜಿಯಾರ್ಜಿಯಾ ಮೆಲೋನಿ ಅವರದ್ದು ಕಟ್ಟರ್ ಬಲಪಂಥೀಯ ಪಕ್ಷವಾದ ಬ್ರದರ್ಸ್ ಅಫ್ ಇಟಲಿ. ಎರಡನೇ ವಿಶ್ವ ಮಹಾಯುದ್ಧದ ನಂತರ ಇಟಲಿಯಲ್ಲಿ ಕಟ್ಟರ್ ಬಲಪಂಥೀಯ ಪಕ್ಷವೊಂದು ಅಧಿಕಾರಕ್ಕೆ ಬರುತ್ತಿರುವುದು ಇದೇ ಮೊದಲಾಗಿದೆ.

Giorgia Meloni, The First Woman Prime Minister For Italy

ಇಪ್ಪತ್ತನೇ ಶತಮಾನದಲ್ಲಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಸರ್ವಾಧಿಕಾರಿಗಳಲ್ಲಿ ಜರ್ಮನಿಯ ಅಡಾಲ್ಫ್ ಹಿಟ್ಲರ್, ಇಟಲಿಯ ಬೆನಿಟೋ ಮುಸ್ಸೋಲಿನಿ ಪ್ರಮುಖರು. ಮುಸ್ಸೋಲಿನಿಯ ನಂತರ ಫ್ಯಾಸಿಸ್ಟ್ ಎಂದು ಕರೆಯಲಾಗುವ ಇಟಲಿ ರಾಷ್ಟ್ರೀಯವಾದದ ಪರಂಪರೆಯನ್ನು ಬ್ರದರ್ಸ್ ಆಫ್ ಇಟಲಿ ಮುಂದುವರಿಸಿದೆ. ಬ್ರದರ್ಸ್ ಆಫ್ ಇಟಲಿಯನ್ನು ನಿಯೋಫ್ಯಾಸಿಸ್ಟ್ ಅಥವಾ ನವಫ್ಯಾಸಿಸ್ಟ್ ಪಕ್ಷವೆಂದು ಟೀಕಾಕಾರರು ಕರೆಯುವುದುಂಟು. ಮುಸ್ಸೋಲಿನಿ ನಿಧನದ ನಂತರ ಇಟಲಿಯಲ್ಲಿ ಹಲವು ನಿಯೋಫ್ಯಾಸಿಸ್ಟ್ ಪಕ್ಷಗಳು ಹುಟ್ಟಿದ್ದವು. ಇಟಲಿಯನ್ ಸೋಷಿಯಲ್ ಮೂವ್ಮೆಂಟ್, ನ್ಯಾಷನಲ್ ಅಲಾಯನ್ಸ್ ಮೊದಲಾದವು ಇದ್ದವು.

ಸೌದಿ ಅರೇಬಿಯಾದಲ್ಲಿ ಬೃಹತ್ ಚಿನ್ನ ಮತ್ತು ತಾಮ್ರದ ನಿಕ್ಷೇಪ ಪತ್ತೆಸೌದಿ ಅರೇಬಿಯಾದಲ್ಲಿ ಬೃಹತ್ ಚಿನ್ನ ಮತ್ತು ತಾಮ್ರದ ನಿಕ್ಷೇಪ ಪತ್ತೆ

ಜಿಯಾರ್ಜಿಯಾ ಯಾರು?
ಜಿಯಾರ್ಜಿಯಾ ಮೆಲೋನಿ ಬ್ರದರ್ಸ್ ಆಫ್ ಇಟಲಿ ಪಕ್ಷದ ಮುಖ್ಯಸ್ಥೆ. ಚಿಕ್ಕಂದಿನಿಂದಲೇ ಇವರು ಇಟಲಿಯನ್ ಸೋಷಿಯಲ್ ಮೂವ್ಮೆಂಟ್ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಈಗಲೂ ಇವರು ಮುಸ್ಸೋಲಿನಿಯನ್ನು ನೇರವಾಗಿ ಸಮರ್ಥಿಸಿಕೊಳ್ಳದೇ ಹೋದರೂ ಅವರ ಬಗ್ಗೆ ಅನುಕಂಪದ ಮಾತುಗಳನ್ನು ಹಲವು ಬಾರಿ ಆಡಿದ್ದಾರೆ.

Giorgia Meloni, The First Woman Prime Minister For Italy

ಮುಸ್ಸೋಲಿನಿ ಅವರದ್ದು ಬಹಳ ಸಂಕೀರ್ಣ ವ್ಯಕ್ತಿತ್ವವಾಗಿತ್ತು. ಅವರ ಆಡಳಿತದ ಅವಧಿಯಲ್ಲಿ ಎಲ್ಲವೂ ಕೆಟ್ಟದಾಗಿತ್ತು ಎಂದು ಹಲವು ಇಟಲಿಯನ್ನರು ಈಗಲೂ ಭಾವಿಸುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಮೆಲೋನಿ ಹೇಳುತ್ತಾರೆ.

ಇಟಲಿಯಲ್ಲಿ ಕಟ್ಟರ್ ಬಲಪಂಥೀಯ ಪಕ್ಷ ಅಧಿಕಾರಕ್ಕೆ ಬರುತ್ತಿದೆ ಎಂದು ಟೀಕಿಸುವ ಜನರಿಗೆ ಜಿಯಾರ್ಜಿಯಾ ಮೆಲೋನಿ, "ಫ್ರಾನ್ಸ್ ಮತ್ತು ಜರ್ಮನಿಯಲ್ಲೂ ಬಲಪಂಥೀಯರೇ ಅಧಿಕಾರಕ್ಕೆ ಬಂದಿದ್ದಾರೆ. ಅವರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇಟಲಿಯಲ್ಲಿ ಬಲಪಂಥೀಯರು ಅಧಿಕಾರಕ್ಕೆ ಬಂದರೆ ಇವರಿಗೆ ಆಗದು" ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಸರಕಾರ ರಚನೆ ಹೇಗೆ?
ಇಟಲಿ ಚುನಾವಣೆ ಆಗಿ ಮತ ಎಣಿಕೆ ಆಗಿರುವುದು ಹೌದು. ಆದರೆ, ಫಲಿತಾಂಶ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಇಟಲಿ ಅಧ್ಯಕ್ಷ ಸೆರ್ಗಿಯೋ ಮಾಟರೆಲ್ಲಾ ಅವರು ಪಕ್ಷ ಮುಖಂಡರೊಂದಿಗೆ ಸಮಾಲೋಚಿಸಿ ನಂತರ ಮೆಲೋನಿಗೆ ಸರಕಾರ ರಚಿಸಲು ಹೇಳಬಹುದು. ಇದಾಗಲು ಕೆಲ ವಾರಗಳೇ ಬೇಕಾಗುತ್ತದೆ ಎಂದು ವರದಿಗಳು ಹೇಳುತ್ತಿವೆ. ಇನ್ನು ಹೊಸ ಸಂಸತ್ತು ಅಕ್ಟೋಬರ್ 13ರಂದು ಮೊದಲ ಬಾರಿಗೆ ಸಭೆ ಸೇರುವ ನಿರೀಕ್ಷೆ ಇದೆ.

ಜಿಯಾರ್ಜಿಯಾ ಮೆಲೋನಿ ಅವರಿಗೆ ಯಾವುದೇ ಆಡಳಿತದ ಅನುಭವ ಇಲ್ಲ. ಹೀಗಾಗಿ, ಅವರಿಗೆ ಮುಂದಿನ ದಿನಗಳು ಅಗ್ನಿಪರೀಕ್ಷೆಯ ಕಾಲ ಎನ್ನಬಹುದು. ಈಗ ಆರ್ಥಿಕ ಹಿಂಜರಿತದ ಪರಿಸ್ಥಿತಿ ಇರುವುದರಿಂದ ಸವಾಲು ದೊಡ್ಡದೇ ಇದೆ.

ಹಿಂದಿನ ಪ್ರಧಾನಿ ಮಾರಿಯೋ ಡ್ರಾಗಿ ಅವರ ಆಡಳಿತದ ಅವಧಿಯಲ್ಲಿ ಇಟಲಿಯ ಆರ್ಥಿಕತೆ ತುಸು ಸಮಾಧಾನ ಎನ್ನುವಂಥ ರೀತಿಯಲ್ಲಿ ಇತ್ತು. ಮೆಲೋನಿ ಅವರು ಅದೇ ನೀತಿಯನ್ನು ಅನುಸರಿಸಿಕೊಂಡು ಹೋಗುತ್ತಾರಾ ಗೊತ್ತಿಲ್ಲ. ಆದರೆ, ಐರೋಪ್ಯ ಒಕ್ಕೂಟದ ವಿರುದ್ಧ ಮೆಲೋನಿ ಮೊದಲಿಂದಲೂ ಆಕ್ರೋಶ ವ್ಯಕ್ತಪಡಿಸಿಕೊಂಡು ಬಂದವರು. ಈಗ ಪ್ರಧಾನಿ ಆದ ಮೇಲೂ ಅವರು ಅದೇ ಧೋರಣೆ ಮುಂದುವರಿಸುತ್ತಾರಾ ಗೊತ್ತಿಲ್ಲ. ಹಾಗೊಂದು ವೇಳೆ ಅವರು ಯೂರೋಪಿಯನ್ ಯೂನಿಯನ್‌ಗೆ ಬೆನ್ನು ತಿರುಗಿಸಿದರೆ ಇಟಲಿಗೆ ಕಷ್ಟವಾಗಬಹುದು.

(ಒನ್ಇಂಡಿಯಾ ಸುದ್ದಿ)

English summary
Italy's far right party has got majority in Italy. Giorgia Meloni set to become first female PM in the history of Itly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X