ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ರೋಗಿಗಳಿಗೆ 'ಈ' ಲಸಿಕೆ ನೀಡಬೇಡಿ ಎಂದ ಡಬ್ಲ್ಯೂಎಚ್‌ಒ

|
Google Oneindia Kannada News

ಲಂಡನ್, ನವೆಂಬರ್ 20: ಕೋವಿಡ್ 19 ನಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಎಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಅವರಿಗೆ ಗಿಲೀಡ್‌ನ ರೆಮ್ಡೆಸಿವಿರ್ ಔಷಧ ನೀಡುವುದನ್ನು ಶಿಫಾರಸು ಮಾಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ರೆಮ್ಡೆಸಿವಿರ್ ನೀಡಿದ ರೋಗಿಯಲ್ಲಿನ ಬದುಕುವ ಶಕ್ತಿ ವೃದ್ಧಿಸುತ್ತದೆ ಮತ್ತು ವೆಂಟಿಲೇಷನ್ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂಬ ಹೇಳಿಕೆಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಡಬ್ಲ್ಯೂಎಚ್‌ಒ ಸಮಿತಿ ಹೇಳಿದೆ.

'ಮರಣ ಪ್ರಮಾಣದ ಇಳಿಕೆ, ಯಾಂತ್ರಿಕ ವೆಂಟಿಲೇಷನ್‌ನ ತಗ್ಗಿಸುವಿಕೆ, ಕ್ಲಿನಿಕಲ್ ಸುಧಾರಣೆಯ ಸಮಯ ಸೇರಿದಂತೆ ರೆಮ್ಡೆಸಿವಿರ್ ಔಷಧದಿಂದ ರೋಗಿಗಳಲ್ಲಿ ಸಾಕಷ್ಟು ಸುಧಾರಣೆ ಉಂಟಾಗುತ್ತದೆ ಎನ್ನುವುದಕ್ಕೆ ಸಮಿತಿಗೆ ಪುರಾವೆಗಳು ಸಿಕ್ಕಿಲ್ಲ' ಎಂದು ಡಬ್ಲ್ಯೂಎಚ್‌ಒ ಸಮಿತಿಯ ಮಾರ್ಗಸೂಚಿ ಹೇಳಿದೆ.

ಕೋವಿಡ್ 19 ವಿರುದ್ಧದ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್ ಬಹು ಪರಿಣಾಮಕಾರಿಯಾಗಲಿದೆ ಎಂದು ಜಗತ್ತಿನ ಗಮನ ಸೆಳೆದಿದ್ದ ಔಷಧಕ್ಕೆ ಇದರಿಂದ ಮತ್ತೊಂದು ಹಿನ್ನಡೆಯಾಗಿದೆ. ಈ ಲಸಿಕೆಯ ಆರಂಭದ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳು ಕಂಡುಬಂದಿದ್ದವು.

 Gileads Remdesivir Is Not Recommended For Covid 19 Patients: WHO

ಡಬ್ಲ್ಯೂಎಚ್‌ಒದ ಮಾರ್ಗದರ್ಶಿ ಅಭಿವೃದ್ಧಿ ಸಮೂಹ (ಜಿಡಿಜಿ) ಸಮಿತಿ ಆಸ್ಪತ್ರೆಗೆ ದಾಖಲಾದ 7000ಕ್ಕೂ ಅಧಿಕ ರೋಗಿಗಳ ಮೇಲೆ ನಡೆಸಿದ ನಾಲ್ಕು ಅಂತಾರಾಷ್ಟ್ರೀಯ ಪ್ರಯೋಗಗಳಿಂದ ಪಡೆದ ಡೇಟಾಗಳನ್ನು ಪರಾಮರ್ಶನೆ ನಡೆಸಿ ಈ ಶಿಫಾರಸು ನೀಡಿದೆ. ರೆಮ್ಡೆಸಿವಿರ್ ಲಸಿಕೆಯನ್ನು ಪದೇ ಪದೇ ನೀಡಬೇಕಾಗುತ್ತದೆ. ಇದರಿಂದ ಅದು ದುಬಾರಿಯಾಗಲಿದೆ. ಜತೆಗೆ ನಿರ್ವಹಣೆಯೂ ಸಮಸ್ಯೆಯಾಗಲಿದೆ. ರೆಮ್ಡೆಸಿವಿರ್‌ನಿಂದ ಮರಣ ಪ್ರಮಾಣ ಇಳಿಕೆಯಾಗಿದೆ ಅಥವಾ ರೋಗಿಗಳಿಂದ ಮಹತ್ವದ ಫಲಿತಾಂಶ ದೊರಕಿದೆ ಎನ್ನುವುದಕ್ಕೆ ಅರ್ಥವಿಲ್ಲ ಎಂದು ಸಮಿತಿ ತಿಳಿಸಿದೆ.

English summary
WHO's panel said, Gilead's drug Remdesivir is not recommended for patients hospitalized with Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X