ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್: ಇಂಡೋನೇಷ್ಯಾದಲ್ಲಿ ಜನರು ಹೊರಬರದಂತೆ ದೆವ್ವಗಳ ಕಾವಲು

|
Google Oneindia Kannada News

ಕೇಪುಹ್, ಏಪ್ರಿಲ್ 14: ಕೊರೊನಾ ವೈರಸ್‌ ಎನ್ನುವುದು ಇಡೀ ವಿಶ್ವಕ್ಕೆ ಹರಡಿರುವ ಪಿಡುಗಾಗಿದೆ.

ಅದನ್ನು ತೊಲಗಿಸಲು ಎಲ್ಲಾ ದೇಶಗಳು ಲಾಕ್‌ಡೌನ್ ಎನ್ನುವ ಅಸ್ತ್ರವನ್ನು ಬಳಸಿದೆ. ಆದರೆ ಪೊಲೀಸರ ಕಣ್ತಪ್ಪಿಸಿ ಓಡಾಡುವ ಜನರ ಕಣ್ಗಾವಲಿಗೆ ಭೂತಗಳು ರಸ್ತೆಗಿಳಿದಿವೆ.
ರಾತ್ರಿ ಹೊತ್ತು ಇಂಡೋನೇಷ್ಯಾದ ಕೇಪುಹ್ ಪ್ರದೇಶದಲ್ಲಿ ದೆವ್ವಗಳು ಕಾವಲು ಕಾಯುತ್ತವೆ.

ದೆವ್ವಗಳನ್ನು ನೋಡಿಯಾದರೂ ಜನರು ಮನೆಯಿಂದ ಹೊರಗೆ ಬರುವುದಿಲ್ಲ ಎಂಬ ಕಲ್ಪನೆಯನ್ನು ಅಲ್ಲಿಯ ಜನರೇ ಮಾಡಿದ್ದಾರೆ.

Ghosts Patrol Streets To Keep Indonesians Indoors

ಆ ಪ್ರದೇಶದ ಯುವಕರ ಸಂಘವೊಂದು ಪೊಲೀಸರ ಜೊತೆ ಸೇರಿ ಈ ಆಲೋಚನೆ ಮಾಡಿದ್ದು, ಜನರು ಸಾಮಾನ್ಯವಾಗಿ ಭೂತಗಳು ಎಂದರೆ ಭಯ ಇರುತ್ತದೆ. ಒಂದೆರೆಡು ದಿನ ಈ ರೀತಿ ಜನರನ್ನು ಭಯಪಡಿಸಿದರೆ ಬಳಿಕ ಅವರು ಮನೆಯಿಂದ ಹೊರಬರುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನುವ ನಂಬಿಕೆ ಇದೆ ಎಂದು ಅಂಜರ್ ತಿಳಿಸಿದ್ದಾರೆ.

ಮೊದ ಮೊದಲು ದೆವ್ವಗಳ ರೀತಿ ಗೊಂಬೆಗಳನ್ನು ಮಾಡಿ ನಿಲ್ಲಿಸಲಾಗಿತ್ತು ಬಳಿಕ ಜನರು ಅದನ್ನು ತೆಗೆದುಕೊಂಡು ಹೋಗಿ ಇನ್ನಷ್ಟು ಮಂದಿಯನ್ನು ಹೆದರಿಸಲು ಬಳಕೆ ಮಾಡಿಕೊಂಡರು ಈಗ ಮನುಷ್ಯರೇ ಭೂತಗಳ ವೇಷ ಧರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ.

ಇಂಡೋನೇಷ್ಯಾದಲ್ಲಿ ಇದುವರೆಗೆ 4241 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.373 ಮಂದಿ ಮೃತಪಟ್ಟಿದ್ದಾರೆ.

English summary
Kepuh village in Indonesia has been haunted by ghosts recently - mysterious white figures jumping out at unsuspecting passersby, then gliding off under a full-moon sky.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X