ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿ 9 ವರ್ಷದ ಬಳಿಕ ಪ್ರತ್ಯಕ್ಷವಾಯ್ತು 'ದೆವ್ವದ ಹಡಗು'!

|
Google Oneindia Kannada News

ಯಾಂಗೊನ್, ಸೆಪ್ಟೆಂಬರ್ 10: ಒಂಬತ್ತು ವರ್ಷಗಳ ಹಿಂದೆ ಪೆಸಿಫಿಕ್ ಮಹಾಸಾಗರದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಹಡಗೊಂದು ಕಳೆದ ವಾರ ಹಿಂದೂ ಮಹಾಸಾಗರದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿದೆ.

ಎಲ್ಲೋ ಮಾಯವಾಗಿದ್ದ ಹಡಗು ಇನ್ನೆಲ್ಲೋ ಪತ್ತೆಯಾಗಿರುವುದು ಕಂಡು ಮ್ಯಾನ್ಮಾರ್‌ನ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಕಡಲಿನ ಆಳದಿಂದ ಎದ್ದುಬಂದಿರುವ ಹಡಗಿಗೆ 'ದೆವ್ವದ ಹಡಗು ಎಂದು ನಾಮಕರಣ ಮಾಡಿದ್ದಾರೆ.

ಹಿಂದೂಗಳಿಗೆ ದಬ್ಬಾಳಿಕೆ ಮಾಡುವ ಬಯಕೆಯಿಲ್ಲ: ಭಾಗವತ್ಹಿಂದೂಗಳಿಗೆ ದಬ್ಬಾಳಿಕೆ ಮಾಡುವ ಬಯಕೆಯಿಲ್ಲ: ಭಾಗವತ್

ಈ ಹಡಗು ಹಲವು ದೇಶಗಳ ತೀರಗಳನ್ನು ಸುತ್ತಿ, ಸಮುದ್ರಗಳನ್ನೂ ಬದಲಿಸಿ ಅಷ್ಟು ದೂರ ಸಾಗಿರುವುದು ಕೌತುಕಕ್ಕೆ ಕಾರಣವಾಗಿದೆ. ಅದರ ಸುತ್ತಲೂ ಅನೇಕ ಊಹಾಪೋಹಗಳು ಹುಟ್ಟಿಕೊಂಡಿವೆ. ಆದರೆ, ಅದರ ಅಸಲಿಯತ್ತು ಬೇರೆಯದೇ ಇದೆ. ಅದು ಎಲ್ಲಿಯ ಹಡಗು, ಹೇಗೆ ನಾಪತ್ತೆಯಾಯಿತು ಎಂದು ತಿಳಿಯಲು ಮುಂದೆ ಓದಿ.

2009ರಲ್ಲಿ ಕಾಣಿಸಿದ್ದ ಹಡಗು

2009ರಲ್ಲಿ ಕಾಣಿಸಿದ್ದ ಹಡಗು

ಈ ಹಡಗು 2009ರಲ್ಲಿ ತೈವಾನ್ ಕರಾವಳಿ ತೀರದಲ್ಲಿ ಕಾಣಿಸಿಕೊಂಡಿತ್ತು. ಕೊನೆಯ ಬಾರಿ ಅದು ಕಾಣಿಸಿದಾಗ ಅದರಲ್ಲಿ ಇಂಡೋನೇಷ್ಯಾದ ಧ್ವಜವಿತ್ತು. ತೈವಾನ್ ತೀರದಿಂದಲೂ ಮುಂದೆ ಸಾಗಿದ ಹಡಗು ಮತ್ತೆ ಪತ್ತೆಯಾಗಿದ್ದು ಒಂಬತ್ತು ವರ್ಷಗಳ ಬಳಿಕ. ಬೃಹತ್ ಸಾಗರದೊಳಗೆ ಹಡಗು ಕಳೆದುಹೋಗಿರಬಹುದು ಎಂದು ವಿವಿಧ ದೇಶಗಳ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಪತ್ತೆಯಾಯಿತು

ಸ್ಯಾಮ್ ರತುಲಂಗಿ ಪಿಬಿ 1600 ಎಂಬ ಹೆಸರಿನ ಈ ಹಡಗು ಆಗಸ್ಟ್ 30ರಂದು ದಕ್ಷಿಣ ಮ್ಯಾನ್ಮಾರ್‌ನ ಹಿಂದೂ ಮಹಾಸಾಗರದಲ್ಲಿ ಇದ್ದಕ್ಕಿದ್ದಂತೆ ಪತ್ತೆಯಾಗಿದೆ. ಮ್ಯಾನ್ಮಾರ್‌ನ ಥಾಮಾ ಸಿಯೆಟ್ಟಾ ಎಂಬ ಗ್ರಾಮದ ಮೀನುಗಾರರ ಕಣ್ಣಿಗೆ, ಕರಾವಳಿ ತೀರದಿಂದ ಸುಮಾರು 11 ಕಿ.ಮೀ ದೂರದಲ್ಲಿ ಮರಳಿನ ದಿಬ್ಬದ ಬಳಿ ಹಡಗು ಕಾಣಿಸಿಕೊಂಡಿದೆ.

ಭಾರತ, ಚೀನಾದಂಥ ದೇಶಗಳಿಗೆ ಅಮೆರಿಕ ಸಹಾಯಧನ ನೀಡಲ್ಲ: ಟ್ರಂಪ್ಭಾರತ, ಚೀನಾದಂಥ ದೇಶಗಳಿಗೆ ಅಮೆರಿಕ ಸಹಾಯಧನ ನೀಡಲ್ಲ: ಟ್ರಂಪ್

ಹೇಗೆ ಬಂತು ಎಂಬುದೇ ಯಕ್ಷ ಪ್ರಶ್ನೆ

ಹೇಗೆ ಬಂತು ಎಂಬುದೇ ಯಕ್ಷ ಪ್ರಶ್ನೆ

ಹಡಗಿನ ಒಳಗೆ ಪ್ರವೇಶಿಸಿದ ಮೀನುಗಾರರಿಗೆ ಒಳಗೆ ಯಾರೂ ಕಂಡುಬಂದಿಲ್ಲ. ಇಡೀ ಹಡಗು ಖಾಲಿಯಾಗಿತ್ತು. ಅವರು ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಮ್ಯಾನ್ಮಾರ್ ನೌಕಾದಳ ಹಡಗನ್ನು ತೀರಕ್ಕೆ ತಂದು ಪರಿಶೀಲನೆ ನಡೆಸಿತು.

ಈ ಹಡಗಿನಲ್ಲಿ ಯಾವ ಸಿಬ್ಬಂದಿಯೂ ಇಲ್ಲ, ವಸ್ತುವೂ ಪತ್ತೆಯಾಗಿಲ್ಲ. ಇಷ್ಟು ದೊಡ್ಡ ಹಡಗು ನಮ್ಮ ಜಲಪ್ರದೇಶದೊಳಗೆ ಹೇಗೆ ಪ್ರವೇಶಿಸಿತು ಎನ್ನುವುದು ಅಚ್ಚರಿ ಮೂಡಿಸುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಸಂಚಾರಕ್ಕೆ ಯೋಗ್ಯ

ಸಂಚಾರಕ್ಕೆ ಯೋಗ್ಯ

ಈ ದೆವ್ವದ ಹಡಗು 2001ರಲ್ಲಿ ನಿರ್ಮಿತವಾದದ್ದು. 177.35 ಮೀಟರ್ ಉದ್ದ 27.91 ಮೀಟರ್ ಅಗಲದ ಈ ಕಂಟೇನರ್ 25,510 ತೂಕ ಹೊಂದಿದೆ. ವಿಶೇಷವೆಂದರೆ ಈ ಹಡಗು ಈಗಲೂ ಸಂಚಾರಕ್ಕೆ ಯೋಗ್ಯವಾದ ಸ್ಥಿತಿಯಲ್ಲಿದೆ.

ನಾಸಾದ ಕ್ಯೂರಿಯಾಸಿಟಿ ಕ್ಲಿಕ್ಕಿಸಿಕೊಂಡ ಮನೋಹರ 'ಪನೋರಮಾ ಸೆಲ್ಫಿನಾಸಾದ ಕ್ಯೂರಿಯಾಸಿಟಿ ಕ್ಲಿಕ್ಕಿಸಿಕೊಂಡ ಮನೋಹರ 'ಪನೋರಮಾ ಸೆಲ್ಫಿ

Array

ಬಾಂಗ್ಲಾದೇಶಕ್ಕೆ ಹೊರಟಿದ್ದ ಹಡಗು

ತನಿಖೆ ನಡೆಸಿದ ಅಧಿಕಾರಿಗಳಿಗೆ ಉತ್ತರವೂ ಸಿಕ್ಕಿದೆ. ಈ ಹಡಗು ಇಂಡೋನೇಷ್ಯಾದ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದು. ಈ ಹಡಗನ್ನು ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿರುವ ಹಡಗು ಕಾರ್ಖಾನೆಗೆ ಗುಜರಿಗೆ ಹಾಕುವ ಸಲುವಾಗಿ ಸಾಗಿಸಲಾಗುತ್ತಿತ್ತು.

ಆಗಸ್ಟ್ 13ರಂದು ಜಕಾರ್ತದಿಂದ ಹೊರಟಿದ್ದ ಈ ಹಡಗಿನಲ್ಲಿ 13 ಸಿಬ್ಬಂದಿಯೂ ಇದ್ದರು. ಯಾಂಗೋನ್ ಸಮೀಪ ಬಂದಾಗ ಮಳೆ ಗಾಳಿಯಿಂದಾಗಿ ಹಡಗಿನ ಕೇಬಲ್‌ಗಳು ತುಂಡಾದವು. ಹೀಗಾಗಿ ಅವರು ಹಡಗನ್ನು ಅಲ್ಲಿಯೇ ಬಿಟ್ಟು ಬೇರೆ ಹಡಗಿನ ಮೂಲಕ ಸ್ವದೇಶಕ್ಕೆ ಮರಳಿದ್ದರು. ಈ ಹಡಗನ್ನು ವಾಪಸ್ ತರಿಸಿಕೊಳ್ಳುವ ಬಗ್ಗೆ ಇಂಡೋನೇಷ್ಯಾ ಸರ್ಕಾರ ಮ್ಯಾನ್ಮಾರ್‌ ಜತೆ ಮಾತುಕತೆ ನಡೆಸುತ್ತಿದೆ.

ದೋಣಿ, ಹಡಗು ಸಿಗುವುದು ಹೊಸತಲ್ಲ

ದೋಣಿ, ಹಡಗು ಸಿಗುವುದು ಹೊಸತಲ್ಲ

ವಿಶೇಷವೆಂದರೆ, ಏಷ್ಯಾ ಕಡಲುಗಳಲ್ಲಿ ಅನೇಕ ದೋಣಿಗಳು ಮತ್ತು ಹಡಗುಗಳು ಪತ್ತೆಯಾಗುತ್ತಿರುತ್ತವೆ, ಹೆಚ್ಚಿನವುಗಳಲ್ಲಿ ಯಾರೂ ಪತ್ತೆಯಾಗುವುದಿಲ್ಲ. ಕೆಲವೊಂದರಲ್ಲಿ ಮೃತದೇಹಗಳೂ ಪತ್ತೆಯಾಗುತ್ತವೆ. 2015ರಲ್ಲಿ ಜಪಾನ್ ಸಮುದ್ರದಲ್ಲಿ 11 ಮರದ ದೋಣಿಗಳು ಕಂಡುಬಂದಿದ್ದವು. ಕೆಲವು ಖಾಲಿಯಾಗಿದ್ದವು ಮತ್ತು ಹಾನಿಗೊಳಗಾಗಿದ್ದವು. ಇನ್ನು ಕೆಲವು ದೋಣಿಗಳಲ್ಲಿ ಸುಮಾರು 20 ಅಸ್ಥಿಪಂಜರಗಳು ಸಿಕ್ಕಿದ್ದವು.

English summary
A ship that was lost in 2009 in Taiwan found in Indian ocean of Myanmar coast after 9 years. People are calling it a Ghost Ship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X