ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಮಾರಿಯುಪೋಲ್ ರಷ್ಯಾ ವಶಕ್ಕೆ; ಪುಟಿನ್ ಘೋಷಣೆ

|
Google Oneindia Kannada News

ಮಾಸ್ಕೋ, ಏಪ್ರಿಲ್ 21; ಉಕ್ರೇನ್‌ನ ಈಶಾನ್ಯ ಭಾಗದಲ್ಲಿರುವ ಮಾರಿಯುಪೋಲ್ ನಗರವನ್ನು ರಷ್ಯಾ ಪಡೆಗಳು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಕಳೆದ ಮೂರು ದಿನಗಳಿಂದ ರಷ್ಯಾ ಪಡೆಗಳು ನಗರವನ್ನು ಸುತ್ತುವರೆದಿದ್ದವು.

ಗುರುವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಕುರಿತು ಘೋಷಣೆ ಮಾಡಿದ್ದಾರೆ. ಮಾರಿಯುಪೋಲ್ ನಗರವನ್ನು ವಶಪಸಿಕೊಳ್ಳುವ ಪ್ರಯತ್ನ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ರಷ್ಯಾ ಅಧ್ಯಕ್ಷರನ್ನು ಮೊಸಳೆಗೆ ಹೋಲಿಸಿದ ಬ್ರಿಟನ್ ಪ್ರಧಾನಿ ರಷ್ಯಾ ಅಧ್ಯಕ್ಷರನ್ನು ಮೊಸಳೆಗೆ ಹೋಲಿಸಿದ ಬ್ರಿಟನ್ ಪ್ರಧಾನಿ

Getting Control Over Mariupol Is Success Says Vladimir Putin

ಮಂಗಳವಾರದಿಂದ ಉಕ್ರೇನ್‌ ಸೈನಿಕರಿಗೆ ಶರಣಾಗುವಂತೆ ಸೂಚನೆಯನ್ನು ನೀಡುತ್ತಿದ್ದ ರಷ್ಯಾ ಪಡೆಗಳು ಮಾರಿಯುಪೋಲ್‌ ನಗರದ ಸುತ್ತಲೂ ಹೆಚ್ಚಿನ ಪಡೆಗಳನ್ನು ನಿಯೋಜನೆ ಮಾಡಿತ್ತು.

ತಕ್ಷಣ ಶಸ್ತ್ರಾಸ್ತ್ರ ಕೆಳಗಿಡಿ ಉಕ್ರೇನ್ ಸೈನಿಕರಿಗೆ ರಷ್ಯಾ ಕರೆ ತಕ್ಷಣ ಶಸ್ತ್ರಾಸ್ತ್ರ ಕೆಳಗಿಡಿ ಉಕ್ರೇನ್ ಸೈನಿಕರಿಗೆ ರಷ್ಯಾ ಕರೆ

ಮಾರಿಯುಪೋಲ್ ಉಕ್ರೇನ್‌ನ ಬಂದರು ನಗರವಾಗಿದೆ. ಅಲ್ಲದೇ ಇಲ್ಲಿ ದೇಶದ ದೊಡ್ಡ ಉಕ್ಕು ಕೈಗಾರಿಕಾ ಘಟಕವಿದೆ. ನಗರದಿಂದ ಜನರನ್ನು ಸ್ಥಳಾಂತರ ಮಾಡುವ ನಾಲ್ಕು ಬಸ್‌ಗಳು ಗುರುವಾರ ತೆರಳಿವೆ.

ಈಸ್ಟರ್ ಸಂದೇಶದಲ್ಲಿ ರಷ್ಯಾ-ಉಕ್ರೇನ್ ಯುದ್ಧವನ್ನು ಖಂಡಿಸಿದ ಪೋಪ್ಈಸ್ಟರ್ ಸಂದೇಶದಲ್ಲಿ ರಷ್ಯಾ-ಉಕ್ರೇನ್ ಯುದ್ಧವನ್ನು ಖಂಡಿಸಿದ ಪೋಪ್

ಕಳೆದ ಎರಡು ತಿಂಗಳಿನಿಂದ ಮಾರಿಯುಪೋಲ್ ನಗರವನ್ನು ವಶಕ್ಕೆ ಪಡೆಯಲು ರಷ್ಯಾ ಪಡೆಗಳು ಪ್ರಯತ್ನ ನಡೆಸುತ್ತಿದ್ದವು. ಉಕ್ರೇನ್ ಸೈನಿಕರಿಗೆ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ ಎಚ್ಚರಿಕೆ ನೀಡಲಾಗಿತ್ತು.

ಮಾರಿಯುಪೋಲ್‌ನಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರ ಮಾಡಲು ರಷ್ಯಾ ಮಾರ್ಚ್ ತಿಂಗಳಿನಲ್ಲಿಯೇ ಮಾನವೀಯ ಕಾರಿಡಾರ್ ನಿರ್ಮಾಣ ಮಾಡಲು ಅವಕಾಶ ನೀಡಿತ್ತು. ನಗರದಲ್ಲಿರುವ ಉಕ್ಕು ತಯಾರಿಕಾ ಘಟಕದ ಮೇಲೆ ರಷ್ಯಾ ಪಡೆ ಮುತ್ತಿಗೆ ಹಾಕಲಿದೆ.

English summary
Russian president Vladimir Putin said that getting control over Ukraine's Mariupol is a success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X