ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ದೇಶದಲ್ಲಿದೆ ಲವ್ ಮಾಡಲು ಲೀವ್; ಪ್ರೀತಿ ಮಾಡಿ ಎನ್ನುತ್ತಿದೆ ಈ ದೇಶ

|
Google Oneindia Kannada News

ಬೀಜಿಂಗ್, ಅಕ್ಟೋಬರ್ 17: ನಮ್ಮ ದೇಶದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಹಲವಾರು ಸಲವತ್ತುಗಳಿವೆ. ಅದ್ರಲ್ಲೂ ಹೆರಿಗೆ, ಅನಾರೋಗ್ಯ, ಹಬ್ಬ ಹೀಗೆ ವಿಶೇಷ ರಜೆಗಳನ್ನು ನೀಡಲಾಗುತ್ತದೆ. ಆದರೆ ಪ್ರೀತಿ ಮಾಡಲು ರಜೆ ನೀಡುವ ಕಂಪನಿಯನ್ನು ನೀವು ಎಲ್ಲಾದರೂ ನೋಡಿದ್ದೀರಾ? ನೋಡಿಲ್ಲ ಅಂದ್ರೆ ಆ ಕಂಪನಿ ಬಗ್ಗೆ ನಾವು ನಿಮಗೆ ಹೇಳ್ತೀವಿ ಕೇಳಿ.

ಅಭಿವೃದ್ಧಿಯ ಓಟದಲ್ಲಿ ಚೀನಾ ಮುಂಚೂಣಿಯಲ್ಲಿರುವ ದೇಶ. ಹೀಗಾಗಿಯೇ ಏನೋ ಈ ದೇಶದಲ್ಲಿ ಪ್ರೀತಿ ಮಾಡಲು ಜನರಿಗೆ ಸಮಯವೇ ಇಲ್ಲವೆಂಬಂತೆ ಕಾಣುತ್ತೆ. ಒಂದೆಡೆ ಯುವತಿಯರು ಮದುವೆಯಂತಹ ಸಂಬಂಧದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅಲ್ಲಿನ ಸರ್ಕಾರವು ಯುವತಿಯರನ್ನು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುತ್ತಿದೆ. ಮಾತ್ರವಲ್ಲದೆ ಚೀನೀ ಮಹಿಳೆಯರಿಗೆ 'ಲವ್ ಲೀವ್' ಕೂಡ ನೀಡಿರುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ.

ನಿಜವಾದ ಪ್ರೀತಿಯನ್ನು ಕಂಡುಕೊಳ್ಳಿ: ಚೀನಾದ ಮಹಿಳೆಯರು ಮದುವೆಯಾಗಲು ಬಯಸುವುದಿಲ್ಲ. ಇದರ ಹಿಂದಿರುವ ಒಂದು ಪ್ರಮುಖ ಕಾರಣವೆಂದರೆ ರನ್ ಆಫ್ ದಿ ಮಿಲ್. ಚೀನಾ ಯುವತಿಯರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ಸಮಯ ಸಿಗುತ್ತಿಲ್ಲ. ಈ ಸಮಸ್ಯೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದರೆ ಅಲ್ಲಿನ ಕಚೇರಿಗಳಿಂದ ಮಹಿಳೆಯರಿಗೆ ರಜೆ ನೀಡಲು ವಿಶೇಷ ವ್ಯವಸ್ಥೆಯನ್ನು ಆರಂಭಿಸಲಾಗುವಷ್ಟು. ಅದುವೇ ಲವ್ ಲೀವ್.

ರಜೆಯ ಏಕೈಕ ಷರತ್ತು

ರಜೆಯ ಏಕೈಕ ಷರತ್ತು

ಈ ವ್ಯವಸ್ಥೆಯು 2019 ರಲ್ಲಿ ಬೆಳಕಿಗೆ ಬಂದಿತ್ತು. ಆದರೆ ಇಂದಿಗೂ ಮಹಿಳೆಯರು ಅನೇಕ ಕಚೇರಿಗಳಲ್ಲಿ ಪ್ರೇಮ ರಜೆಗಾಗಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಇರುವ ಏಕೈಕ ಷರತ್ತು ಎಂದರೆ ಮಹಿಳಾ ಉದ್ಯೋಗಿಯಾಗಿರಬೇಕು ಮತ್ತು ವಯಸ್ಸು ಸುಮಾರು 30 ಇರಬೇಕು.

ಶಾಲೆಗಳಲ್ಲೂ ಲವ್ ಲೀವ್ ಆರಂಭ

ಶಾಲೆಗಳಲ್ಲೂ ಲವ್ ಲೀವ್ ಆರಂಭ

ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಉಲ್ಲೇಖಿಸಿದ ಬಿಬಿಸಿ ವರದಿಯು ಪೂರ್ವ ಚೀನಾದ ಹ್ಯಾಂಗ್‌ಕಾಂಗ್ ದಲ್ಲಿರುವ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ 'ಡೇಟಿಂಗ್ ರಜೆ' ನೀಡಿವೆ ಎಂದು ಹೇಳಿದೆ. 2019 ರಲ್ಲಿ ಆರಂಭವಾದ ಈ ವ್ಯವಸ್ಥೆಯು ಇನ್ನೂ ಅನೇಕ ಕಂಪನಿಗಳು ಮತ್ತು ಶಾಲೆಗಳಲ್ಲಿ ಒಂಟಿ ಮಹಿಳೆಯರಿಗೆ ಅನ್ವಯಿಸುತ್ತದೆ. ಈ ರಜಾದಿನಗಳನ್ನು 'ಪ್ರೀತಿ-ರಜೆಗಳು' ಎಂದು ಕರೆಯಲಾಗುತ್ತದೆ.

ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಬೇಕಾಯಿತು?

ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಬೇಕಾಯಿತು?

ವಾಸ್ತವವಾಗಿ ಕಳೆದ ಕೆಲವು ವರ್ಷಗಳಲ್ಲಿ ಚೀನಾದಲ್ಲಿ ಒಂಟಿಯಾಗಿರುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಜನರು ತಮ್ಮ ವೃತ್ತಿಜೀವನವನ್ನು ಮುಂದುವರಿಸುವ ಉದ್ದೇಶದಿಂದ ಮದುವೆಗಳಿಂದ ದೂರವಿರಲು ಪ್ರಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈಗ ಅಲ್ಲಿನ ಸರ್ಕಾರ ಕೂಡ ಜನರು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಬಯಸುತ್ತದೆ. ಅದಕ್ಕಾಗಿಯೇ ಮಹಿಳೆಯರಿಗೆ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ರಜಾದಿನಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.

ಈ ಭಯ ಸರ್ಕಾರವನ್ನು ಕಾಡುತ್ತಿದೆಯೇ?

ಈ ಭಯ ಸರ್ಕಾರವನ್ನು ಕಾಡುತ್ತಿದೆಯೇ?

ಚೀನಾದ ಸಾಮಾಜಿಕ ವಿಜ್ಞಾನಗಳ ಅಕಾಡೆಮಿಯ ಯೋಜನೆಯ ವರದಿಯ ಪ್ರಕಾರ, ದೇಶದಲ್ಲಿ ಶೀಘ್ರ ಜನಸಂಖ್ಯೆಯ ಕುಸಿತದಿಂದಾಗಿ ಮುಂದಿನ 50 ವರ್ಷಗಳಲ್ಲಿ ಚೀನಾದ ಜನಸಂಖ್ಯೆಯು 140 ದಶಲಕ್ಷದಿಂದ 120 ದಶಲಕ್ಷಕ್ಕೆ ಇಳಿಯುತ್ತದೆ. ಈ ಕಳವಳದಿಂದಾಗಿ ಮಹಿಳೆಯರಿಗೆ ಆಫೀಸುಗಳಲ್ಲಿ ಇಂತಹ ರಜೆ ನೀಡಲಾಗುತ್ತಿದೆ. ಈ ರೀತಿಯಾಗಿ ಮಹಿಳೆಯರು ಮದುವೆಯಾಗುವಂತೆ ಮತ್ತು ಮಕ್ಕಳನ್ನು ಮಾಡಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.

English summary
Get love leave In This Country. Do you know why? Really, it's amazing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X