ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಹುಗಾರಿಕೆ ನಡೆಸಿದ್ದಕ್ಕಾಗಿ ಭಾರತೀಯ ದಂಪತಿಗಳಿಗೆ ಶಿಕ್ಷೆ ನೀಡಿದ ಜರ್ಮನಿ

|
Google Oneindia Kannada News

ಭಾರತೀಯ ವಿದೇಶಿ ಗುಪ್ತಚರ ಸೇವೆಗಾಗಿ ಕಾಶ್ಮೀರಿ ಹಾಗೂ ಸಿಖ್ ಗುಂಪುಗಳ ಮೇಲೆ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಭಾರತೀಯ ದಂಪತಿಗಳಿಗೆ ಜರ್ಮನ್ ನ್ಯಾಯಾಲಯವು ಶಿಕ್ಷೆ ನೀಡಿದೆ. ಬೇಹುಗಾರಿಕೆ ನಡೆಸಿದ್ದನ್ನು ಭಾರತೀಯ ದಂಪತಿಗಳು ಒಪ್ಪಿಕೊಂಡಿದ್ದರಿಂದ ಶಿಕ್ಷೆ ವಿಧಿಸಿದೆ.

ಮನಮೋಹನ್.ಎಸ್ ಮತ್ತು ಅವರ ಪತ್ನಿ ಕನ್ವಾಲ್ ಜಿತ್.ಕೆ ಎಂದು ಹೆಸರಿದೆ ಎನ್ನಲಾದ ದಂಪತಿಗೆ ಮಾಹಿತಿ ನೀಡಲು 7000 ಯುರೋ(6000 ಪೌಂಡ್) ಅದಕ್ಕಿಂತ ಹೆಚ್ಚಿನ ಹಣವನ್ನು ನೀಡಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ.

ಜಮ್ಮು-ಕಾಶ್ಮೀರದ ಈ ಸ್ಥಿತಿ ಸುಸ್ಥಿರವಲ್ಲ: ಆಂಜೆಲಾ ಮರ್ಕೆಲ್ಜಮ್ಮು-ಕಾಶ್ಮೀರದ ಈ ಸ್ಥಿತಿ ಸುಸ್ಥಿರವಲ್ಲ: ಆಂಜೆಲಾ ಮರ್ಕೆಲ್

ಕಾಶ್ಮೀರಿ ಹಾಗೂ ಸಿಖ್ ಗುಂಪಿನ ಮೇಲೆ ಗೂಢಚರ್ಯೆ ನಡೆಸಿದ್ದಕ್ಕಾಗಿ ಮನಮೋಹನೆ ಎಸ್ ಅವರಿಗೆ 18 ತಿಂಗಳುಗಳ ಕಾಲ ಅಮಾನತು ಮತ್ತು ಜೈಲು ಶಿಕ್ಷೆ, ಅವರ ಪತ್ನಿಗೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗಿದೆ. ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ವಿವಾದಿತ ಪ್ರದೇಶವಾಗಿದೆ.

Germany Sentenced Indian Couple For Spying

ಈಗಾಗಲೇ ಭಾರತ ಮತ್ತು ಪಾಕಿಸ್ತಾನಗಳು ಪರಮಾಣು ಶಕ್ತಿಯನ್ನು ಹೊಂದಿವೆ. ಶಸ್ತ್ರಸಜ್ಜಿತ ಪ್ರತಿಸ್ಪರ್ಧಿಗಳು ಹಿಮಾಲಯ ಪ್ರದೇಶದಲ್ಲಿ ಎರಡು ಯುದ್ದಗಳನ್ನು ಮಾಡಿದ್ದಾರೆ.

1980ರ ದಶಕದಲ್ಲಿ ಸಖ್ ದಂಗೆಯಾದಾಗ ಅದನ್ನು ಭಾರತ ಹತ್ತಿಕ್ಕಿತ್ತು. ಅಂದಿನಿಂದಲೂ ಆ ಸಮುದಾಯದಲ್ಲಿನ ಉಗ್ರಗಾಮಿತ್ವದ ಬಗ್ಗೆ ಎಚ್ಚರವಾಗಿಯೇ ಇದೆ.

ಜರ್ಮನಿಯ ಹಾಲೆ ನಗರದಲ್ಲಿ ಗುಂಡು ಹಾರಿಸಿ ಇಬ್ಬರ ಹತ್ಯೆಜರ್ಮನಿಯ ಹಾಲೆ ನಗರದಲ್ಲಿ ಗುಂಡು ಹಾರಿಸಿ ಇಬ್ಬರ ಹತ್ಯೆ

21 ವರ್ಷದ ಮನಮೋಹನ್.ಎಸ್ ಅವರನ್ನು ಭಾರತದ ಪ್ರಮುಖ ಬಾಹ್ಯ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) 2015 ರಲ್ಲಿ ಇವರನ್ನು ನೇಮಕಮಾಡಿಕೊಂಡಿತ್ತು. ಕಾಶ್ಮೀರ ವಿರೋಧಿ ಗುಂಪುಗಳ ಮೇಲೆ ಬೇಹುಗಾರಿಕೆ ಮಾಡಲು ಹೇಳಿದೆ ಎಂದು ಫ್ರಾಂಕ್ ಫರ್ಟ್ ನಲ್ಲಿರುವ ನ್ಯಾಯಾಲಯ ತಿಳಿಸಿದೆ.

"ಜರ್ಮನಿಯ ಕಲೋನ್ ಮತ್ತು ಫ್ರಾಂಕ್ ಫರ್ಟ್ ನಲ್ಲಿರುವ ಸಿಖ್ ದೇವಸ್ಥಾನಗಳ ಆಂತರಿಕ ವ್ಯವಹಾರಗಳ ಬಗ್ಗೆ ಮತ್ತು ಸಖ್ ಸಮುದಾಯದ ಪ್ರತಿಭಟನಾ ಘಟನೆಗಳ ಬಗ್ಗೆ ವರದಿ ತಯಾರಿಸಿದ್ದಾರೆ" ಎಂದು ನ್ಯಾಯಾಲಯ ಹೇಳಿದೆ.

ಮನಮೋಹನ್ ಅವರು 2017 ರ ಜುಲೈನಲ್ಲಿ ಭಾರತೀಯ ಗುಪ್ತಚರ ಅಧಿಕಾರಿಯೊಂದಿಗೆ ಆಗಾಗ ಸಭೆಗಳಲ್ಲಿ ಪಾಲ್ಗೊಂಡಿದ್ದರು, ಇವರು ನೀಡಿದ ಮಾಹಿತಿಗಾಗಿ ತಿಂಗಳಿಗೆ 200 ಯೂರೋಗಳಷ್ಟು ಹಣ ನೀಡಿದ್ದರು. ಇವರ ಜೊತೆ ಕನ್ವಾಲ್ ಜಿತ್ ಅವರು ಸಭೆಗಳಿಗೆ ಹಾಜರಾಗಿದ್ದರು ಎಂದು ಕೋರ್ಟ್ ಹೇಳಿದೆ.

ಅಮಾನತು ಶಿಕ್ಷೆಯ ಜೊತೆಗೆ ಮನಮೋಹನ್ ಅವರು ಚಾರಿಟಬಲ್ ಸಂಸ್ಥೆಗೆ 1,500 ಯೂರೋ ಪಾವತಿಸಲು ಆದೇಶಿಸಲಾಗಿದೆ. ಪತಿಗೆ ಸಹಾಯ ಮಾಡಿದ ತಪ್ಪಿಗಾಗಿ ಕನ್ವಾಲ್ ಜಿತ್ ಅವರಿಗೆ 180 ದಿನಗಳಿಗೆ ಸಮಾನವಾದ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಇಬ್ಬರಿಗೂ ಒಂದು ವಾರ ಕಾಲಾವಕಾಶ ನೀಡಲಾಗಿದೆ.

English summary
A German court has sentenced an Indian couple after they admitted to spying on Kashmiri and Sikh groups for the Indian foreign intelligence service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X